ಲೋಕದರ್ಶನವರದಿ
ಸಿಂದಗಿ18: ತಾಲೂಕಾ ಛಾಯಾಗ್ರಾಹಕರಿಗೆ ವಿಶೇಷ ಪ್ಯಾಕೇಜನಲ್ಲಿ ಪರಿಹಾರ ಒದಗಿಸಿಕೊಡುವಂತೆ ಆಗ್ರಹಿಸಿ ತಾಲೂಕಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಹಶೀಲ್ದಾರ ಸಂಜೀವಕುಮಾರ ದಾಸರ ಅವರ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ವಿವೇಕ ಕೊರವಾರ, ಪಂಡಿತ ಯಂಪೂರೆ, ರಾಜು ಚಳ್ಳಗಿ, ಮೋಹನ ಬಡಿಗೇರ ಮಾತನಾಡಿ, ಇಂದಿನ ತಂತ್ರಜ್ಞಾನದ ಹಾವಳಿಯಲ್ಲಿ ಛಾಯಾಗ್ರಾಹಕರ ವ್ಯಾಪಾರ ವಹಿವಾಟು ತೀರಾನೇ ಕಡಿಮೆಯಾಗಿದೆ ಅಲ್ಪಸ್ವಲ್ಪವಾಗಿ ವಹಿವಾಟು ನಡೆದಿತ್ತು ಅದರಲ್ಲಿ ಈ ಕೊರೊನಾ ಆವರಿಸಿ ಸುಮಾರು 2 ತಿಂಗಳಿನಿಂದ ಲಾಕ್ಡೌನ್ ಆಗಿದ್ದರಿಂದ ಯಾವುದೇ ಮದುವೆ, ಮುಂಜಿವೆ, ಸಭೆ-ಸಮಾರಂಭಗಳು ನಡೆಯದೇ ಇರುವುದರಿಂದ ಸಿಂದಗಿ ತಾಲೂಕಿನ ಛಾಯಾಗ್ರಾಹಕರ ಬದುಕು ಸಂಕಷ್ಟದಲ್ಲಿದು ಮತ್ತೆ 3 ತಿಂಗಳವರೆಗೆ ಯಾವುದೇ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ ಎಂದು ಸರಕಾರ ಆದೇಶ ಹೊರಡಿಸಿರುವುದರಿಂದ ತಾಲೂಕಿನ 2ನೂರಕ್ಕೂ ಅಧಿಕ ಸಂಕ್ಯೆಯಲ್ಲಿರುವ ಫೋಟೋಗ್ರಾಫರಗಳು ಗಂಭೀರ ಸ್ಥಿತಿ ಅನುಭವಿಸುಂತಾಗಿದ್ದು ಮುಖ್ಯಮಂತ್ರಿಗಳು ರಾಜ್ಯದ ಕೆಳವರ್ಗದ ಹಾಗೂ ಮಧ್ಯಮ ವರ್ಗದ ಸಮೂದಾಯದವರನ್ನು ಪರಿಗಣಿಸಿ 1610 ಸಾವಿರ ಕೋಟಿ ವಿಶೇಷ ಪ್ಯಾಕೇಜ ಘೋಷಣೆ ಮಾಡಿದ್ದು ಆ ಪ್ಯಾಕೇಜಿನಲ್ಲಿ ರಾಜ್ಯದ ಎಲ್ಲ ಛಾಯಾಗ್ರಾಹಕರನ್ನು ಕಡೆಕಣಿಸಿದ್ದು ದುರದುಷ್ಟರಕರದ ಸಂಗತಿಯಾಗಿದ್ದು ಇದನ್ನೆ ನಂಬಿ ಜೀವನ ನಡಡಸುತ್ತಿದ್ದು ಛಾಯಾಗ್ರಾಹಕರ ಜೀವನಾಂಶಕ್ಕಾಗಿ ರೂ.10 ಸಾವಿರ ಪರಿಹಾರ ನೀಡಿದ್ದಾದರೆ ಅನುಕೂಲವಾಗುತ್ತದೆ ಕೂಡಲೇ ಎಲ್ಲ ಛಾಯಾಗ್ರಾಹಕರ ದೈಯನಂದಿನ ಸ್ಥಿತಿ ಸುಧಾರಣೆಗೆ ಈ ಪ್ಯಾಕೇಜನಲ್ಲಿ ಪರಿಗಣಿಸಿ ಪರಿಹಾರ ಒದಗಿಸಿ ಕೊಡಬೇಕು ಎಂದು ತಾಲೂಕಾ ಛಾಯಾಗ್ರಾಹಕರ ಸಂಘದ ಎಲ್ಲ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ.
ಈ ವೇಳೆ ಜಿಲಾನಿ ಮುಲ್ಲಾ, ಪುಟ್ಟು ಸಂಗಮ, ರವಿ ಕುಂಟೋಜಿ, ಉಮೇಶ ಪಟ್ಟಣಶೆಟ್ಟಿ, ವೀರೂಪಾಕ್ಷಿ ಹಿರೇಮಠ, ಅವಧೂತ ಬಂಡಗಾರ, ಸಿದ್ದು ಪೂಜಾರಿ, ಮಾಂತೇಶ ಹಿರೇಮಠ, ಭೀರಪ್ಪ ಪೂಜಾರಿ, ಶಿವು ಚಿಕ್ಕಸಿಂದಗಿ, ಕೇದಾರ ಕುಂಟೋಜಿ, ರವಿ ಗೂಳೂರ, ವಿನೋದ ಬಿಸನಾಳ ಸೇರಿದಂತೆ ಹಲವರಿದ್ದರು.