ನ್ಯಾಯವಾದಿಗಳ ಕಕ್ಷಿದಾರರ ನೋವುಗಳಿಗೆ ಸ್ಪಂದಿಸಿ: ಪಾಚಾಪುರೆ

ಲೋಕದರ್ಶನವರದಿ

ಶಿಗ್ಗಾವಿ ಃ ನ್ಯಾಯವಾದಿಗಳ  ಕಕ್ಷಿದಾರರ ನೋವುಗಳನ್ನು ಅರಿತು ಸ್ಪಂಧಿಸಿ ಅವರಿಗೆ ಆದಷ್ಟು ಬೇಗ ನ್ಯಾಯದೊರಕಿಸುವ ನಿಟ್ಟಿನಲ್ಲಿ ನ್ಯಾಯವಾದಿಗಳು ಕಠಿಣ ಶ್ರಮವಹಿಸುವಂತೆ ಹಾಗೂ ತಮ್ಮ ಮಾನಸಿಕ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವಂತೆ ನ್ಯಾಯವಾದಿಗಳಿಗೆ  ವಿಶ್ರಾಂತ ಉಚ್ಚನ್ಯಾಯಾಲಯದ ನ್ಯಾಯಮೂತರ್ಿಗಳಾದ ಎಸ್.ಎ.ಪಾಚಾಪುರೆ ಸಲಹೆ ನೀಡಿದರು.

     ಪಟ್ಟಣದ ಜೆ.ಎಮ್.ಎಪ್.ಸಿ. ನ್ಯಾಯಾಲಯದ ಆವರಣದಲ್ಲಿ ನ್ಯಾಯವಾದಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಣ ಗಳಿಕೆ ಮುಖ್ಯವಲ್ಲ ಒಳ್ಳೆಯ ವಿಚಾರದೊಂದಿಗೆ ವೃತ್ತಿಯಲ್ಲಿ ಉತ್ತಮ ಸಾಧನೆ ತೋರಿ ಹೆಸರುಗಳಿಸಿಸುವದು ತುಂಬಾ ಪ್ರಮುಖವಾಗಿದೆ. 

           ನ್ಯಾಯವಾದಿಗಳು ವೃತ್ತಿಯಲ್ಲಿ ಉತ್ತಮ ಸಾಧನೆ ತೋರಿ ಮಾನಸಿಕ ಸಂತೋಷದೊಂದಿಗೆ ಆರೋಗ್ಯಮಯ ಜೀವನ ಸಾಗಿಸುವಂತೆ ನ್ಯಾಯವಾದಿಗಳ ದಿನಾಚರಣೆಗೆ ಶುಭ ಕೋರಿದರು.

     ಮಾನಸಿಕ ವೈದ್ಯರಾದ ಡಾ. ಪಾಂಡುರಂಗಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಲ್ಲಿ ಮಾನಸಿಕ ಒತ್ತಡಗಳು ಹೆಚ್ಚಾಗಿದ್ದು, ಮಾನಸಿಕ ಕಾಯಿಲೆಯೊಂದಿಗೆ ಆರೋಗ್ಯದ ಸಮಸ್ಯೆ ಎದುರಿಸಬೇಕಾದ ಸಂದರ್ಭಗಳು ಹೆಚ್ಚಾಗಿದ್ದು ನ್ಯಾಯವಾದಿಗಳು ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

    ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಸ್.ಬಿ.ಲಕ್ಕಣ್ಣವರ ಮಾತನಾಡಿ ನ್ಯಾಯವಾದಿಗಳ ಮೇಲೆ ಕೆಲವು ಸಂದರ್ಭದಲ್ಲಿ ಬೆದರಿಕೆಗಳು ಹಲ್ಲೆಗಳು ಆಗುತ್ತಿದ್ದು ನ್ಯಾಯವಾದಿಗಳ ರಕ್ಷಣೆಗೆ ಮಾಗರ್ೋಪಾಯ ರೂಪಿಸುವ ನಿಟ್ಟಿನಲ್ಲಿ ಸಕರ್ಾರ ಯೋಚಿಸುವ ಅಗತ್ಯತೆಯಿದೆ ಎಂದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಶಿಗ್ಗಾಂವ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶರಾದ ವಿಜಯಕುಮಾರ ಕನ್ನೂರ, ಹಾಗೂ ನ್ಯಾಯಾಧೀಶರಾದ ಶ್ರೀದೇವಿ ದರಬಾರೆ. 

  ನಿವೃತ್ತ ಜಿಲ್ಲಾ ನ್ಯಾಧೀಶರಾದ ಎಸ್.ಕೆ.ಕುರಗೋಡಿ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಎಪ್.ಟಿ.ಕಾಮರೆಡ್ಡಿ ನ್ಯಾಯವಾದಿಗಳಿಗೆ ಶುಭ ಕೋರಿದರು. 

  ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳನ್ನು   ಸನ್ಮಾನಿಸಲಾಯಿತು. ಜಿ.ಆಯ್.ಸಜ್ಜನಗೌಡ್ರ ಸ್ವಾಗತಿಸಿ ಮಾತನಾಡಿದರು.

   ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ಎಮ್, ಗಾಣಿಗೆರ, ಕಾರ್ಯದಶರ್ಿಗಳಾದ ಬಿ.ಎ.ಬಾಲೆಹೊಸೂರ, ಹಿರಿಯ ನ್ಯಾಯವಾದಿಗಳಾದ ಪರೋಕಿ, ಕೆ.ಎಸ್.ಪಾಟೀಲ, ಎಪ್.ಎಸ್.ಕೋಣನವರ, ಜಿ.ಎಸ್.ಅಂಕಲಕೋಟಿ, ಎಸ್.ಕೆ.ಅಕ್ಕಿ ಎಮ್.ಎಚ್.ಬೆಂಡಿಗೇರಿ, ಎ.ಎ. ಗಂಜೆನವರ,  ಬಿ.ಜಿ.ಕಕೂಲಿ, ಎಮ್.ಎಮ್.ಕಾರಡಗಿ, ಎನ್.ಎನ್.ಪಾಟೀಲ, ಎಸ್.ಎಮ್ ಕಮ್ಮಾರ, ಎಮ್.ವಿ. ಮುದಕಣ್ಣವರ, ಬಿ.ಪಿ.ಗುಂಡಣ್ಣವರ, ಕೆ.ಎನ್. ಹುತ್ತನಗೌಡ್ರ, ಬಿ.ಕೆ.ಮೆತ್ತಿಗಟ್ಟಿ, ಎಮ್.ಆರ್.ಸಂಶಿ, ಸಿ.ಎಪ್.ಅಂಗಡಿ, ಕೆ.ಎನ್.ಭಾರತಿ, ಲಕ್ಷ್ಮಿ ಕಡಕೋಳ, ಸೇರಿದಂತೆ ನ್ಯಾವಾದಿಗಳ ಸಂಘದ ಸದಸ್ಯರು ಉಪಸ್ಥಿತರಿದ್ದರು. ಬಿ.ಜಿ.ರಾಗಿ ಕಾರ್ಯಕ್ರಮ ನಿರ್ವಹಿಸಿದರು