ಲಂಡನ್, ಸೆ 14 ಮುಂದಿನ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಎಟಿಪಿ ಕಪ್ ಟೆನಿಸ್ ಟೂರ್ನಿಯಲ್ಲಿ ಆಡಲು ವಿಶ್ವ ಸ್ಟಾರ್ ಆಟಗಾರರಾದ ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಚ್ ಗ್ರೀನ್ ಸಿಗ್ನಲ್ ನೀಡಿದ್ದಾರೆಂದು ಟೂನರ್ಿಯ ಆಯೋಜಕರು ಶನಿವಾರ ತಿಳಿಸಿದ್ದಾರೆ. ವಿಶ್ವ ಶ್ರೇಯಾಂಕದ ಅಗ್ರ 30 ಆಟಗಾರರಲ್ಲಿ 27 ಮಂದಿ ಈ ಟೂರ್ನಿಯಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದಾರೆ. ಸೊಂಟದ ಶಸ್ತ್ರ ಚಿಕಿತ್ಸೆ ಪಡೆದು ಸಂಪೂರ್ಣ ಚೇತರಿಸಿಕೊಂಡಿರುವ ಆ್ಯಂಡಿ ಮರರ್ೆ ಅವರು ಕೂಡ ಎಟಿಪಿ ಕಪ್ ಟೂನರ್ಿಯಲ್ಲಿ ಭಾಗವಹಿಸಲಿದ್ದಾರೆ. "ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ಎಟಿಪಿ ಕಪ್ ಉದ್ಘಾಟನಾ ಟೂನರ್ಿಯಲ್ಲಿ ಭಾಗವಹಿಸಲು ವಿಶ್ವದ ಅಗ್ರ ಕ್ರಮಾಂಕದ ಟೆನಿಸ್ ಆಟಗಾರರು ಒಪ್ಪಿಗೆ ಸೂಚಿಸಿರುವುದಕ್ಕೆ ಸಂತಸವಾಗುತ್ತಿದೆ. ಟೂನರ್ಿಯಲ್ಲಿ ಅಗ್ರ ಆಟಗಾರರನ್ನು ಲೈನ್ ಅಪ್ ಮಾಡಲು ಟೆನಿಸ್ ಆಸ್ಟ್ರೇಲಿಯಾ ಪರಿಶ್ರಮ ಪಟ್ಟಿದೆ" ಎಂದು ಎಟಿಪಿ ಕಾರ್ಯಕಾರಿ ಮುಖ್ಯಸ್ಥ ಕ್ರಿಸ್ ಕೆಮರ್ೊಡ್ ಅವರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ವಿಶ್ವದ ಅಗ್ರ ಶ್ರೇಯಾಂಕದ ಆಟಗಾರರೊಂದಿಗೆ ಟೆನಿಸ್ ಜಾಗತಿಕ ಮಟ್ಟದಲ್ಲಿ ನೂತನ ಟೆನಿಸ್ ಆಯೋಜನೆ ಮಾಡುತ್ತಿದ್ದೇವೆ. 2020ರ ಆವೃತ್ತಿಯು ಎಟಿಪಿ ಕಪ್ ಮೂಲಕ ಆರಂಭವಾಗಲಿದೆ. 24 ದೇಶಗಳಿಂದ 100 ಆಟಗಾರರು ಈ ಟೂನರ್ಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.