ರಸ್ತೆ ಅಪಘಾತ: ಖ್ಯಾತ ಹಿನ್ನಲೆ ಗಾಯಕಿ ಗೀತಾ ಮಲಿ ದುರ್ಮರಣ

 ಮುಂಬೈನ 15 :      ಮಹಾರಾಷ್ಟ್ರದ ಥಾಣೆ ಬಳಿ  ಸಂಭವಿಸಿದ  ರಸ್ತೆ ಅಪಘಾತದಲ್ಲಿ ಮರಾಠಿ  ಚಿತ್ರರಂಗದ  ಖ್ಯಾತ ಹಿನ್ನಲೆ ಗಾಯಕಿ ಗೀತಾ ಮಲಿ ದುರ್ಮಣಕ್ಕೀಡಾಗಿದ್ದಾರೆ  ಎಂದು  ಪೊಲಿಸರು ಹೇಳಿದ್ದಾರೆ.  ಅಮೆರಿಕಾದಿಂದ ಬಂದಿದ್ದ ಗೀತಾ ನಾಸಿಕ್ ನಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದ ಸಮುದಲ್ಲಿ ಈ  ದುರಂತ ಸಭವಿಸಿದೆ ಎನ್ನಲಾಗಿದೆ. ಮುಂಬೈ - ಆಗ್ರಾ ಹೆದ್ದಾರಿಯಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ  ವೇಳೆ ರಸ್ತೆ ಬದಿ ನಿಲ್ಲಿಸಲಾಗಿದ್ದ  ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು ಪರಿಣಾಮ  ಗೀತಾ ಮೃತಪಟ್ಟಿದ್ದಾರೆ  ಎಂದು ವರದಿಯಾಗಿದೆ. ಕಾರಿನಲ್ಲಿದ್ದ ಆಕೆಯ ಪತಿ ವಿಜಯ್ ಕೂಡಾ ಗಂಭೀರ ಗಾಯಗೊಂಡಿದ್ದು ಅವರನ್ನು  ಆಸ್ಪತ್ರೆಗೆ ದಾಖಲು ಮಾಡಲಾಗಿದೆ.