ಮುಂಬೈ, ಸೆ 10 ಬಾಲಿವುಡ್ ನಟ ರಿಷಿ ಕಪೂರ್ ಸುಮಾರು ಒಂದು ವರ್ಷಗಳ ಕಾಲ ವಿದೇಶದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ್ದಾರೆ.
ರಿಷಿ ಕಪೂರ್, ಸುಮಾರು ಒಂದು ವರ್ಷದಿಂದ ನ್ಯೂಯಾರ್ಕ್ನ್ಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ತಡರಾತ್ರಿ ತಮ್ಮ ಪತ್ನಿ ನೀತು ಕಪೂರ್ ಜೊತೆಗೆ ಮನೆಗೆ ಮರಳಿದ್ದಾರೆ.
ರಿಷಿ ಅವರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ನೀತು, ತಮ್ಮ ಪತಿಯೊಂದಿಗೆ ವಿದೇಶದಲ್ಲಿದ್ದರು.
ಸ್ವದೇಶಕ್ಕೆ ಮರಳಿರುವುದರ ಕುರಿತು ರಿಷಿ ಕಪೂರ್, 11 ತಿಂಗಳ 11 ದಿನಗಳ ನಂತರ ಮನೆಗೆ ಹಿಂತಿರುಗಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ
ನ್ಯೂಯಾರ್ಕ್ನ್ಲ್ಲಿದ್ದಾಗಲೂ ರಿಷಿ ಕಪೂರ್, ಟ್ವಿಟರ್ನಲ್ಲಿ ಸಕ್ರಿಯರಾಗಿದ್ದರು. ತಾವು ಆರೋಗ್ಯವಾಗಿ ಮನೆಗೆ ಮರಳಿರುವುದರ ಕುರಿತು ಅಭಿಮಾನಿಗಳಿಗೆ ಅವರು ಟ್ವೀಟರ್ ಮೂಲಕ ಮಾಹಿತಿ ನೀಡಿದ್ದಾರೆ.