ಗ್ರಾಮಗಳ ಸಮಸ್ಯೆಗಳಿಗೆ ಸ್ಪಂದನೆ: ಶಾಸಕಿ ಅಂಜಲಿ

ಲೋಕದರ್ಶನ ವರದಿ

ಕಕ್ಕೇರಿ: ಇತ್ತೀಚೆಗೆ ಖಾನಾಪೂರ ತಾಲೂಕಿನ ಗವ್ಹಾಳಿ, ಪಾಸ್ಟೋಳ್ಳಿ, ಮತ್ತು ಕೋಂಗಳಾ* ಗ್ರಾಮಗಳ ಗ್ರಾಮಸ್ಥರು ಶಾಸಕಿ ಡಾ. ಅಂಜಲಿ ನಿಂಬಾಳಕರ ಅವರನ್ನು ಭೇಟಿಯಾಗಿ ವಿಪರೀತ ಮಳೆಯ ಹೊಡೆತಕ್ಕೆ ಹದಗೆಟ್ಟ ರಸ್ತೆಗಳು ಮತ್ತು ಕಿತ್ತುಹೋದ ಸೇತುವೆಗಳ ಪರಿಸ್ಥಿತಿಯನ್ನು ವಿವರಿಸಿ, ಸೂಕ್ತ ಪರಿಹಾರ ಕಾರ್ಯಗಳನ್ನು ಕೈಕೊಳ್ಳಲು ಮನವಿ ಮಾಡಿಕೊಂಡರು. ಶಾಸಕರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತ, ತಕ್ಷಣ ಜಿ. ಪಂ. ಇಂಜಿನಿಯರ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪಕರ್ಿಸಿ,ಗ್ರಾಮಗಳ ಸಮಸ್ಯೆಗಳ ಬಗ್ಗೆ ಪರಿಶೀಲನೆಗೆ ಕಳುಹಿಸಿದರು. ಕೇವಲ ಎರಡೇ ದಿನದಲ್ಲಿ ಆ ಮೂರು ಗ್ರಾಮಗಳ ಸಾರ್ವಜನಿಕರ ಸಮ್ಮುಖದಲ್ಲಿ  ರಸ್ತೆಯ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಾಸಕರು ತಮ್ಮ ಜನಪರ ಕಾಳಜಿಯನ್ನು ಮೆರೆದರು. ನುಡಿದಂತೆ ನಡೆವ ಶಾಸಕರು ಎಂಬ ಗರಿಮೆಯೊಂದಿಗೆ ತುಂಬಾ ಕ್ರಿಯಾಶೀಲರಾಗಿ ತಾಲೂಕಿನ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಕಾರ್ಯತತ್ಪರರಾಗಿರುವುದು ಎದ್ದು ಕಾಣುತ್ತಿದೆ. ತಾಲೂಕಿನ ಸರ್ವತೋಮುಖ ಅಭಿವೃದ್ಧಿಯೇ ತಮ್ಮ ಧ್ಯೇಯ*  ಇಟ್ಟುಕೊಂಡ ಶಾಸಕರ ಕಾರ್ಯ ಚಟುವಟಿಕೆಗಳನ್ನು  ಗಮನಿಸಿದ  ಗ್ರಾಮಸ್ಥರೆಲ್ಲರೂ  ಶಾಸಕಿ ಡಾ. ಅಂಜಲಿತಾಯಿ ನಿಂಬಾಳಕರ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅಪರ್ಿಸಿದ್ದಾರೆ.  

ಶನಿವಾರ  ಶಾಸಕಿ  ಡಾ. ಅಂಜಲಿತಾಯಿ ಹೇಮಂತ ನಿಂಬಾಳಕರ ಅವರು ಇದ್ದಲಹೊಂಡ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಇದ್ದಲಹೊಂಡ, ಸಿಂಗಿನಕೊಪ್ಪ, ಮಾಳ ಅಂಕಲೆ,  ಜಾಡ-ಅಂಕಲೆ ಗ್ರಾಮಗಳ   ಅಂಗನವಾಡಿ,  ಶಾಲೆಗಳ ಶೌಚಾಲಯ,  ಶಾಲಾ ಕಾಂಪೌಂಡ್,  ಸ್ಮಶಾನ ಭೂಮಿ,  ಗ್ರಾಮದ ಕುಡಿವ ನೀರಿನ ಸಮಸ್ಯೆ,  ರಸ್ತೆಯ ಸಮಸ್ಯೆ , ವಿದ್ಯುತ್ ಸಮಸ್ಯೆ,  ಈ ಎಲ್ಲಾ ಸಮಸ್ಯೆಗಳ ಬಗ್ಗೆ  ಗ್ರಾ. ಪಂ. ಸದಸ್ಯರುಗಳ ಸಮ್ಮುಖದಲ್ಲಿ ಚಚರ್ೆ ಮಾಡಿ ಪರಿಹಾರ ಮಾಡುವ ನಿಟ್ಟಿನಲ್ಲಿ  ಶಾಸಕರು ತಕ್ಷಣ ಕಾರ್ಯನಿರತರಾಗಿ ಇದ್ದಲಹೊಂಡ ಗ್ರಾಮದಲ್ಲಿ ಸಿ.ಸಿ.ರೋಡ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭದಲ್ಲಿ   ಗ್ರಾಮಸ್ಥರೆಲ್ಲರು ಉಪಸ್ಥಿತರಿದ್ದರು.