ಬಡ ವ್ಯಾಪಾರಸ್ಥರಿಗೆ ರಸ್ತೆ ಅಗಲೀಕರಣ ಮಮರ್ಾಘಾತ

ಲೋಕದರ್ಶನ ವರದಿ

ಕುಮಟಾ 9: ತಾಲೂಕಿನ ಮಿಜರ್ಾನ ಗ್ರಾಮ ಪಂಚಾಯತ ಸೇರಿದ ಅಂಗಡಿ ಮಳಿಗೆಯನ್ನು ಕಳೆದ 20 ವರ್ಷಗಳಿಂದ ಬಾಡಿಗೆಯಿಂದ ಪಡೆದು ವ್ಯಾಪಾರ ಉದ್ಯೋಗ ನಡೆಸಿ, ಅದರಿಂದ ಬಂದ ಅಲ್ಪ ಸ್ವಲ್ಪ ಲಾಭಾಂಶದಿಂದ ಬದುಕು ನಿರ್ವಹಿಸುತ್ತಿದ್ದ ಬಡ ವ್ಯಾಪಾರಸ್ಥರಿಗೆ ರಸ್ತೆ ಅಗಲೀಕರಣ ಮಮರ್ಾಘಾತ ನೀಡಿದ್ದು, ಚತುಷ್ಪದ ರಸ್ತೆ ಕಾಮಗಾರಿಗೆ ಮಿಜರ್ಾನ ಗ್ರಾಪಂ ಅಂಗಡಿ ಮಳಿಗೆಗಳು ನೆಲಸಮವಾಗಿ 4 ತಿಂಗಳುಗಳೇ ಸಂದರೂ ಇದರಿಂದಾಗಿ ದುಡಿಯುವ ಕೈಗೆ ಕೆಲಸವಿಲ್ಲದೇ ವ್ಯಾಪಾರಸ್ಥರು, ಮುಂದಿನ ಭವಿಷ್ಯದ ಕುರಿತು ಚಿಂತಾಕ್ರಾಂತರಾಗಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿರುವ ಬಡ ವ್ಯಾಪಾರಸ್ಥರಿಗೆ ಧೈರ್ಯ ತುಂಬಿ ತ್ವರಿತಗತಿಯಲ್ಲಿ ಅಂಗಡಿ ಮಳಿಗೆ ನಿಮರ್ಿಸಿ ಮಾನವೀಯ ನೆಲೆ ಒದಗಿಸಬೇಕಾದ ಮಿಜರ್ಾನ ಗ್ರಾಮಾಡಳಿತ ಇನ್ನೂ ನಿದ್ರಾವಸ್ಥೆಯಲ್ಲಿರಿವುದರಿಂದ ವ್ಯಾಪಾರಸ್ಥರ ಗೋಳು ಕೇಳದಂತೆ ಇಲ್ಲವಾಗಿದೆ. 

   ಚತುಷ್ಪದ ರಸ್ತೆ ಕಾಮಗಾರಿಗೆಯ ಪೆಡಂಭೂತದ ಭಯ ಕಳೆದ 5 ವರ್ಷಗಳಿಂದ ಬಡ ವ್ಯಾಪಾರಿಗಳಿಗೆ ಕಾಡುತ್ತಲೇ ಇದೆ. ಈ ಅವಧಿಯಲ್ಲಿ ಐಆರ್ಬಿ ಅಧಿಕಾರಿಗಳು ಪದೆ ಪದೇ ಟೇಪ್ ಹಿಡಿದು, ನೂರಾರಿ ಭಾರಿ ರಸ್ತೆ ಮಾಪನ ಮಾಡುತ್ತ, ಅಂಗಡಿಯ ಕಾಲುಭಾಗದಷ್ಟು ಸ್ಥಳ, ರಸ್ತೆ ಅಗಲೀಕರಣಕ್ಕೆ ಬಳಕೆಯಾಗುತ್ತದೆಯೆಂತಲೇ ಎಚ್ಚರಿಕೆ ನೀಡುತ್ತಲೇ ಬಂದಿದ್ದರು. ಆ ಸಮಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಧೈರ್ಯ ತುಂಬಿ ರಸ್ತೆ ಅಗಲೀಕರಣಕ್ಕೆ ಬಳಕೆಯಾಗುವ ಅಂಗಡಿಭಾಗ, ತುಂಡರಿಸಿ ಉಳಿದ ಭಾಗ ಹಾಗೆಯೇ ಉಳಿಸಿ ಶೀಘ್ರದಲ್ಲೇ ಅಂಗಡಿ ನಿಮರ್ಿಸುವ ಭರವಸೆ ನೀಡಿದ್ದರಿಂದ, ಜನಪ್ರತಿನಿಧಿಗಳ ಮಾತಿನ ಮೇಲೆ ಭರವಸೆ ಇಟ್ಟ ಬಡ ವ್ಯಾಪಾರಸ್ಥರಿಗೆ ಈಗ ಭ್ರಮನಿರಸನವಾಗಿದೆ. 

    ಗ್ರಾಮದ ಜನತೆ ಸಮಸ್ಯೆಯಲ್ಲಿ ಸಿಲುಕಿದಾಗ ಅವರಿಗೆ ನೆರವಾಗಲು ಪ್ರತಿ ಗ್ರಾಮಕ್ಕೊಂದು ಪಂಚಾಯತ ವ್ಯವಸ್ಥೆಯನ್ನು ಸಕರ್ಾರ ನಿಮರ್ಿಸಿಕೊಟ್ಟಿದೆ. ಹೀಗಿರುವಾಗ ಅಗಷ್ಟ 30 ರಂದು ಅಂಗಡಿ ಬಿಟ್ಟು ಕೊಡಲು ಪಂಚಾಯತ ನೋಟೀಸ್ ನೀಡಿದಾಗಲೂ ಅದಕ್ಕಿಂತ ಮುಂಚಿತವಾಗಿ ಅಂಗಡಿ ಖುಲ್ಲಾಪಡಿಸಲು ಜೆಸಿಬಿ ಹಿಡಿದು ಐಆರ್ಬಿ ಅಧಿಕಾರಿಗಳು ಮುಂದಾದರೂ ಜನಪ್ರತಿನಿಧಿಗಳು ಅಂಗಡಿಕಾರರ ನೆರವಿಗೆ ಬರಲೇ ಇಲ್ಲ. ಅದಿರಲೀ, ಕೊನೆಯ ಪಕ್ಷ ರಸ್ತೆ ಅಗಲೀಕರಣಕ್ಕೆ ಬಳಕೆಯಾಗುವ ಅಂಗಡಿ ಭಾಗವನ್ನು ಟೇಪ್ ಹಿಡಿದು ಗುರುತಿಸಿಕೊಟ್ಟರೂ ಪಂಚಾಯತ ಸ್ವತ್ತನ್ನು ಉಳಿಸಿಕೊಳ್ಳಲು ಸಮಾನ ಮನಸ್ಕ ಜನಪ್ರತಿನಿಧಿಗಳ ಕೊರತೆಯಿಂದಾಗಿ ಕೊನೆಗೂ ಅಂಗಡಿ ನೆಲಸಮವಾಗಿರುವುದು ವಿಪಯರ್ಾಸವಾಗಿದೆ. ಪೆಟ್ಟಿಗೆ ಅಂಗಡಿಯಿಟ್ಟು ವ್ಯಾಪಾರ ನಡೆಸುವವರಿಗೆ ಅದನ್ನು ಖುಲ್ಲಾಪಡಿಸಲು 1 ರಿಂದ ಎರಡುವರೆ ಲಕ್ಷ ರೂ ಪರಿಹಾರವನ್ನು ನೀಡಲಾಗಿದೆ. ಹೀಗಿರುವಾಗ ಮಿಜರ್ಾನ ಗ್ರಾ ಪಂ ಅಂಗಡಿ ಮಳಿಗೆಯಲ್ಲಿ ವ್ಯಾಪಾರ ನಡೆಸಿ ಜೀವನ ನಿವಹಣೆ ನಡೆಸುತ್ತಿದ್ದ ಅಂಗಡಿಕಾರರನ್ನು ಏಕಾಏಕೀ ಎಬ್ಬಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಬಗೆದಂತಾಗಿದೆ. 

    ಅಂಗಡಿಯನ್ನು ನಂಬಿದ ಅಂಗಡಿಕಾರರು ಸಾಲ ಮಾಡಿ ಖರೀದಿಸಿದ ವಸ್ತುಗಳು ಹಾಗೆಯೇ ಉಳಿದುಕೊಂಡಿವೆ. ಅಷ್ಟಕ್ಕೂ ವ್ಯಾಪಾಸ್ಥರ ವ್ಯಾಪಾರ ನಷ್ಟದ ಪರಿಹಾರ ನೀಡದೆ ಒಕ್ಕಲೆಬ್ಬಿಸಿರವುದು ಮಾನವೀಯತೆ ಎಲ್ಲೇ ಮೀರಿದ ವರ್ತನೆಯಾಗಿದೆ. ಅಷ್ಟಕ್ಕೂ ಗ್ರಾ ಪಂ ಅಂಗಡಿ ಮಳಿಗೆ ಕಟ್ಟಡ ಹೆದ್ದಾರಿಗೆ ಬಳಕೆಯಾಗುತ್ತಲೇ ಪಂಚಾಯತ ಕಟ್ಟಡ ಹಾನಿಗೆ 38 ಲಕ್ಷ ರೂ ಪರಿಹಾರ ನೀಡಿದೆ. ಈ ಪರಿಹಾರ ಮೊತ್ತ ಕಾರವಾರ ಜಿಲ್ಲಾ ಪಂಚಾಯತ ಇಲಾಖೆಯಲ್ಲಿ ಜಮಾವಣೆಗೊಂಡಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಾರೆ. 

     ಅಷ್ಟಕ್ಕೂ ಈ ಹಣವನ್ನು ತಕ್ಷಣ ಮಿಜರ್ಾನ ಗ್ರಾ ಪಂ ನಲ್ಲಿ ಭರಣ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಪಡದಿರುವುದೇ ಅಂಗಡಿ ಮಳಿಗೆ ಕಟ್ಟಲು ವಿಳಂಬವಾಗುತ್ತಿದೆ ಎನ್ನಲಾಗಿದೆ. ಅಲ್ಲದೇ ಮಿಜರ್ಾನನಂತ ಊರಲ್ಲಿ ಅಲ್ಲಲ್ಲಿ ಚಿಕ್ಕ ಪುಟ್ಟ ಅಂಗಡಿಗಳಿದ್ದು, ವ್ಯಾಪಾರ ಹಂಚಿಹೋಗಿದೆ. ದಿನವಿಡೀ ವ್ಯಾಪಾರ ನಡೆಸುವವ 500 ರಿಂದ 1000 ಸಾವಿರ ವ್ಯಾಪಾರವಾದರೇ ಅಂಗಡಿಕಾರರಿಗೆ ಆಗುವ ಲಾಭಾಂಶವು ಎಷ್ಟು ?. ಈ ಹಿಂದಿನ ಗ್ರಾ ಪಂ ಜನಪ್ರತಿನಿಧಿಗಳು ಬಡ ವ್ಯಾಪಾರಸ್ಥರಿಗೆ ನೆರವಾಗುವಂತೆ 15 ರಿಂದ 25 ಸಾವಿರ ಡಿಪಾಸಿಟ್ ಪಡೆದು ಮಾಸಿಕ 700 ರೂ ನಿಗದಿಪಡಿಸಿದ್ದು, ಹಾಗಾಗಿ ವ್ಯಾಪಾರಸ್ಥರ ಜೀವನ ನಿರ್ವಹಣೆ ಸುಖಕರವಾಗಿತ್ತು. 

   ಈಗ ಗ್ರಾ ಪಂ ಅಂಗಡಿ ಮಳಿಗೆ ನೆಲಸಮವಾಗುತ್ತಲೇ ಖಾಸಗಿಯವರ ಬಾಡಿಗೆದರ 4 ಪಟ್ಟು ಹೆಚ್ಚಿದೆ. ನಿರಾಶ್ರಿತ ಅಂಗಡಿಕಾರರು ಅಂಗಡಿ ಪಡೆಯಲಾಗದೆ ಕೈ ಕೈಹಿಸುಕಿಕೊಳ್ಳುವಂತಾಗಿದೆ. 

  ಅಷ್ಟಕ್ಕೂ ಮಿಜರ್ಾನ ಗ್ರಾ ಪಂ ಅಂಗಡಿ ಕಟ್ಟಿಕೊಡುವುದೆಂಬ ನಿರೀಕ್ಷೆ ಅಂಗಡಿಕಾರರದಾಗಿದೆ. ಬಡ ಅಂಗಡಿಕಾರರ ನೋವನ್ನು ಅಥರ್ೈಸಿಕೊಂಡು ಅವರ ಜೀವನಕ್ಕೆ ನೆರವಾಗಲು ಮಿಜರ್ಾನ ಗ್ರಾಮಾಡಳಿತ ತಕ್ಷಣ ಮುಂದಾಗಬೇಕಿದೆ.