ಬೆಂಗಳೂರು, ಸೆ 22 ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುವ ಮೂರನೇ ಹಣಾಹಣಿಯಲ್ಲಿ ರೋಹಿತ್ ಶರ್ಮಾ ಎಂಟು ರನ್ ಗಳಿಸಿದ್ದೇ ಆದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಚುಟುಕು ಕ್ರಿಕಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸಮನ್ ಎಂಬ ಸಾಧನೆಗೆ ಮತ್ತೇ ಭಾಜನರಾಗಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊಹಾಲಿಯಲ್ಲಿ ನಡೆದಿದ್ದ ಎರಡನೇ ಟಿ-20 ಪಂದ್ಯದಲ್ಲಿ ನಾಯಕ ವಿರಾಟ್ ಅಜೇಯ 72 ರನ್ ಗಳಿಸುವ ಮೂಲಕ ಭಾರತ ಟಿ-20 ಕ್ರಿಕೆಟ್ನಲ್ಲಿ 2,441 ರನ್ ಗಳಿಸಿ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿಸಿದ್ದರು. ಈ ಪಂದ್ಯದಲ್ಲಿ ಭಾರತ ಏಳೂ ವಿಕೆಟ್ಗಳಿಂದ ಜಯ ಸಾಧಿಸಿತ್ತು. ಜತೆಗೆ, 1-0 ಮುನ್ನಡೆ ಕಾಯ್ದುಕೊಂಡಿತ್ತು.
ಪ್ರಸ್ತುತ ರೋಹಿತ್ ಶರ್ಮಾ 89 ಟಿ-20 ಪಂದ್ಯಗಳಿಂದ ಒಟ್ಟು 2,434 ರನ್ ಗಳಿಸಿದ್ದಾರೆ. ಇಂದು ಪಂದ್ಯದಲ್ಲಿ ಎಂಡು ರನ್ಗಿಂತ ಹೆಚ್ಚು ರನ್ ಗಳಿಸಿದರೆ ಮತ್ತೇ ಟಿ-20 ಕ್ರಿಕೆಟ್ನಲ್ಲಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸಮನ್ ಆಗಲಿದ್ದಾರೆ.
ಎಡಗೈ ಬ್ಯಾಟ್ಸಮನ್ ಶಿಖರ್ ಧವನ್ ಅವರು ಈಗಾಗಲೇ ಟಿ-20 ಕ್ರಿಕೆಟ್ನಲ್ಲಿ 6,996 ರನ್ ಗಳಿಸಿದ್ದು, ಅವರು7,000 ರನ್ ಪೂರೈಸಲು ಇನ್ನೂ ಕೇವಲ ನಾಲ್ಕು ರನ್ ಅಗತ್ಯವಿದೆ.