ನ್ಯೂಜಿಲೆಂಡ್‌ಗೆ ಸೋಲುಣಿಸಿದ ರೋಹಿತ್ : ದ್ವೀಪ ನಾಡಿನಲ್ಲಿ ಭಾರತಕ್ಕೆೆ ಚೊಚ್ಚಲ ಟಿ20 ಸರಣಿ

ಹ್ಯಾಮಿಲ್ಟನ್, ಜ 29 :     ತೀವ್ರ ರೋಚಕತೆ ಕೆರಳಿಸಿದ್ದ ಮೂರನೇ ಟಿ-20 ಪಂದ್ಯದಲ್ಲಿ ರೋಹಿತ್ ಶರ್ಮಾ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ  ಭಾರತ ತಂಡವನ್ನು ಗೆಲ್ಲಿಸಿದರು. ಆ ಮೂಲಕ ತಾನು ಹಿಟ್‌ಮನ್ ಎಂದು ದ್ವೀಪ ರಾಷ್ಟ್ರದ ಅಭಿಮಾನಿಗಳ ಎದುರು ಸಾಬೀತುಪಡಿಸಿದರು. ಇನ್ನೂ ಎರಡು ಪಂದ್ಯ ಬಾಕಿ ಇರುವಾಗಲೇ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ  ವಶಪಡಿಸಿಕೊಂಡಿತು. ನ್ಯೂಜಿಲೆಂಡ್ ನೆಲದಲ್ಲಿ ಟೀಮ್ ಇಂಡಿಯಾಗೆ ಮೊದಲ ಚುಟುಕು ಸರಣಿ ಜಯ ಇದಾಯಿತು.

ಭಾರತ ನೀಡಿದ್ದ 180 ರನ್ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಿಗೆ 179 ರನ್ ಗಳಿಸಿತು. ಪಂದ್ಯ ಟೈ ಆಗುತ್ತಿದ್ದಂತೆ ತೀರ್ಪುಗಾರರು ಸೂಪರ್ ಓವರ್ ನಿಗದಿಪಡಿಸಿದರು. ನಿಯಮಿತ ಇನಿಂಗ್ಸ್‌ ನಲ್ಲಿ 95 ರನ್ ಚಚ್ಚಿದ್ದ  ನಾಯಕ ಕೇನ್ ವಿಲಿಯಮ್‌ಸ್‌‌ನ ಹಾಗೂ ಮಾರ್ಟಿನ್ ಗುಪ್ಟಿಲ್ ಆರಂಭಿಕರಾಗಿ ಕಣಕ್ಕೆೆ ಇಳಿದರು. ಸೂಪರ್ ಓವರ್ ಬೌಲಿಂಗ್ ಮಾಡಿದ ಜಸ್ಪ್ರಿತ್ ಬುಮ್ರಾ ಆರು ಎಸೆತಗಳಲ್ಲಿ 17 ರನ್ ನೀಡಿದರು. ಕೇನ್ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರೆ, ಮಾರ್ಟಿನ್ ಗುಪ್ಟಿಲ್ ಬೌಂಡರಿ ಸಹಿತ ಐದು ರನ್ ಗಳಿಸಿದರು. 

ಭಾರತ ತಂಡದ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಜೋಡಿ ಕಣಕ್ಕೆೆ ಇಳಿಯಿತು. ಮೊದಲ ಹಾಗೂ ಎರಡನೇ ಎಸೆತದಲ್ಲಿ ಒಂದೊಂದು ರನ್ ಬಂತು. ಮೂರನೇ ಎಸೆತದಲ್ಲಿ ರಾಹುಲ್ ಬೌಂಡರಿ ಸಿಡಿಸಿ ನಾಲ್ಕನೇ ಎಸೆತದಲ್ಲಿ ಸಿಂಗಲ್ ಪಡೆದುಕೊಂಡರು. ಕೊನೆಯ ಎರಡು ಎಸೆತಗಳಲ್ಲಿ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಈ ವೇಳೆ ಐದನೇ ಹಾಗೂ ಆರನೇ ಎಸೆತಗಳಲ್ಲಿ ರೋಹಿತ್ ಸತತ ಎರಡು ಸಿಕ್ಸರ್ ಬಾರಿಸಿ ತಂಡದ ಮೊತ್ತ 20 ರನ್ ದಾಟಿಸಿ ಭರ್ಜರಿ ಗೆಲುವು ತಂದುಕೊಟ್ಟರು. 

ವಿಲಿಯಮ್ಸನ್ ಹೋರಾಟ ವ್ಯರ್ಥ: 

180 ರನ್ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್ ತಂಡದ ಪರ ಆರಂಭದಲ್ಲಿ ಮಾರ್ಟಿನ್ ಗುಪ್ಟಿಲ್ 21 ಎಸೆತಗಳಲ್ಲಿ 31 ರನ್ ಚಚ್ಚಿ ಔಟ್ ಆದ ಬಳಿಕ ತಂಡದ ಜವಾಬ್ದಾಾರಿಯನ್ನು ನಾಯಕ ಕೇನ್ ವಿಲಿಯಮ್ಸನ್ ಹೊತ್ತುಕೊಂಡರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ದೃಢಸಂಕಲ್ಪದೊಂದಿಗೆ ಬ್ಯಾಟಿಂಗ್ ಮಾಡಿದ ಕೇನ್ ವಿಲಿಯಮ್ಸನ್ ಭಾರತದ ಬೌಲರ್‌ಗಳನ್ನು ಬೆಂಡೆತ್ತಿದರು. ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ವಿಲಿಯಮ್ಸನ್ ಕೇವಲ 48 ಎಸೆತಗಳಲ್ಲಿ 95 ರನ್ ಗಳಿಸಿ ಕೊನೆಯ ಓವರ್‌ವರೆಗೂ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಕೊನೆಯ ಓವರ್‌ನಲ್ಲಿ  10 ರನ್ ಅಗತ್ಯವಿತ್ತು. 20ನೇ ಓವರ್ ಬೌಲಿಂಗ್ ಮಾಡಿದ ಶಮಿ ಅವರ ಮೊದಲನೇ ಎಸೆತದಲ್ಲಿ ರಾಸ್ ಟೇಲರ್ ಸಿಕ್ಸರ್ ಬಾರಿಸಿ ಎರಡನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡರು. ಇನ್ನೇನು ನ್ಯೂಜಿಲೆಂಡ್ ಗೆಲುವು ಖಚಿತ ಎಂದೇ ಬಾವಿಸಲಾಗಿತ್ತು. ಆದರೆ, ನಡೆದಿದ್ದೆೆ ಬೇರೆ, ವಿಲಿಯಮ್ಸನ್ ಕೀಪರ್ ಕ್ಯಾಚ್ ನೀಡಿ ನಿರ್ಗಮಿಸಿದರು. ಸೀಫರ್ಟ್ ಎರಡು ಎಸೆತಗಳನ್ನು ವ್ಯರ್ಥ ಮಾಡಿದರು. ಇದರಲ್ಲಿ ಒಂದು ಬೈ ಸಿಕ್ಕಿತು. ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಾಗ ರಾಸ್ ಟೇಲರ್ ಕ್ಲೀನ್ ಬೌಲ್‌ಡ್‌ ಆದರು. ಆ ಮೂಲಕ ಪಂದ್ಯ ಟೈ ಆಯಿತು.

ಕೊಹ್ಲ ಪಡೆಗೆ ಭರ್ಜರಿ ಆರಂಭ:

ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಭಾರತವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ನಾಯಕ ಕೇನ್ ವಿಲಿಯಮ್ಸನ್ ಅವರ ನಿರ್ಧಾರವನ್ನು ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ತಲೆಕೆಳಗಾಗುವಂತೆ ಮಾಡಿದರು. ಕಳೆದ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದ ಹಿಟ್ಮನ್ ರೋಹಿತ್ ಶರ್ಮಾ ಕಿವೀಸ್ ಬೌಲರ್ ಗಳನ್ನು  ಬಲವಾಗಿ ಕಾಡಿದರು. ಈ ಜೋಡಿ 9 ಓವರ್‌ಗಳಿಗೆ 89 ರನ್ ಗಳ ಜತೆಯಾಟವಾಡುವ ಮೂಲಕ ಭರ್ಜರಿ ಆರಂಭವನ್ನು ನೀಡಿತು. 

ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದರು. ವಿಶೇಷವಾಗಿ ಆರನೇ ಓವರ್‌ನಲ್ಲಿ  ಹಾಮಿಶ್ ಬೆನೆಟ್ ಅವರಿಗೆ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ಸಿಡಿಸಿದರು. ಕೇವಲ 23 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಪೂರೈಸಿದರು. ಒಟ್ಟಾರೆ, 40 ಎಸೆತಗಳಲ್ಲಿ 65 ರನ್ ಗಳಿಸಿದರು. ಇವರ ಸ್ಫೋಟಕ ಅರ್ಧಶತಕದಲ್ಲಿ ಮೂರು ಸಿಕ್ಸರ್  ಹಾಗೂ ಆರು ಬೌಂಡರಿಗಳು ಒಳಗೊಂಡಿವೆ. ಅತ್ಯುತ್ತಮವಾಗಿ ಬ್ಯಾಟಿಂಗ್ ಮೂಲಕ ಮುಂದುವರಿಯುತ್ತಿದ್ದ ಇವರು ಬೆನೆಟ್ ನಕಲ್ ಎಸೆತದಲ್ಲಿ ಕ್ಯಾಚಿತ್ತರು. 

ಇದಕ್ಕೂ ಮೊದಲು ಅತ್ಯುತ್ತಮ ಬ್ಯಾಟಿಂಗ್ ಲಯ ಮುಂದುವರಿಸಿದ್ದ ಕೆ.ಎಲ್ ರಾಹುಲ್ 19 ಎಸೆತಗಳಲ್ಲಿ 27 ರನ್ ಗಳಿಸಿ ಔಟಾಗಿದ್ದರು. ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದಿದ್ದ ಶಿವಂದುಬೆ ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡರು. ಕಳೆದ ಎರಡೂ ಪಂದ್ಯಗಳಲ್ಲಿ ಫಿನಿಷರ್ ಆಟವಾಡಿದ್ದ ಶ್ರೇಯಸ್ ಅಯ್ಯರ್ (17) ಇಂದು ಕೆಲಕಾಲ ನಾಯಕ ವಿರಾಟ್ ಕೊಹ್ಲಿಗೆ ಸಾಥ್ ನೀಡಿ ಸ್ಟಂಪ್ ಔಟಾದರು. 

ರೋಹಿತ್ ಶರ್ಮಾ ಔಟ್ ಆದ ಬಳಿಕ ತಂಡದ ಜವಾಬ್ದಾಾರಿ ಹೊತ್ತು ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ ಕೆಲ ಕಾಲ ಅದ್ಭುತ ಬ್ಯಾಟಿಂಗ್ ಮಾಡಿದರು. 27 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಯೊಂದಿಗೆ 38 ರನ್ ಗಳಿಸಿದರು. 49ನೇ ಓವರ್ ನಲ್ಲಿ ಸ್ಪೋಟಕ ಬ್ಯಾಟಿಂಗ್‌ಗೆ ಮುಂದಾದ ನಾಯಕ ಬೆನೆಟ್ ಎಸೆತದಲ್ಲಿ ಟಿಮ್ ಸೌಥ್‌ಗೆ ಕ್ಯಾಚ್ ನೀಡಿದರು. 

ಕೊನೆಯ ಎಸೆತದವರೆಗೂ ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ (14) ಹಾಗೂ ರವೀಂದ್ರ ಜಡೇಜಾ(10) ತಂಡಕ್ಕೆೆ ಅಲ್ಪ ಕಾಣಿಕೆ ನೀಡಿದರು. ನ್ಯೂಜಿಲೆಂಡ್ ಪರ ಹಾಮಿಶ್ ಬೆನೆಟ್ ಮೂರು ವಿಕೆಟ್ ಪಡೆದರು. ಮಿಚೆಲ್ ಸ್ಯಾಂಟ್ನರ್  ಹಾಗೂ ಗ್ರ್ಯಾಂಡ್ಹೋಮ್  ಒಂದೊಂದು ವಿಕೆಟ್ ಪಡೆದರು. 

ಸಂಕ್ಷಿಪ್ತ ಸ್ಕೋರ್

ಭಾರತ: 20 ಓವರ್ ಗಳಿಗೆ 179/5 (ರೋಹಿತ್ ಶರ್ಮಾ 65, ವಿರಾಟ್ ಕೊಹ್ಲಿ 38, ಕೆ.ಎಲ್ ರಾಹುಲ್ 27; ಹಾಮಿಶ್ ಬೆನೆಟ್ 54 ಕ್ಕೆೆ 3, ಕಾಲಿನ್ ಡಿ ಗ್ರ್ಯಾಂಡ್ಹೋಮ್ 13 ಕ್ಕೆೆ 1)

ನ್ಯೂಜಿಲೆಂಡ್: 20 ಓವರ್ ಗಳಿಗೆ 179/6 (ಕೇನ್ ವಿಲಿಯಮ್ಸನ್ 95, ಮಾರ್ಟಿನ್ ಗುಪ್ಟಿಲ್ 31; ಶಾರ್ದೂಲ್ ಠಾಕೂರ್ 21 ಕ್ಕೆೆ 2, ಮೊಹಮ್ಮದ್ ಶಮಿ 32 ಕ್ಕೆೆ 2)