ಧಾರವಾಡ 25: ವಿಜ್ಞಾನವನ್ನು ಕನ್ನಡದಲ್ಲಿ ಬರೆಯುವ ಹವ್ಯಾಸದ ಕಿಡಿ ಹೊತ್ತಿಸುವ ಈ ಸಮ್ಮೇಳನ ಸಫಲವಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪ್ರಮೋದ ಗಾಯಿ ಹೇಳಿದರು.
ನಗರದ ಕನರ್ಾಟಕ ವಿಶ್ವವಿದ್ಯಾಲಯದ ಸುವರ್ಣ ಸಮುಚ್ಛಯ ಸಭಾಂಗಣದಲ್ಲಿ ಕನರ್ಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕನರ್ಾಟಕ ಸರಕಾರ, ಧಾರವಾಡ ಪ್ರಾದೇಶಿಕ ವಿಜ್ಞಾನಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸಮ್ಮೇಳನದ ಸಮಾರೋಪ ಸಮಾರಂಭದ ಆತಿಥ್ಯ ವಹಿಸಿ ಮಾತನಾಡಿ, ಕನ್ನಡದಲ್ಲಿ ಸಂಶೋಧನಾ ಲೇಖನಗಳು ಮತ್ತು ಪ್ರಬಂಧಗಳ ಪ್ರಕಟಣೆಯಾಗಬೇಕು ಎಂದರು.
ವಿಜ್ಞಾನಿಗಳು ತಮ್ಮ ಸಂಶೋಧನೆಯ ಸಾರವನ್ನು ಕನ್ನಡದಲ್ಲಿಯೇ ಪ್ರಕಟಿಸಿದಾಗ ಮಾತ್ರ ಜನಸಾಮಾನ್ಯರಿಗೆ ಅರ್ಥವಾಗಲು ಸಾಧ್ಯ. ವಿಜ್ಞಾನ ವಿಷಯದ ಪ್ರಾಧ್ಯಾಪಕರು ಈ ಕುರಿತು ಅವಲೋಕಿಸಬೇಕು. ವಿಜ್ಞಾನ ಸಾಹಿತಿಗಳು ಕನ್ನಡದಲ್ಲಿ ಹೆಚ್ಚು ಕವನಗಳು, ಕಥೆ, ನಾಟಕಗಳನ್ನು ರಚಿಸಿದಾಗ ಮಾತ್ರ ವಿದ್ಯಾಥರ್ಿಗಳಲ್ಲಿ ವಿಜ್ಞಾನ ವಿಷಯದ ಆಸಕ್ತಿ ಮೂಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕನರ್ಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅಧ್ಯಕ್ಷ ಪದ್ಮಶ್ರೀ ಡಾ. ಎಸ್.ಕೆ ಶಿವಕುಮಾರ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹೊಸ ವಿಷಯಗಳನ್ನು ಜನರಿಗೆ ತಿಳಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದು ಎರಡನೇ ಸಮ್ಮೇಳನವಾಗಿದ್ದು, ಮೈಸೂರಲ್ಲಿ ನಡೆದ ಮೊದಲ ಸಮ್ಮೇಳನಕ್ಕಿಂತ ಹೆಚ್ಚು ಯಶಸ್ವಿಯಾಗಿದೆ. ಇಲ್ಲಿಯ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾಥರ್ಿಗಳಿಗೆ ಈ ಸಮ್ಮೇಳನ ಅತ್ಯಂತ ಪೂರಕವಾಗಿದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪಧರ್ೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕವಿಗೋಷ್ಠಿ: ದಿವ್ಯಆಚಾರಿ (ಪ್ರಥಮ), ಬಸವರಾಜ ಇಂಗಳಗಿ (ದ್ವಿತೀಯ), ಡಾ. ಲಿಂಗರಾಜರಾಮಾಪುರ (ತೃತೀಯ). ಭಿತ್ತಿಚಿತ್ರ ಸ್ಪಧರ್ೆ - ಭೌತಶಾಸ್ತ್ರ ಹಾಗೂ ರಾಸಾಯನ ಶಾಸ್ತ್ರ:ಸಾತ್ವಿಕ್ಜಾಧವ (ಪ್ರಥಮ), ಡಾ. ಯು. ಶಾನವಾಡ (ದ್ವಿತೀಯ), ದಿವ್ಯಆಚಾರಿ ಹಾಗೂ ವಿಜಯ ಕಟ್ಟಿ (ತೃತೀಯ), ಸಚಿನ್ಜಿ.ಆರ್, ಮುರುಗೇಶಎಮ್.ಡಿ. (ಸಮಾಧಾನಕರ). ಭಿತ್ತಿಚಿತ್ರಜೀವ ಶಾಸ್ತ್ರ: ಮೋಹನ ಕುಮಾರ್ (ಪ್ರಥಮ), ಉಮರ್ ಪಾರುಕ್ ಹಾಗೂ ಸ್ಮಿತಾ ಹೆಗ್ಡೆ (ದ್ವಿತೀಯ), ಬಿ.ಎನ್.ನರೇಂದ್ರ ಬಾಬು (ತೃತೀಯ) ಬಹುಮಾನ ಪಡೆದರು. ವಿಜೇತರಿಗೆಪ್ರಥಮ 10000, ದ್ವಿತೀಯ 7500 ಹಾಗೂ ತೃತೀಯ 5000 ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಲೇಖಕ ಸಿ.ಬಿ. ಪಾಟೀಲ ರಚಿಸಿದ 150 ಸಿಂಪಲ್ ಸೈನ್ಸಎಕ್ಸಿಪಿರಿಮೆಂಟ್ಸ್ ಪುಸ್ತಕ ಬಿಡುಗಡೆ ಮಾಡಿದರು. ಇದರ ಜೊತೆಗೆ ಸಮ್ಮೇಳನ ಕುರಿತ ಕವಿವಿ ಪತ್ರಿಕೋದ್ಯಮ ವಿದ್ಯಾಥರ್ಿಗಳು ಹೊರತಂದ ವಿದ್ಯಾ ಸಮಾಚಾರ ವಿಶೇಷ ಸಂಚಿಕೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕನರ್ಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮುಖ್ಯ ಕಾರ್ಯದಶರ್ಿ ಎ.ಎಮ್. ರಮೇಶ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿದರ್ೇಶಕ ಪ್ರೊ. ಕೆ.ಬಿ. ಗುಡಸಿ, ಡಾ. ಸ.ರ. ಸುದರ್ಶನ ಮತ್ತಿತರರು ಹಾಜರಿದ್ದರು.