ಬಳ್ಳಾರಿ, ಮೇ 17, ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ ಕಾನಹೊಸಹಳ್ಳಿ ಮೇಲ್ಸೇತುವೆ ಬಳಿ ಲಾರಿಯೊಂದಕ್ಕೆ ಕಾರೊಂದು ಅಪ್ಪಳಿಸಿ 14 ವರ್ಷದ ಬಾಲಕಿ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಅಂಜಲಿ(14), ದೇವರಾಜ್(21) ಮತ್ತು ಭೀಮರಾಯ(38) ಎಂದು ಗುರುತಿಸಲಾಗಿದೆ. ನತದೃಷ್ಟರು ಬಳ್ಳಾರಿ ಜಿಲ್ಲೆಯ ಮುದೇಬಿಹಾಳ್ ನವರಾಗಿದ್ದು, ಬೆಂಗಳೂರಿನಿಂದ ತಮ್ಮ ಸ್ವಂತ ಊರಿಗೆ ಹಿಂತಿರುಗುತ್ತಿದ್ದರು ಎಂದು ಮೂಲಗಳು ತಿಳಿಸಿವೆ.ಕಾನಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.