ಸಿಂಗಾಪುರಕ್ಕೆ ಹೊಸ ವಿಹಾರ ಹಡಗು ಪರಿಚಯಿಸುತ್ತಿರುವ ರಾಯಲ್ ಕ್ಯಾರಿಬಿಯನ್

ಬೆಂಗಳೂರು,  ಆ 21           ರಾಯಲ್ ಕ್ಯಾರಿಬಿಯನ್ ಇಂಟರ್ ನ್ಯಾಷನಲ್ ಸಂಸ್ಥೆಯ ಭಾರತದ ಪ್ರತಿನಿಧಿಯಾದ ಟೈರೂನ್ ಮಾರ್ಕೆಟಿಂಗ್ ಸಂಸ್ಥೆಯು, ಸಿಂಗಾಪುರ್ ಗೆ ಪರಿಚಯಿಸಿರುವ ವಿಹಾರ ಹಡಗಿನ ಬಗ್ಗೆ ಪ್ರಚಾರ ಕೈಗೊಳ್ಳಲು ರೋಡ್ ಶೋ ನಡೆಸುತ್ತಿದೆ.  ಇದರ ಭಾಗವಾಗಿ ಟೈರೂನ್ ಸಂಸ್ಥೆಯು ಬೆಂಗಳೂರಿನ ಹಾರ್ಡ್ರಾಕ್ ಕಫೆಯಲ್ಲಿ ರೋಡ್ ಶೋ ಹಮ್ಮಿಕೊಂಡಿತ್ತು. ವಾಯೇಜರ್ ಆಫ್ ದಿ ಸೀಸ್ ಮತ್ತು ಕ್ವಾಂಟಮ್ ಆಫ್ ದಿ ಸೀಸ್ ಎನ್ನುವ ಎರಡು ಹೊಸ ವಿಹಾರ ಹಡಗು ಸೇವೆಯನ್ನು ಪರಿಚಯಿಸುತ್ತಿದೆ. ಬೆಂಗಳೂರು ಹೊರತು ಪಡಿಸಿ ರಾಯ್ ಪುರ, ಔರಂಗಾಬಾದ್, ಚೆನೈ, ದೆಹಲಿ, ಪುಣೆ, ಚಂಡೀಘಡ, ನಾಗ್ಪುರ, ಅಮೃತ್ ಸರ್, ಕೊಲ್ಕತ್ತಾ, ಹೈದರಾಬಾದ್, ಮುಂಬೈ ಹಾಗೂ ಜೈಪುರದಲ್ಲಿ ಇದೇ ರೀತಿಯ ರೋಡ್ ಶೋ ಹಮ್ಮಿಕೊಳ್ಳಲಿದೆ. ಸುಮಾರು 97 ದಶಲಕ್ಷ ಅಮೆರಿಕನ್ ಡಾಲರ್ ಖರ್ಚು ಮಾಡಿ 'ವಾಯೇಜರ್ ಆಫ್ ದಿ ಸೀಸ್' ವಿಹಾರ ಹಡಗನ್ನು ಮರು ನಿರ್ಮಿಸಲಾಗಿದೆ. ಹೈ-ಒಕ್ಟೇನ್ ಅಡ್ವೆಂಜರ್ ರೈಡ್ ವೈಶಿಷ್ಟ್ಯವನ್ನು ಈ ಹಡಗು ಒಳಗೊಂಡಿದೆ. ಕುಟುಂಬ ಕೇಂದ್ರೀಕೃತ ಮನರಂಜನೆಗಳಾದ ಬ್ಯಾಟಲ್ ಫಾರ್ ಪ್ಲಾನೆಟ್ ಝಡ್ ಲೇಜರ್ ಟ್ಯಾಗ್ ಗೇಮ್ ಕೂಡ ಈ ಹಡಗಿನಲ್ಲಿ ಪರಿಚಯಿಸಲಾಗಿದೆ. ಜತೆಗೆ ದಿ ಫ್ಲೊ ರೈಡರ್ ಸರ್ಫ್ ಸೈಮುಲೇಟರ್, ರಾಕ್ ಕ್ಲೈಮಿಂಗ್ ವಾಲ್ ಮತ್ತು ಮಿನಿ ಗಾಲ್ಫ್ ಈ ಹಡಗಿನ ವಿಶಿಷ್ಟಗಳಾಗಿವೆ. ಸ್ಪಾ ಹಾಗೂ ಫಿಟ್ ನೆಸ್ ಸೆಂಟರ್ ಕೂಡ ಒಳಗೊಂಡಿದೆ. ಭೋಜನ ಪ್ರಿಯರಿಗೆ ಬಹು ಆಯ್ಕೆಗಳನ್ನು ಈ ಹಡಗು ಒದಗಿಸುತ್ತದೆ.  ಸೌತ್ ಪೆಸಿಪಿಕ್ ನಿಂದ ಅಕ್ಟೋಬರ್ 21ರಿಂದ ನವೆಂಬರ್ 11ರವರೆಗೆ 3 ರಾತ್ರಿ ಮತ್ತು 4 ರಾತ್ರಿ ಹಡಗುಗಳು ಸಿಂಗಾಪುರ್ ನಿಂದ ಮಲೇಷ್ಯಾಕ್ಕೆ ಮತ್ತು ಥೈಲ್ಯಾಂಡ್ ಗೆ ಸಂಚರಿಸಲಿವೆ. ಮೇ 8ರಿಂದ ಜೂನ್ 2020 ರ ಬೇಸಿಗೆಯಲ್ಲಿ ಮರಳಿ ಬರಲಿವೆ 18 ಡೆಕ್ ಗಳನ್ನು ಹೊಂದಿರುವ ಕ್ವಾಂಟಮ್ ಆಫ್ ದಿ ಸೀಸ್ ಹಡಗಿನಲ್ಲಿ 4,900 ಪ್ರಯಾಣಿಕರು ಪ್ರಯಾಣಿಸಬಹುದು. ಮಲೇಶೀಯಾ ಮತ್ತು ಥೈಲ್ಯಾಂಡ್ ಮಾರ್ಗವಾಗಿ ನವೆಂಬರ್ 21, 2019ರಿಂದ ಏಪ್ರಿಲ್ 26, 2020 ಸಂಚಾರ ಪ್ರಾರಂಭಿಸಲಿದೆ.  4 ರಾತ್ರಿ ಮಲೇಶಿಯಾಕ್ಕೆ ಅಥವಾ ಫೂಕಟ್ ಗೆ, 5 ರಾತ್ರಿ ಕೌಲಲಾಂಪೂರ್, ಪೆನಂಗ್ ಮತ್ತು ಪೂಕೆಟ್, 7 ರಾತ್ರಿ ಕೌಲಲಾಂಪೂರ್ ಪೆನಂಗ್ ಮತ್ತು ಫೂಕೆಟ್ ಮತ್ತು 7 ರಾತ್ರಿ ಬ್ಯಾಂಕಾಂಗ್ ಮತ್ತು ಹೋ ಚಿ ಮಿನ್ಹ್ ಸಿಟಿಗೆ ಪ್ರಯಾಣ ಇರಲಿದೆ. ಸಮುದ್ರ ಮಟ್ಟಕ್ಕಿಂತ 300 ಅಡಿ ಎತ್ತರದ ನಾರ್ತ್ ಸ್ಟಾರ್ ವಿಕ್ಷಣ ಸ್ಥಾವರ ಈ ಹಡಗಿನ ಆರ್ಕಷಣೆ. ಬಾರ್ ನಲ್ಲಿ ರೋಬೋಟ್ಸ್ ಗಳು ಸೇವೆಯನ್ನು ಒದಗಿಸುತ್ತವೆ. ಸ್ಕೈ ಡೈಯಿಂಗ್, ಸರ್ಫರಿಂಗ್  ಜತೆಗೆ ಬಾಸ್ಕೆಟ್ ಬಾಲ್ ಕೋರ್ಟ, ರೋಲರ್ ಸ್ಕೇಟಿಂಗ್ ಬಂಪರ್ ಕಾರ್ಸ್ ಒಳಾಂಗಣ ಕ್ರೀಡೆಗಳು ಕೂಡ ಇವೆ. ಭಕ್ಷ ಪ್ರಿಯರಿಗಾಗಿ ವಿವಿಧ ಖಾದ್ಯಗಳ ವ್ಯವಸ್ಥೆ ಕೂಡ ಇದೆ. ಸೆಲಿಬ್ರಿಟಿ ಶೆಫ್ ರನ್ವಿರ್ ಬ್ರಾರ್ ಈ ಹಗಡಿನಲ್ಲಿ ಇದ್ದು ಅವರ ಕೈ ರುಚಿಯನ್ನು ನೋಡಬಹುದು. ಭಾರತೀಯರ ಆಹಾರದ ಅನುಗುಣವಾಗಿ ಫುಡ್ ಮೆನುವನ್ನು ತಯಾರಿಸಲಾಗಿದೆ. ಮುಂಬರುವ ಕಾಲದಲ್ಲಿ ಭಾರತೀಯರಿಗೆ ಸಿಂಗಾಪುರ್ ಪ್ರಸಿದ್ಧ ಸ್ಥಳ. ರಾಯಲ್ ಕ್ಯಾರಿಬಿಯಲ್ ಇಂಟರ್ ನ್ಯಾಷನಲ್ ಸಂಸ್ಥೆಯ ವಿಹಾರ ಹಡಗುಗಳು ಅತಿಥಿಗಳಿಗೆ ಆನಂದವಾದ ಅನುಭವವನ್ನು ನೀಡುತ್ತದೆ. ಗುಣಮಟ್ಟದ ಸೇವೆಗಳು, ಸುರಕ್ಷತೆ ಮತ್ತು ಬಹಳಷ್ಟು ಸಾಹಸಮಯವನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಈ ಅನುಭವವನ್ನು ಬಹಳಷ್ಟು ಭಾರತೀಯರೊಂದಿಗೆ ನಾವು ಹಂಚಿಕೊಳ್ಳುತ್ತೇವೆ ಎಂದು ಟೈರೂನ್ ಟ್ರಾವೆಲ್ ಮಾರ್ಕೆಟಿಂಗ್ ಸಂಸ್ಥೆಯ ಸಿಇಒ ವರುಣ್ ಚಾಧಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.