ರಸ್ತೆ ಅಗಲೀಕರಣ ಕಾಮಗಾರಿಗೆ ಶೀಘ್ರ ಮುಗಿಸಿ
ಬಳ್ಳಾರಿ 22: 21ನೇ ವಾರ್ಡ್ ಕೆಇಬಿ ವೃತ್ತದಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ ವರೆಗೆ ಸುಮಾರು 350 ಮೀಟರ್‌ಗಳಷ್ಟು ರಸ್ತೆ ಅಗಲೀಕರಣ ನಡೆಯುತ್ತಿದೆ. ಎಸ್ ಹೆಚ್ 132 ಈ ರಸ್ತೆ ಪ್ರಾರಂಭವಾಗಿ ಸುಮಾರು 8 ತಿಂಗಳು ಮೇಲ್ಪಟ್ಟ ಆಯ್ತು ಆದರೆ ಕಾಮಗಾರಿಕೆ ಇನ್ನೂ ಮುಗಿದಿಲ್ಲ, ಎಲ್ಲಿ ಕುಣಿಗಳು ತೆಗೆದಿದ್ದು ಅಲ್ಲೇ ಇವೆ ಇದುವರೆಗೆ ಮಣ್ಣುಕೂಡ ತೆಗೆದಿಲ್ಲ ಹಾಗೆಯೇ ಅಲ್ಲಿನ ವ್ಯಾಪಾರಸ್ಥರಿಗೆ ವ್ಯಾಪಾರವಿಲ್ಲ ಎಲ್ಲರೂ ಬೀದಿಪಾಲಾಗೋ ಪರಿಸ್ಥಿತಿ ಉಂಟಾಗಿದೆ. ದಿನನಿತ್ಯ ಭಾರಿ ವಾಹನ ಸಂಚಾರದಿಂದ ಬರುವ ಧುಮ್ಮು ಧೂಳಿಯಿಂದ ಬಸವೇಶ್ವರನಗರ ಇನ್ನು ಸುತ್ತಮುತ್ತಲು ಅರ್ಧ ಕಿಲೋಮೀಟರಷ್ಟು ಹರಡುತ್ತಿದೆ ಇದರಿಂದ ಯಾರಿಗೂ ಜೀವನದ ನೆಮ್ಮದಿ ಇಲ್ಲ. ಹಲವಾರು ರೋಗಗಳು ಹರಡುತ್ತಿದೆ, ಮುಖ್ಯವಾಗಿ ಗಂಟಲ ನೋವು ಅಸ್ತಮಾ ಇನ್ನೂ ಮುಂತಾದ ರೋಗಗಳು ಬರುವ ಸಾದ್ಯತೆ ಇದೆ. ಇದಕ್ಕೆ ಜವವಾಬ್ದಾರರು ಯಾರು? ಆ ಮುಖ್ಯ ರಸ್ತೆಯಲ್ಲಿರುವ ಮನೆಗಳನ್ನು ಮತ್ತು ನಿವಾಸಗಳನ್ನು ಕಾಪಾಡುವವರು ಯಾರು ? ಇನ್ನು ಆ ಕಾಮಗಾರಿಕೆ ಮುಗಿಯಬೇಕಾದರೆ ಎನ್ನೆಷ್ಟು ತಿಂಗಳು ಬೇಕು ಮಹಾನಗರ ಪಾಲಿಕೆ ಅಧಿಕಾರಿಗಳೇ? ಕೆಇಬಿ ವೃತ್ತದ ರಸ್ತೆ ಪ್ರಾರಂಭದಲ್ಲಿ ಭಾರಿ ವಾಹನಗಳು ಬರದಂತೆ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಖ್ಯ ಕಚೇರಿ ಹತ್ತಿರ ಈ ಎರಡು ಸ್ಥಳಗಳಲ್ಲಿ ಕಮಾನು ಹಾಕುವಂತೆ ಕೋರುತ್ತೇವೆ ದಯಮಾಡಿ ಮುಷ್ಕರ ಮಾಡಲು ಅವಕಾಶವನ್ನು ಕಲ್ಪಿಸ ಬಾರದೆಂದು ತಮ್ಮೆಲ್ಲರನೋ ವಿನಂತಿ ಮಾಡಿಕೊಳ್ಳುತ್ತೇವೆ. ಈ ವಿಷಯದ ಬಗ್ಗೆ ಗುತ್ತಿಗೆದಾರ ಕಡಿಚಿಛಚಿಟಿರಿಚಿಟಿ ಖಿ (7411331313) ವಿಚಾರಿಸಿದಾಗ ನಮಗೆ ಹಣ ಬಿಡುಗಡೆ ಆಗಿಲ್ಲ ಅದಕ್ಕಾಗಿ ಕೆಲಸದಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಹಣದ ಬಗ್ಗೆ ಸಾರ್ವಜನಿಕರೆಗೆ ಏನು ಸಂಬಂಧವಿಲ್ಲ. ಆದಷ್ಟು ಬೇಗ ಕಾಮಗಾರಿಗೆ ಮುಗಿಸುವಂತೆ ಬಳ್ಳಾರಿ ಸಾಮಾಜಿಕ ಕಾರ್ಯಕರ್ತ ಮೆಕಲ ಈಶ್ವರ್ ರೆಡ್ಡಿ ಅವರು ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ನಗರ ಶಾಸಕರು. ಪಾಲಿಕೆ ಆಯುಕ್ತರು ಮೊದಲಾದವರನ್ನು ಕೋರಿದ್ದಾರೆ.