ನಂದೀಡ್, ಮೇ 29,ನಂದೀಡ್ - ನಾಗಪುರ ಹೆದ್ದಾರಿಯಲ್ಲಿ ಹದ್ಗೋನ್ ತೆಹ್ಸಿಲ್ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಹಿರಿಯ ನಾಗರಿಕರು ಮೃತಪಟ್ಟಿದ್ದಾರೆ.ಉಮರ್ಖೇಡ್ ನಿವಾಸಿಗಳಾದ ಕಾಶೀನಾಥ್ ಭೀಮಾ ರಾಥೋಡ್ (65) ಮತ್ತು ಅವರ ಪತ್ನಿ ಸುಲೋಚನಾ (60) ಮೋಟಾರು ಸೈಕಲ್ ನಲ್ಲಿ ಸುಲೋಚನಾ ಅವರ ಸಹೋದರಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಮಾಮಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಪಾಲಾಸಾ ಗ್ರಾಮದ ಬಳಿ ವಿರುದ್ಧ ದಿಕ್ಕಿನಿಂದ ಬಂದ ಟ್ರಕ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ಈ ದುರ್ಘಟನೆ ನಡೆದಿದ್ದು ಸುಲೋಚನಾ ಸ್ಥಳದಲ್ಲೇ ಮೃತಪಟ್ಟರೆ ಗಂಭೀರವಾಗಿ ಗಾಯಗೊಂಡಿದ್ದ ಕಾಶೀನಾಥ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಹಡ್ಗಾವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.