ಶಿಗ್ಗಾವಿ 07: ಅಕ್ಷರ ಜ್ಞಾನ ಪ್ರಮಾಣಪತ್ರಕ್ಕೆ ಮೀಸಲಾಗಿದೆ ಹೊರತು ಸಂಸ್ಕಾರಯುತ ಸಂಸ್ಕೃತಿಯನ್ನು ಉಳಿಸಲು ಅಲ್ಲ ಆ ನಿಟ್ಟಿನಲ್ಲಿ ಶಿಗ್ಗಾವಿ ಸಂಗನಬಸವ ಸ್ವಾಮೀಜಿಗಳು ಒಂಬತ್ತು ದಿನದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮವನ್ನು ಮಾಡಿ ಸಂಸ್ಕೃತಿ ಕ್ರಾಂತಿಯನ್ನು ಮಾಡುತ್ತಿದ್ದಾರೆ ಎಂದು ಚಿತ್ರದುರ್ಗ ಬೋವಿ ಮಠದ ಸಿದ್ದರಾಮೇಶ್ವರ ಶ್ರೀಗಳು ಹೇಳಿದರು.
ಪಟ್ಟಣದಲ್ಲಿ ವಿರಕ್ತಮಠದಲ್ಲಿ ನಡೆದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಸಾನಿದ್ಯವಹಿಸಿ ಮಾತನಾಡಿ, ಭಾರತ ದೇಶದ ಪ್ರತಿಯೊಂದು ವಸ್ತುಗಳನ್ನು ಮಾರಾಟ ಮಾಡಲು ಲಕ್ಷ ಕೋಟಿ ಕೊಟ್ಟು ರಾಯಬಾರಿಗಳನ್ನು ಇಡುತ್ತಾರೆ ಆದರೆ ನಮ್ಮ ಸಂಸ್ಕೃತಿಯನ್ನು ಉಳಿಸಲು ಯಾವ ರಾಯಬಾರಿಗಳು ಇಲ್ಲ ಇದು ನಮ್ಮ ವಿಪರ್ಯಾಸ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸಮಬಾಳು ಸಮಪಾಲು ಎಂದು ಹೇಳುವ ನಾವು ನಿವೇಲ್ಲ ಇನ್ನೂ ಕೀಳು ಷೋಷಣೆಯನ್ನು ಮಾಡುವುದು ಬಿಟ್ಟಿಲ್ಲ ಜೊತೆಗೆ ಸಾಮಾಜಿಕ ಜಾಲತಾಣದಿಂದ ವ್ಯಕ್ತಿಯ ಮೇಲೆ ಅಲ್ಲ ವ್ಯಕ್ತಿತ್ವದ ಮೇಲೆ ತೇಜೋವದೆ ಆಗುತ್ತಿದೆ ಎಂದರು.
ಮಾಜಿ.ವಿ.ಪ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ ಶರಣರ, ಸಂತರ, ತ್ಯಾಗಿಗಳ ಪುಣ್ಯಾರಾದನೆ ಮಾಡುತ್ತಿರುವುದು ಅಲ್ಲದೇ ಸಮಸ್ತ ಜನತೆಗೆ ದಿನ ನಿತ್ಯದ ಬದುಕನ್ನು ಕಲಿಸುವ ಬಸವಣ್ಣವರ ವಚನಗಳು ಮೂಲಕ ಸಂತೃಪ್ತಿ ಜೀವನ ನೆಡೆಸುವ ಕಾರ್ಯ ವಿರಕ್ತಮಠದಿಂದ ನೆಡೆಯುತ್ತಿದ್ದು ಮಕ್ಕಳಿಗೆ ಅಂಕ ಮುಖ್ಯವಲ್ಲ ವ್ಯವಹಾರಿಕ ಜ್ಞಾನದ ಅವಶ್ಯಕತೆಯಿದೆ ಎಂದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಕರ್ನಾಟಕ ದಲ್ಲಿ ಭಾವ್ಯಕತೆ ಸಾರುವ ಹಾಗೂ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವ ಮಠಗಳಲ್ಲಿ ಶಿಗ್ಗಾವಿ ವಿರಕ್ತಮಠ ಒಂದು ಸಮಸ್ತ ಸಾರ್ವಜನಿಕರು ಪ್ರತಿನಿತ್ಯ ಎಂಟು ಗಂಟೆಗಳ ಕಾಲ ಶ್ರಮವಹಿಸಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿದರೆ ಆರ್ಥಿಕ ವಾಗಿ ಪ್ರಗತಿ ಸಾದಿಸುವುದರ ಜೊತೆಗೆ ನಮ್ಮ ಆತ್ಮಸ್ತೈರ್ಯವನ್ನು ಹೆಚ್ಚಿಸಿಕೊಂಡು ಸ್ವಾವಲಂಬಿಯಾಗಿ ಬದುಕಬಹುದು ಅಲ್ಲದೇ ಸಮಾಜದಲ್ಲಿ ಗೌರವದ ಜೊತೆಗೆ ನಮ್ಮ ಜವ್ದಾಬಾರಿಯನ್ನು ಹೆಚ್ಚಿಸುತ್ತದೆ ಎಂದರು.
ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿ, ಮಡಿವಾಳ ಮಾಚಿದೇವ ಮಹಾಸ್ವಾಮಿಗಳು ಚಿತ್ರದುರ್ಗ, ಬಸವ ಶಾಂತಲಿಂಗ ಸ್ವಾಮೀಜಿ ಹೊಸಮಠ ಹಾವೇರಿ, ಚನ್ನವಿರೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಶಿಕಾರಿಪೂರ, ಬಸವಕಿರಣ ಮಹಾಸ್ವಾಮಿಗಳು ಕಿಲುಮೆ ಸ್ವಾಮಿ ಮಠ ಚಳಕೇರಿ, ಮಾತನಾಡಿದರು. ಅಗಡಿ ಡಾ.ಗುರುಲಿಂಗ ಸ್ವಾಮೀಜಿ ಅಕ್ಕಿಮಠ ಅಗಡಿ, ಪ್ರವಚನ ನೀಡಿದರು.
ಶಿಗ್ಗಾವಿ ತಾಲ್ಲೂಕು ಬೋವಿ ಸಮಾಜದ ಅಧ್ಯಕ್ಷ ಅರ್ಜುನ ಹಂಚಿನಮನಿ , ಪತ್ರಕರ್ತರಾದ ಬಸವರಾಜ ಹಡಪದ, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ . ಧರ್ಮ ಕಾರ್ಯ ದಾನಿಗಳಾದ ಶೇಖಣ್ಣ ಮೂಲಿಮನಿ, ಬಸವರಾಜ ವಾಲಿಶೆಟ್ಟರ, ಎಸ್.ಕೆ.ಕಳ್ಳಿಮಠ, ಯಲ್ಲಪ್ಪ ಸಾಳಂಕೆ ಇವರೆಲ್ಲರನ್ನು ಹಾಗೂ ಪೂಜ್ಯ ಶ್ರೀಗಳನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಐಟಿಐ ಕಾಲೇಜಿನ ಉಪನ್ಯಾಸಕ ಶಶಿಕಾಂತ ರಾಠೋಡ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.