ವಿದ್ಯುತ್ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಕುಮಟಾ: ತಾಲೂಕಿನ ದೇವಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳೆಗಾಲದ ವಿದ್ಯುತ್ ಸಮಸ್ಯೆ ಬಗೆಹರಿಸಲು ವಿನಂತಿಸಿ ದೇವಗಿರಿ ಪಂಚಾಯಿತಿ ವತಿಯಿಂದ ಗುರುವಾರ ಹೆಸ್ಕಾಂ ಎಇಇ ಎಂ.ಎ.ಪಠಾಣರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. 

ದೇವಗಿರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಲಗಳ್ಳಿ ಫೀಡರಿನಿಂದ ವಿದ್ಯುತ್ ಸಂಪರ್ಕ ಇದೆ. ಆದರೆ ವಾಲಗಳ್ಳಿ ಫೀಡರಿನಿಂದ ದೇವಗಿರಿಗೆ ಸಂಪರ್ಕಗೊಳ್ಳುವ ಮಾರ್ಗದಲ್ಲಿ ಅರಣ್ಯ, ಗಿಡಮರಗಳು ಜಾಸ್ತಿ ಹೆಚ್ಚಿನ ಪ್ರಮಾಣದಲ್ಲಿದೆ. 

ಈ ಕಾರಣದಿಂದ ಪ್ರತಿ ಮಳೆಗಾಲದಲ್ಲಿ ವಿದ್ಯುತ್ ತಂತಿ, ಕಂಬಗಳ ಮೇಲೆ ಮರಗಿಡಗಳು ಮುರಿದು ಬಿದ್ದು ಪದೇಪದೇ ವಿದ್ಯುತ್ ಕಡಿತವಾಗಿ ದೇವಗಿರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ಪಂಚಾಯಿತಿಗೆ ಆಕ್ಷೇಪಣೆ ಸಲ್ಲಿಸಿದ್ದು ಸಮಸ್ಯೆ ಬಗೆಹರಿಸಲು ಕೋರಿದ್ದಾರೆ. 

ಆದ್ದರಿಂದ ಮಳೆಗಾಲದಲ್ಲಿ ತುತರ್ು ಸಂದರ್ಭವೆಂದು ಪರಿಗಣಿಸಿ ದೇವಗಿರಿಗೆ ಹಂದಿಗೋಣ ಫೀಡರಿನಿಂದ ವಿದ್ಯುತ್ ಸಂಪರ್ಕ ನೀಡಬೇಕು. ತುತರ್ು ಮಾರ್ಗಬದಲಾವಣೆಗೆ ಸೂಕ್ತ ಆನುಮತಿ ಕೊಡಬೇಕು ಎಂದು ಮನವಿಯಲ್ಲಿ ಕೋರಲಾಯಿತು. 

ದೇವಗಿರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಟಿ.ನಾಯ್ಕ, ಸದಸ್ಯರಾದ ಸುರೇಶ ಹರಿಕಂತ್ರ, ಗಣಪತಿ ಗೌಡ, ದೇವೇಂದ್ರ ಶೇರುಗಾರ, ವ್ಯಸೇಸ ಸಂಘದ ಅಧ್ಯಕ್ಷ ಕುಮಾರ ಭಟ್ಟ , ಯುವಕ ಸಂಘದ ಅಧ್ಯಕ್ಷ ಅನಿಲ ರೇವಣಕರ, ಮಂಜು ಭಂಡಾರಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.