ರಸ್ತೆ ಅಪಘಾತ : 7 ವಲಸಿಗರ ಸಾವು, 12 ಮಂದಿಗೆ ಗಾಯ

ಭಗಲ್‍ ಪುರ, ಮೇ 19, ಬಿಹಾರದ ಭಗಲ್ ಪುರ ಜಿಲ್ಲೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಕನಿಷ್ಠ ಏಳು ಜನರು ಸಾವನ್ನಪ್ಪಿ, 12 ಮಂದಿ ಗಾಯಗೊಂಡಿದ್ದಾರೆ.  ಖಾರಿಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಂಬೊ ಚೌಕ್ ಬಳಿ ಟ್ರಕ್ ನಲ್ಲಿದ್ದ ವಲಸಿಗರು ಖಗೇರಿಯಾದತ್ತ ಪ್ರಯಾಣ ಬೆಳೆಸಿದ್ದ ಸಂದರ್ಭ, ರಾಷ್ಟ್ರೀಯ ಹೆದ್ದಾರಿ -31ರಲ್ಲಿ ಈ ಅಪಘಾತ ಸಂಭವಿಸಿದೆ.  ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್ ರಸ್ತೆಬದಿಯ ಕಂದಕಕ್ಕೆ ಬಿದ್ದು, ಏಳು ವಲಸಿಗರು ಸ್ಥಳದಲ್ಲೇ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡರು.  ಗಾಯಗೊಂಡವರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು   ನವಗಚಿಯಾದ ಉಪ ವಿಭಾಗೀಯ ಅಧಿಕಾರಿ ಮುಖೇಶ್ ಕುಮಾರ್ ತಿಳಿಸಿದ್ದಾರೆ.  ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಎಲ್ಲಾ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.