ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಗೆ ಎಸ್‌ಡಿಎಂಸಿಯ ಪಾತ್ರ : ಚಂದ್ರಶೇಖರ ಕುಂಬಳೂರು

ರಾಣೇಬೆನ್ನೂರು21: ಮಾಕನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಗ್ರಾಮದ ಶಿಕ್ಷಣ ಪ್ರೇಮಿ ಚಂದ್ರಶೇಖರ ಹ ಕುಂಬಳೂರು ಅವರು ಆಯ್ಕೆಯಾಗಿದ್ದಾರೆ.  

ಚಂದ್ರಶೇಖರ ಕುಂಬಳೂರು ಅವರು ಪತ್ರಿಕೆಯೊಂದಿಗೆ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಗೆ ಎಸ್‌ಡಿಎಂಸಿಯ ಪಾತ್ರ ಬಹುಮುಖ್ಯವಾಗಿದೆ. ಸ್ಥಳೀಯವಾಗಿ ಶಾಲೆಗೆ ಅಗತ್ಯವಿರುವ ಬೇಕು ಬೇಡಗಳನ್ನು ಒದಗಿಸಿ, ಸಮರ​‍್ಕವಾಗಿ ನಿರ್ವಹಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.  

ಶಿಕ್ಷಣ, ಸಾಹಿತ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದು,  ತಮ್ಮ ಬಾಲ್ಯ ದಿನಗಳಲ್ಲಿ ಶಿಕ್ಷಣವನ್ನು ಪಡೆಯಲು ಬಡತನ ಅಡ್ಡಿಯಾಗಿದ್ದು, ಅದನ್ನು ಮೆಟ್ಟಿ ನಿಂತು ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬದುಕಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದೆ. ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಬೇಟಿಯಾಗಿ ಅವರಿಗೆ ಡಾಽಽ ಬಿ.ಆರ್‌. ಅಂಬೇಡ್ಕರ್, ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರಬೋಸ್, ಅಬ್ದುಲ್ ಕಲಾಂ ರಂತರ ಜೀವನ ಕಥೆಗಳನ್ನು ಹೇಳುವ ಮೂಲಕ ಅವರಲ್ಲಿ  ವಿಧ್ಯಾಭ್ಯಾಸದ ಬಗ್ಗೆ ಆಸಕ್ತಿಯನ್ನು ಮೂಡಿಸಿ ಮತ್ತೆ ಮರಳಿ ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದೇನೆ. 

ಪತ್ರಿಕೆಯ ಏಜೆಂಟ್ ಆಗಿ ಕೆಲಸವನ್ನು ಮಾಡುತ್ತಿದ್ದೇನೆ. ಶಾಲೆಯ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಹಾಗೂ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನ್ನ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಶಾಲೆ ಶಿಕ್ಷಕರು ಹಾಗೂ ಸರ್ವ ಪಾಲಕರ ಅಭಿಲಾಷೆಯಂತೆ ಎಸ್‌ಡಿಎಂಸಿ ಅಧ್ಯಕ್ಷನಾಗಿರುವುದು ಸಂತಸ ಎಂದರು.