ರಸ್ತೆ ಕಾಮಗಾರಿ ಅಪೂರ್ಣ: ಜನತೆಗೆ ತೊಂದರೆ


ಲೋಕದರ್ಶನ ವರದಿ

ಕುಮಟಾ 2: ತಾಲೂಕಿನ ಮಿಜರ್ಾನ ಕೋಟೆ ರಸ್ತೆ ಕಾಮಗಾರಿ ಅಪೂರ್ಣವಾಗಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಸ್ಥಳೀಯ ಬೈಕ್ ಸವಾರರಿಗೆ ಹಾಗೂ ಪ್ರವಾಸಿಗರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. 

   ಪ್ರವಾಸಿಗರ ತಾಣವಾದ ಮಿಜರ್ಾನ ಕೋಟೆ ರಸ್ತೆಗೆ ಪ್ರವಾಸೋದ್ಯಮ ಯೋಜನೆ ಇಲಾಖೆಯಡಿ 1 ಕೋಟಿ ರೂ ಮಂಜೂರಾಗಿದ್ದು, ಈ ರಸ್ತೆ ನಿಮರ್ಾಣ ಕಾಮಗಾರಿ ಕೈಗೆತ್ತಿಕೊಂಡ ಲ್ಯಾಂಡ್ ಆಮರ್ಿ ಸಿಮೆಂಟ್ ರಸ್ತೆ ಕಾಮಗಾರಿ ಪೂತರ್ಿಗೊಳಿಸಿದರೂ, ಇನ್ನೂಳಿದ ಕಾಮಗಾರಿಯಾಗದ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನ ಸಂಚಾರ ಭಾಗ್ಯಕ್ಕೆ ಅಡ್ಡಿಯಾಗಿದೆ. 500 ವರ್ಷಗಳಷ್ಟು ಪುರಾತನವಾದ ಮಿಜರ್ಾನ ಕೋಟೆಯನ್ನು ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ ತನ್ನ ಸುಪದರ್ಿಗೆ ಪಡೆದು ಮೂಲ ರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹಂತ ಹಂತವಾಗಿ ನಿಮರ್ಿಸದರಿಂದ ಕೋಟೆ ಮಧುವಣಗಿತ್ತಿಯಂತೆ ಸುಂದರವಾಗಿ ಕಂಗೊಳಿಸುತ್ತಿದೆ. ಕೋಟೆಯಲ್ಲ 50ಕ್ಕೂ ಅಧಿಕ ಚಲನಚಿತ್ರ ನಿಮರ್ಾಣವಾಗಿ, ಕೋಟೆ ರಸ್ತೆ ರಾಷ್ಟ್ರವ್ಯಾಪಿ ಪ್ರಸರಿಸಿದ್ದರಿಂದ ನಿತ್ಯ ಪ್ರವಾಸಿಗರ ದಂಡೆ ಇಲ್ಲಿ ಹರಿದುಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ 66 ರಿಂದ 1.5 ಕಿಮೀ ಅಂತರವಿರುವ ಈ ಕೋಟೆಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು, ಅದನ್ನು ದುರುಸ್ತಿಗೊಳಿಸುವಂತೆ ಜನರು 5-6 ವರ್ಷಗಳಿಂದ ಬೇಡಿಕೆ ಇಟ್ಟರೂ, ಒಂದಲ್ಲ ಒಂದು ಕಾರಣದಿಂದ ಕೋಟೆ ರಸ್ತೆಗೆ ಮಂಜೂರಾದ ಅನುದಾನ, ಬೇರೆಡೆ ವಗರ್ಾವಣೆಗೊಳ್ಳುತ್ತಿತ್ತು. 

  ನಂತರ ಹಿಂದಿನ ಶಾಸಕಿ ಶಾರದಾ ಶೆಟ್ಟುಯವರು ವಿಧಾನ ಸಭೆ ಚುನಾವಣೆಗೆ 3 ತಿಂಗಳು ಇರುವಾಗ, ಭೂಮಿ ಪೂಜೆ ನೆರವೇರಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಕಳೆದ 3 ತಿಂಗಳ ಹಿಂದೆ ರಸ್ತೆ ಕಾಮಗಾರಿ ಕೈಗೆತ್ತಿಕೊಂಡ ಲ್ಯಾಂಡ್ ಆಮರ್ಿ, ಕೋಟಯ 1.5 ಕಿಮೀ ರಸ್ತೆ ನಿಮರ್ಾಣಕ್ಕೆ ಪೂತರ್ಿ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸುಮಾರು 400 ಮೀ ನಷ್ಟು ರಸ್ತೆಗೆ ಸಿಮೆಂಟ್ ಕಾಂಕ್ರಿಟ್ನಿಂದ ಸುಸಜ್ಜಿತವಾಗಿ ನಿಮರ್ಿಸಿದೆ. ಲ್ಯಾಂಡ್ ಆಮರ್ಿ ನಿಮರ್ಿಸಿದ ಗುಣಮಟ್ಟದ ರಸ್ತೆ ಕಾಮಗಾರಿಗೆ ಎಲ್ಲೆಡೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಇನ್ನುಳಿದ ಅರ್ಧ ರಸ್ತೆ ಕಾಮಗಾರಿಕೆೆ ಲ್ಯಾಂಡ್ ಆಮರ್ಿಯವರಿಗೆ ನೀಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಒಟ್ಟಾರೆ ಕೆಟ್ಟು ಹೋದ ರಸ್ತೆಗೆ ಕೊನೆಗೂ ಮುಕ್ತಿ ದೊರಕಿದ ನೆಮ್ಮದಿ ಸಾರ್ವಜನಿಕರಾಗಿದೆ. 

  ಲ್ಯಾಂಡ್ ಆಮರ್ಿಯವರು ಗುಣಮಟ್ಟದ ರಸ್ತೆಯೇನೊ ನಿಮರ್ಿಸಿದ್ದಾರೆ. ಆದರೆ, ಸಿಮೆಂಟ್ ರಸ್ತೆ ಕಾಮಗಾರಿಕೆ ಪೂರ್ಣಗೊಂಡರೂ ರಸ್ತೆಯ ಅಕ್ಕಪಕ್ಕದ ಅಂಚಿನ ಕಾಲುವೆ ಬದಿಗೆ 6 ಇಂಚು ಎತ್ತರದ ಕಲ್ಲು ಕಟ್ಟಿ, ನಡುವೆ ರಸ್ತೆ ಅಂಚಿನಲ್ಲಿ ಮಣ್ಣು ತುಂಬಿದರೆ ರಸ್ತೆ ಸಾಕಷ್ಟು ಅಗಲವಾಗಿ ವಾಹನ ಸಂಚಾರಕ್ಕೆ ಪಾದಾಚಾರಿಗಳ ಓಡಾಟಕ್ಕೆ ಅನುಕೂಲವಾಗುತ್ತದೆ. ಆದರೆ, ಲ್ಯಾಂಡ್ ಅಮರ್ಿಯವರು ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನಷ್ಟೇ ನಿಮರ್ಿಸಿ, ರಸ್ತೆ ಎದುರುಗಡೆ ಗೇಟ್ನ್ನು ಇಟ್ಟು ವಾಹನ ಸಂಚಾರ ನಿರ್ಬಂಧಿಸಿದ್ದಾರೆ, ಹಾಗಾಗಿ ಪ್ರವಾಸಿಗರ ಹಾಗೂ ಸಾರ್ವಜನಿಕರ ವಾಹನ ಓಡಾಟಕ್ಕೆ ಅಡ್ಡಿಯಾಗಿದೆ.  ಬೈಕ್ ಸವಾರರು ಉಸಿರು ಬಿಗಿ ಹಿಡಿದು ಈ ರಸ್ತೆಯಲ್ಲಿ ಬೈಕ್ ಓಡಿಸುವ ಸ್ಥಿತಿ ನಿಮರ್ಿತವಾಗಿದೆ. ಹಾಗಾಗಿ ಈ ಸುಸಜ್ಜಿತ ರಸ್ತೆ ನಿಮರ್ಾಣವಾಗಿದ್ದರೂ, ವಾಹನ ಓಡಾಟದ ಪ್ರಯೋಜನಕ್ಕೆ ಬಾರದಂತಾಗಿದೆ. ಲ್ಯಾಂಡ್ ಆಮರ್ಿಯವರು ತಕ್ಷಣ ಕಾರ್ಯಪ್ರವೃತ್ತರಾಗು ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗಬೇಕಿದೆ. 

ಸ್ವಚ್ಛತಾ ಮೂಲಕ ಹೊಸ ವರ್ಷಕ್ಕೆ ಸ್ವಾಗತ