ನ್ಯೂಜಿಲೆಂಡ್ ವಿರುದ್ಧ ಏಕದಿನ, ಟೆಸ್ಟ ಸರಣಿಗೆ ರೋಹಿತ್ ಇಲ್ಲ

ಮೌಂಟ್ ಮಾಂಗಾನುಯ್, ಫೆ 3, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಕ್ಲೀನ್ ಸ್ವೀಪ್ ಸಂಭ್ರಮಾಚರಣೆಯಲ್ಲಿರುವ ಭಾರತ ತಂಡಕ್ಕೆೆ ದೊಡ್ಡ ಅಘಾತ ಉಂಟಾಗಿದೆ. ಗಾಯಕ್ಕೆೆ ತುತ್ತಾಗಿರುವ ಬಲಗೈ ಆರಂಭಿಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಪಂದ್ಯಗಳ ಟೆಸ್‌ಟ್‌ ಸರಣಿಗೆ ಅಲಭ್ಯವಾಗಿದ್ದಾರೆ ಎಂಬುದು ವರದಿಯಾಗಿದೆ.

 ನಿಯಮಿತ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ  ಸೂಚಿಸಿರುವ ಹಿನ್ನೆೆಲೆಯಲ್ಲಿ ರೋಹಿತ್ ಶರ್ಮಾ ಅವರು ಕೊನೆಯ ಟಿ-20 ಪಂದ್ಯದಲ್ಲಿ ಭಾರತ ತಂಡಕ್ಕೆೆ ಹಂಗಾಮಿ ನಾಯಕತ್ವ ವಹಿಸಿದ್ದರು. ಆದರೆ ಭಾರತದ ಇನಿಂಗ್‌ಸ್‌ ವೇಳೆಯಲ್ಲಿ ರೋಹಿತ್ ಗಾಯದ ಸಮಸ್ಯೆೆಗೊಳಗಾದರು. 

ಅತ್ಯುತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಈ ನಡುವೆ ಕಾಲಿನ ಹಿಂಭಾಗದಲ್ಲಿ ಗಾಯದ ಸಮಸ್ಯೆೆಯನ್ನು ಅನುಭವಿಸಿದರು. ಪರಿಣಾಮ ಪಂದ್ಯದಿಂದಲೇ ನಿವೃತ್ತಿ ಪಡೆಯಬೇಕಾಯಿತು. 41 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ 60 ರನ್ ಗಳಿಸಿದರು. ಬಳಿಕ ರೋಹಿತ್ ಅಲಭ್ಯತೆಯಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್ ನಾಯಕತ್ವವನ್ನು ವಹಿಸಿದ್ದರು. ಅಲ್ಲದೆ ಭಾರತ ಏಳು ರನ್ ಅಂತರದ ಗೆಲುವು ದಾಖಲಿಸಿ, ಕಿವೀಸ್ ನೆಲದಲ್ಲಿ ಚಾರಿತ್ರಿಕ ಚುಟುಕು ಸರಣಿ ಗೆದ್ದು ಬೀಗಿ ತ್ತು.

ಸರಣಿಯುದ್ಧಕ್ಕೂ ಅಮೋಘ ನಿರ್ವಹಣೆ ತೋರಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14,000 ರನ್ ಮೈಲುಗಲ್ಲು ತಲುಪಿದ ಭಾರತದ ಎಂಟನೇ ಬ್ಯಾಟ್ಸ್‌‌ಮನ್ ಎಂಬ ಹಿರಿಮೆಗೆ ಭಾಜನವಾದರು. ಅಲ್ಲದೆ ಟ್ವೆೆಂಟಿ-20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಲ 50ಕ್ಕೂ ಹೆಚ್ಚು ರನ್‌ಗಳ ಸಾಧನೆ ಮಾಡಿರುವ ದಾಖಲೆಯನ್ನು ಬರೆದಿದ್ದರೆ. ಟಿ-20ನಲ್ಲಿ ನಾಲ್ಕು ಶತಕಗಳು ಸೇರಿದಂತೆ ಒಟ್ಟು 25 ಬಾರಿ 50 ಪ್ಲಸ್ ರನ್ ಸಾಧನೆ ಮಾಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಿ ದಾಖಲೆಯನ್ನು (24 ಅರ್ಧಶತಕ) ಹಿಂದಿಕ್ಕಿದ್ದಾರೆ.