ಭಾರತಕ್ಕೆ ರೋಹಿತ್, ರಹಾನೆ ಆಸರೆ

ರಾಂಚಿ, ಅ 19: ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶಮರ್ಾ(ಔಟಾಗದೆ 108 ರನ್) ವೃತ್ತಿ ಜೀವನದ ಆರನೇ ಶತಕ ಹಾಗೂ ಅಜಿಂಕ್ಯಾ ರಹಾನೆ (ಔಟಾಗದೆ 74 ರನ್) ಅವರ ಅರ್ಧ ಶತಕಗಳ ಬಲದಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಆರಂಭಿಕ ಆಘಾತದಿಂದ ಪಾರಾಗಿದೆ.  

ಇಲ್ಲಿನ ಜೆಎಸ್ಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಟೀ ವಿರಾಮದ ಬಳಿಕ 58 ಓವರ್ ಗಳಿಗೆ ಮೂರು ವಿಕೆಟ್ ನಷ್ಟಕ್ಕೆ 224 ರನ್ ದಾಖಲಿಸಿತ್ತು. ಈ ವೇಳೆ ಮಳೆ ಬಂದ ಕಾರಣ ತೀಪುಗಾರರು ಮೊದಲ ದಿನಕ್ಕೆ ಪೂರ್ಣ ವಿರಾಮ ಹಾಕಿದರು.  

ಆರಂಭಿಕ ಆಘಾತ ನೀಡಿದ ರಬಾಡ:  

ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ಆರಂಭದಲ್ಲೇ ಪ್ರಮುಖ ಎರಡು ವಿಕೆಟ್ ಕಿತ್ತು ಭಾರತಕ್ಕೆ ಆಘಾತ ನೀಡಿದರು. ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ ದ್ವಿಶತಕ ಹಾಗೂ ಶತಕ ಸಿಡಿಸಿದ್ದ ಮಯಾಂಕ್ ಅಗವರ್ಾಲ್ (10) ಹಾಗೂ ಚೇತೇಶ್ವರ ಪೂಜಾರ ಅವರನ್ನು ರಬಾಡ ಬಹುಬೇಗ ಪೆವಿಲಿಯನ್ಗೆ ಕಳುಹಿಸಿದರು. ನಂತರ, ಕ್ರೀಸ್ಗೆ ಬಂದ ನಾಯಕ ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಿ ಏನ್ರಿಚ್ ನಾಡ್ಜ್ ಗೆ ವಿಕೆಟ್ ಒಪ್ಪಿಸಿದರು. 

ರೋಹಿತ್-ರಹಾನೆ ಜುಗಲ್ಬಂದಿ:  

ಕೇವಲ 39 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಜತೆಯಾದ ರೋಹಿತ್ ಶಮರ್ಾ ಹಾಗೂ ಉಪ ನಾಯಕ ಅಜಿಂಕ್ಯಾ ರಹಾನೆ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿತು. ಈ ಜೋಡಿ ಸಮಯಕ್ಕೆ ತಕ್ಕಂತೆ ಬ್ಯಾಟಿಂಗ್ ಪ್ರದರ್ಶನ ತೋರಿತು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಈ ಜೋಡಿ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡಿತು. ರೋಹಿತ್-ರಹಾನೆ ಮುರಿಯದ ನಾಲ್ಕನೇ ವಿಕೆಟ್ಗೆ 185 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿತು.  

ಅದ್ಭುತ ಬ್ಯಾಟಿಂಗ್ ಮಾಡಿದ ರೋಹಿತ್ ಶಮರ್ಾ ಅವರು ಬ್ಯಾಟಿಂಗ್ ಲಯ ಮುಂದುವರಿಸಿದರು. ಆರಂಭದಲ್ಲಿ ಮೂರು ವಿಕೆಟ್ ಬೇಗ ಉರುಳಿದರೂ ಒಂದು ತುದಿಯಲ್ಲಿ ನೆಲೆಯೂರಿದ ಹಿಟ್ಮನ್ ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಸೆದೆ ಬಡಿದರು. 164 ಎಸೆತಗಳನ್ನು ಎದುರಿಸಿದ ರೋಹಿತ್ ಶಮರ್ಾ ನಾಲ್ಕು ಸಿಕ್ಸರ್ ಹಾಗೂ 14 ಬೌಂಡರಿಯೊಂದಿಗೆ 117  ರನ್ ಗಳಿಸಿ ವೃತ್ತಿ ಜೀವನದ ಆರನೇ ಹಾಗೂ ಆರಂಭಿಕನಾಗಿ ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಶತಕಗಳು ಸಿಡಿಸಿದ ನಾಲ್ಕನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.  

ಆರಂಭಿಕನಾಗಿ ಬಡ್ತಿ ಪಡೆದ ಮೊದಲನೇ ಸರಣಿಯಲ್ಲೇ ತಾನೆಂದೂ ನಿರೂಪಿಸಿದ ರೋಹಿತ್ ಶಮರ್ಾ ಟೆಸ್ಟ್ ವೃತ್ತಿ ಜೀವನದಲ್ಲಿ 2,000 ರನ್ ಪೂರ್ಣಗೊಳಿಸಿದರು.  

ರೋಹಿತ್ ಶಮರ್ಾಗೆ ಒಂದು ತುದಿಯಲ್ಲಿ ಹೆಗಲು ನೀಡಿದ ಅಜಿಂಕ್ಯಾ ರಹಾನೆ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ತೋರಿದರು. 135 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ 11 ಬೌಂಡರಿಯೊಂದಿಗೆ ಅಜೇಯ 83 ರನ್ ಗಳಿಸಿ ಶತಕದಂಚಿನಲ್ಲಿದ್ದಾರೆ. ಒಟ್ಟಾರೆ ಮೊದಲನೇ ದಿನ ರೋಹಿತ್ ಹಾಗೂ ರಹಾನೆ ಹವಾಗೆ ಹರಿಣಗಳು ಬೆದರಿದ್ದು, ಎರಡನೇ ದಿನಕ್ಕೂ ಈ ಜೋಡಿ ಬ್ಯಾಟಿಂಗ್ ಕಾಯ್ದುಕೊಂಡಿದೆ. 

ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 54 ರನ್ ನೀಡಿ ಎರಡು ವಿಕೆಟ್ ಪಡೆದರೆ, ಏನ್ರಿಚ್ ನಾಡ್ಜ್ 50 ರನ್ ನೀಡಿ ಒಂದು ವಿಕೆಟ್ ಪಡೆದಿದ್ದಾರೆ. 

ಸಂಕ್ಷಿಪ್ತ ಸ್ಕೋರ್ 

ಭಾರತ 

ಪ್ರಥಮ ಇನಿಂಗ್ಸ್: 58 ಓವರ್ ಗಳಿಗೆ 224/3 (ರೋಹಿತ್ ಶಮರ್ಾ ಔಟಾಗದೆ 117, ಅಜಿಂಕ್ಯಾ ರಹಾನೆ ಔಟಾಗದೆ 83; ಕಗಿಸೋ ರಬಾಡ 54 ಕ್ಕೆ 2, ಏನ್ರಿಚ್ ನಾಡ್ಜ್ 50 ಕ್ಕೆ 1)