ರಸ್ತೆ- ಚರಂಡಿ ಕಾಮಗಾರಿಗೆ ಚಾಲನೆ

ಲೋಕದರ್ಶನ ವರದಿ

ಚಿಕ್ಕೋಡಿ 19:  ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ ನೀಡಿದರು. 

ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿಮರ್ಾಣ ಕಾಮಗಾರಿ ಮಂಜೂರಾಗಿದೆ. ಈ ಕಾಮಗಾರಿಗಳಿಗೆ ದಿ.18ರಂದು ಚಾಲನೆ ನೀಡಲಾಯಿತು.  

"ಚಿಕ್ಕೋಡಿ ಕ್ಷೇತ್ರದಲ್ಲಿ ಪ್ರಕಾಶ ಹುಕ್ಕೇರಿ ಶಾಸಕರಾಗಿದ್ದ ಕಾಲದಿಂದಲೂ ನಿರಂತರ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುತ್ತ ಬರಲಾಗಿದೆ. ಸರಕಾರ ಯಾವುದೇ ಇದ್ದರೂ ಕ್ಷೇತ್ರಕ್ಕೆ ಸಾಕಷ್ಟು ಅನುಧಾನ ತರಲಾಗುತ್ತಿದೆ. ಕ್ಷೇತ್ರದ ಜನರ ಎಲ್ಲ ಬೇಡಿಕೆಗಳಿಗೆ ನಿರಂತರ ಸ್ಪಂದಿಸುತ್ತಿರುವುದರಿಂದಲೇ ಜನರು ನಮ್ಮನ್ನು ಪ್ರತಿ ಬಾರಿ ಆಯ್ಕೆ ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತ ಬರುತ್ತಿದ್ದಾರೆ" ಎಂದು ಗಣೇಶ ಹುಕ್ಕೇರಿ ಈ ಸಂದರ್ಭದಲ್ಲಿ ತಿಳಿಸಿದರು. ಗ್ರಾಮಸ್ಥರು, ಸ್ಥಳೀಯ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.