ನ್ಯೂಜಿಲೆಂಡ್ ಪ್ರವಾಸದಲ್ಲಿ ಪ್ರೇಕ್ಷಕರಾಗಿ ಉಳಿದ ರಿಷಭ್ ಪಂತ್

ನವದೆಹಲಿ, ಫೆ.12 :  ವಿಶ್ವಕಪ್ ನಂತರ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಸರಿದ ಬಳಿಕ ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಪರಿಗಣಿಸಲಾಗಿತ್ತು, ಆದರೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಅವರು ಕೇವಲ ಪ್ರೇಕ್ಷಕರಾಗಿ ಉಳಿದಿದ್ದಾರೆ. ಮತ್ತು ಇಲ್ಲಿಯವರೆಗೆ ಎಂಟು ಪಂದ್ಯಗಳಲ್ಲಿ ಅವರು ಒಂದು ಪಂದ್ಯದಲ್ಲೂ ಆಡಲು ಅವಕಾಶ ಪಡೆದಿಲ್ಲ.   

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್‌ನ ಸೆಮಿಫೈನಲ್ಸ್ನಲ್ಲಿ ಭಾರತವು ನ್ಯೂಜಿಲೆಂಡ್‌ನ ಕೈಯಲ್ಲಿ ಸೋಲು ಕಂಡಿತು. ಇದೇ ಪಂದ್ಯದಲ್ಲಿ ಎಂಎಸ್ ಡಿ ಕೊನೆಯ ಓವರ್ ನಲ್ಲಿ ರನ್ ಔಟ್ ಆದರು. ಅಂದಿನಿಂದ ಧೋನಿ ಭಾರತೀಯ ತಂಡದಿಂದ ಹೊರಗಿದ್ದಾರೆ. ಅಲ್ಲದೆ, ಆಗಿನ ಆಯ್ಕೆ ಸಮಿತಿಯ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಕೂಡ ತಂಡದ ಗಮನವು ಭವಿಷ್ಯದ ಆಟಗಾರರತ್ತ ನೆಟ್ಟಿದೆ. ಮತ್ತು ಪಂತ್ ಅವರ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಸ್ಪಷ್ಟಪಡಿಸಿದ್ದರು.  

22 ವರ್ಷದ ಪಂತ್ ರಿಗೆ ಅವಕಾಶಗಳು ಲಭಿಸಿದವು. ಆದರೆ ಅವರು ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುವಲ್ಲಿ ಎಡವಿದರು. ತಂಡದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಮತ್ತು ಪ್ರಸಾದ್ ಅವರು ಪಂತ್ ಮೇಲೆ ಭರವಸೆಯ ಇಡುತ್ತಾ ಸಾಗಿದರು. ಆದರೆ, ಪಂತ್ ಅವರ ಭರವಸೆಗೆ ಪೆಟ್ಟು ನೀಡಿದರು.  

ನ್ಯೂಜಿಲೆಂಡ್ ಪ್ರವಾಸದಲ್ಲಿ ಟಿ 20, ಏಕದಿನ ಮತ್ತು ಟೆಸ್ಟ್ ಪಂದ್ಯಗಳ ಎಲ್ಲಾ ಮೂರು ಸ್ವರೂಪಗಳಲ್ಲಿ ಪಂತ್ ಅವರನ್ನು ಭಾರತೀಯ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪಂತ್ ಆಡಿದ್ದರು. ಆದರೆ ಈ ಸಮಯದಲ್ಲಿ ಗಾಯಗೊಂಡರು. ಅರೆಕಾಲಿಕ ವಿಕೆಟ್ ಕೀಪರ್ ಲೋಕೇಶ್ ರಾಹುಲ್ ಅವರಿಗೆ ರಾಜ್ಕೋಟ್ ಮತ್ತು ಬೆಂಗಳೂರಿನಲ್ಲಿ ನಡೆದ ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳಲ್ಲಿ ಅವಕಾಶ ಪಡೆದರು.