ಶೀಘ್ರವೇ ಔಷಧಿಗಳನ್ನು ವಿತರಿಸುವಂತೆ ನೊಂದ ಕುರಿಗಾರರಿಂದ ಆಗ್ರಹ

ಲೋಕದರ್ಶನ ವರದಿ

ಗದಗ: ಜಿಲ್ಲೆಯ ಸುತ್ತಮುತ್ತ ಈಗಾಗಲೇ ಹಲವಾರು ಖಾಯಿಲೆಗಳಿಂದ ಪ್ರತಿದಿನವು ನೂರಾರು ಕುರಿಗಳು ಮೇಕೆಗಳು ಮೃತಪಡುತ್ತಿದ್ದು ರೋಗಗಳಿಗೆ ಔಷಧ ಕೊರತೆ ಮುಖ್ಯ ಕಾರಣವಾಗಿದ್ದು ಹಾಗೂ ಈವರೆಗೆ ಮೃತಪಟ್ಟ ಕುರಿಗಳಿಗೆ ಪರಿಹಾರ ಧನ ವಿತರಣೆಯಾಗದೆ ಕುರಿಗಾಯಿಗಳು  ಆಥರ್ಿಕ ಸಂಕಷ್ಟದಲ್ಲಿದ್ದು, ಕೂಡಲೇ ಸರಕಾರ  ಕುರಿಗಳಿಗೆ ಔಷಧಿ ಹಾಗೂ ಮೃತಪಟ್ಟ ಕುರಿಗಳಿಗೆ ಪರಿಹಾರ ನೀಡಬೇಕೆಂದು ಹಾಲುಮತ ಮಹಾಸಭಾದ ನೇತೃತ್ವದಲ್ಲಿ ಗದಗ ಭಾಗದ ನೊಂದ ಕುರಿಗಾರರು ಪಶುಪಾಲನಾ  ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ  ಉಪನಿದರ್ೇಶಕ ಚೆನ್ನಕೇಶವಯ್ಯ ಅವರ  ಮೂಲಕ ಸರಕಾರಕ್ಕೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕುರಿಗಳಿಗೆ-ಮೇಕೆಗಳಿಗೆ ನೀಲಿ ನಾಲಿಗೆ ರೋಗ, ಕಾಲುಬೇನೆ, ಬಾಯಿಬೇನೆ, ಕಾಲುಗಡ್ಡೆ ಸೋರುವಿಕೆ, ಕೆಮ್ಮು, ಡೊಗ್ಗು ರೋಗ, ಬೇದಿ ರೋಗಗಳು  ತೀವೃವಾಗಿರುವದರಿಂದ ಇದರಿಂದ ಪ್ರತಿನಿತ್ಯ ನೂರಾರು ಕುರಿ-ಮೇಕೆಗಳು ಸಾವನ್ನಪ್ಪುತ್ತಿವೆ. ಕೂಡಲೆ ಇಲಾಕೆ ವತಿಯಿಂದ ಕುರಿಗಾರರಿಗೆ  ಕೂಡಲೇ ಔಷಧಿ ವಿತರಿಸುವಂತೆ ಆಗ್ರಹಿಸಿಲಾಯಿತು. 

ಈಗಾಗಲೇ ಜಿಲ್ಲೆಯಲ್ಲಿ ದುರಂತದಿಂದ ಮೃತಪಟ್ಟ ಕುರಿಗಳಿಗೆ ಸರಕಾರವು ಪರಿಹಾರವನ್ನು ಕೂಡಲೆ ವಿತರಿಸಿ  ಕುರಿಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾದ ಗೌರವಾಧ್ಯಕ್ಷ ನಾಗರಾಜ ಮೆಣಸಗಿ, ಅಧ್ಯಕ್ಷ ಪ್ರಲ್ಹಾದ ಹೊಸಳ್ಳಿ, ಕನರ್ಾಟಕ ಕುರಿ ಮತ್ತು ಉಣ್ಣಿ  ಅಭಿವೃದ್ದಿ ನಿಗಮದ ಸಹಾಯಕ ನಿದರ್ೇಶಕ ಆರ್. ಎಂ.ನಾಯ್ಕರ, ತಿಪ್ಪ ಪಶುಆಸ್ಪತ್ರೆಯ ಸಹಾಯಕ ನಿದರ್ೇಶಕರು ತಿಪ್ಪಣ್ಣ ಮುಖಂಡರಾದ ಸುರೇಶ ಗುಲಗಂಜಿ, ಸತೀಶ ಗಿಡ್ಡಹನುಮಣ್ಣರ, ಆನಂದ ಹಂಡಿ, ವಿನಯ ಮಾಯಣ್ಣವರ,   ದೇವಪ್ಪ ಮುರ್ಲಾಪೂರ, ಆನಂದ ಜೋಗಾಡೆ, ಶೇಖಪ್ಪ ಗಿಡ್ಡಹನುಮಣ್ಣವರ, ರಾಮಪ್ಪ ಬಟ್ಟೂರ, ಸತ್ಯಪ್ಪ ಗಿಡ್ಡಹನುಮಣ್ಣವರ, ರವಿ ಸೊರಟೂರ, ಪ್ರಕಾಶ ಕುರುಬರ, ಯಲ್ಲಪ್ಪ ಹುಲ್ಲೋಜಿ, ಹೂವಪ್ಪ ಶಿರೂರ, ಮುತ್ತಪ್ಪ ಡಂಬಳ, ಬಸಪ್ಪ ಕುರಬಗೇರಿ, ಬಸಲಿಂಗಪ್ಪ ಗಂಗಪ್ಪನವರ, ಹನುಮಂತ ಚೌಡಣ್ಣವರ, ಮಂಜು ಚೌಡಣ್ಣವರ, ಹನುಮಂತಪ್ಪ ಮುಲರ್ಾಪೂರ, ಮಲ್ಲಪ್ಪ ಮುಲರ್ಾಪೂರ, ಬಸಪ್ಪ ಗಿಡ್ಡಹನುಮಣ್ಣವರ, ವೀರಪ್ಪ ಅರಬರ, ಯಲ್ಲಪ್ಪ ಹುಲ್ಲೂರ, ಮಲ್ಲಪ್ಪ ಸವದತ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.