ಲೋಕದರ್ಶನ ವರದಿ
ಯಲಬುರ್ಗಾ 08: ಪಟ್ಟಣವನ್ನು ಅತ್ಯಂತ ಸುಂದರವಾಗಿಡಲು ನಮ್ಮ ಪಟ್ಟಣ ಪಂಚಾಯತಿಯ ಪೌರಕಾಮರ್ಿಕರು ಹಗಲಿರುಳು ಶ್ರಮಿಸುತ್ತಿದ್ದು ಅವರಿಗೆ ಪಟ್ಟಣದ ನಿವಾಸಿಗಳು ಸಹಕಾರ ನೀಡಿದರೆ ಪಟ್ಟಣವನ್ನು ಸುಂದರವಾಗಿಡಲು ಸಾದ್ಯವಾಗುತ್ತದೆ ಎಂದು ಪಪಂ ಆಡಳಿತಾಧಿಕಾರಿಗಳು ಹಾಗೂ ತಹಸೀಲ್ದಾರ ಶ್ರೀಶೈಲ್ ತಳವಾರ ಹೇಳಿದರು.
ಪಟ್ಟಣದ ಕನ್ನಡ ಕ್ರೀಯಾ ಸಮಿತಿ ವೃತ್ತದಲ್ಲಿ ಪಪಂ ಯಲಬುರ್ಗಾ ಸಹಯೋಗದಲ್ಲಿ ನಡೆದ ಅಂಗಿಕಾರ ಆಂದೋಲನ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದ ಜನತೆ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಬಾರದು ತ್ಯಾಜ್ಯಗಳನ್ನು ಬೆರ್ಪಡಿಸಿ ಹಸಿ ಕಸವನ್ನು ಹಸಿರು ತೊಟ್ಟಿಯಲ್ಲಿ ಹಾಗೂ ಒಣ ಕಸವನ್ನು ನೀಲಿ ತೊಟ್ಟಿಯಲ್ಲಿ ಹಾಕಬೇಕು ನಿಮ್ಮ ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು, ಆರೋಗ್ಯ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು, ಶೌಚಾಲಯವನ್ನು ತಪ್ಪದೆ ಬಳಕೆ ಮಾಡಿ ಬಯಲು ಬಹಿದರ್ೆಶಯಿಂದಾಗುವ ತೊಂದರೆಗಳನ್ನು ತಪ್ಪಿಸಿ, ಪ್ರತಿಯೊಬ್ಬರು ನೀರಿನ ಸಂರಕ್ಷಣೆಗೆ ಮುಂದಾಗಿ ಜಲಶಕ್ತಿ ಯೋಜನೆಯು ಸಫಲವಾಗುವಂತೆ ಮಾಡಿ ಎಂದರು.
ಪಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ ಮಾತನಾಡಿ ಎಲ್ಲರೂ ಹಸಿರು ವಾತಾವರಣ ನಿಮರ್ಿಸಲು ಪ್ರಯತ್ನಿಸಿ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ, ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇದಿಸಲಾಗಿದ್ದು ಯಾರು ಪ್ಲಾಸ್ಟಿಕ್ ಬಳಸಬಾರದು ಪರಿಸರ ಸಂರಕ್ಷಣೆಗಾಗಿ ಗೋಣಿ ಮತ್ತು ಬಟ್ಟೆಯ ಚೀಲಗಳನ್ನು ಬಳಸಬೇಕು ಎಂದರು.
ಪಪಂ ಸದಸ್ಯರಾದ ವಸಂತಕುಮಾರ ಭಾವಿಮನಿ, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ಹನುಮಂತಪ್ಪ ಭಜಂತ್ರಿ, ಬಸವಲಿಂಗಪ್ಪ ಕೊತ್ತಲ, ಮುಖಂಡರಾದ ಈರಪ್ಪ ಬಣಕಾರ, ದೊಡ್ಡಯ್ಯ ಗುರುವಿನ ಸೇರಿದಂತೆ ಕಲಾ ತಂಡದವರು ಪಪಂ ಸಿಬ್ಬಂದಿಗಳು ಹಾಜರಿದ್ದರು.