ಅಕ್ರಮ ಮರಳುಗಾರಿಕೆ ತಡೆಗಟ್ಟುವಂತೆ ಆಗ್ರಹಿಸಿ ಮನವಿ

ಲೋಕದರ್ಶನ ವರದಿ

ಬೆಳಗಾವಿ 03: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಗಟ್ಟುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಎಮ್ ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿದರ್ೇಶ ಉಮೇಶ ಎಂ. ಬಗರಿ ಮತ್ತು ಪೊಲೀಸ್ ಆಯುಕ್ತ ಲೋಕೇಶ್ ಕುಮಾರ ಅವರಿಗೆ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಪಾಂಡುರಂಗ ರಡ್ಡಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಹೊರ ರಾಜ್ಯದಿಂದ ಮಹಾರಾಷ್ಟ್ರದ ರಾಜಗೊಳಿ ಮತ್ತು ದಡ್ಡಿ ಗ್ರಾಮಗಳಿಂದ ಎ.ಪಿ.ಎಂ.ಸಿ ಮತ್ತು ಕಾಕತಿ ಮಾರ್ಗದಿಂದ ಹಾಗೂ ರಾಜ್ಯದ ಖಾನಾಪುರ ತಾಲೂಕಿನ ದೇಸೂರ, ಗರ್ಲಗುಂಜಿ ಗ್ರಾಮಗಳಿಂದ ಯಳ್ಳೂರ ಮಚ್ಚೆ ಮಾರ್ಗದಿಂದ ಅಕ್ರಮ ಫೀಲ್ಟರ್ ಮರಳು ದಿನಕ್ಕೆ ಸುಮಾರು 300 ಲಾರಿಗಳು ಬೆಳಗಾವಿ ನಗರಕ್ಕೆ ಸಂಜೆ 7 ಗಂಟೆಯಿಂದ ಬೆಳಿಗ್ಗೆ 11 ಗಂಟೆಯವರೆಗೆ ಬರುತ್ತಿವೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಇರುವ ಸುಮಾರು 40 ಎಮ್ ಸ್ಯಾಂಡ ಘಟಕಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿವೆ. 

ಸದ್ಯ ಬೆಳಗಾವಿ ಜಿಲೆಯಲ್ಲಿ ಇರುವ  ಎಮ್ ಸ್ಯಾಂಡ್ ಘಟಕಗಳಿಂದ ವಾರ್ಷಿಕ ಸರಾಸರಿ 35 ರಿಂದ 40 ಲಕ್ಷ ಮೆಟ್ರಿಕ್ ಟನ್ ಎಮ್ ಸ್ಯಾಂಡ ಉತ್ಪಾದನೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಕೊಡಲಾಗಿದೆ. ಆದರೆ ಸದ್ಯ ಜಿಲ್ಲೆಯಲ್ಲಿ 20 ರಿಂದ 30 ಲಕ್ಷ ಮೆಟ್ರಿಕ್ ಟನ್ ಮಾತ್ರ ಎಮ್ ಸ್ಯಾಂಡ ಉತ್ಪಾದನೆಯಾಗುತ್ತಿದೆ. ಮತ್ತೊಂದಡೆ ಅಕ್ರಮ ಮರಳುಗಾರಿಕೆಯಿಂದ ಸುಮಾರು 15 ಲಕ್ಷ ಮೆಟ್ರಿಕ್ ಟನ್ ಎಮ್ ಸ್ಯಾಂಡ್ ಘಟಕಗಳಿಂದ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ.

ಮನೆ ಕಟ್ಟುವ ಗುತ್ತಿಗೆದಾರರು ಕಡಿಮೆ ಬೆಲೆಗೆ ಸಿಗುವ ಮರಳನ್ನೆ ಖರಿದಿಸಿ ಕಟ್ಟುವುದರಿಂದ ಮನೆಯ ಗುಣಮಟ್ಟವು ಕಳಪೆಯಾಗುತ್ತಿದೆ. ಮರಳಿನಲ್ಲಿ ಮಣ್ಣಿನ ಪ್ರಮಾಣ ಹೆಚ್ಚಿರುವುದರಿಂದ ಪಿಲ್ಟರ್ ಮಾಡಿದರೂ ಅದರಲ್ಲಿ ಶುದ್ಧತೆ ಬರಲು ಸಾಧ್ಯವಿಲ್ಲ. ಸಕರ್ಾರದಿಂದ ಮಂಜೂರಾದ ಸ್ಲಂ ನಿವಾಸಿಗಳ ಮನೆಗಳು, ಆಶ್ರಯ ಮನೆಗಳನ್ನಂತೂ ಇಂತಹ ಕಳಪೆ ಗುಣಮಟ್ಟದ ಮರಳಿನಿಂದಲೇ ಕಟ್ಟುವುದರಿಂದ ಜನರ ಜೀವದೊಂದಿಗೆ ಚೆಲ್ಲಾಟವಾಡಿದಂತಾಗುತ್ತದೆ. ಮಣ್ಣಿನಿಂದ ಕೂಡಿದ ಕಳಪೆ ಮರಳನ್ನು ಶುದ್ಧಿಕರಿಸಲು ಲಕ್ಷಾಂತರ ಲೀಟರ್ ನೀರನ್ನು ಬಳಸಲಾಗುತ್ತದೆ. ಇದರಿಂದ ಮರಳು ಸಂಪೂರ್ಣ ಶುದ್ಧವಾಗುವುದಿಲ್ಲ. ಅಲ್ಲದೇ ನೀರು ಕೂಡಾ ವ್ಯರ್ಥವಾಗಿ ಹೋಗುತ್ತದೆ.

ಈ ಅಕ್ರಮ ದಂಧೆಯಿಂದ ಎಮ್ ಸ್ಯಾಂಡ್ ಘಟಕಗಳು ಸಾಕಷ್ಟು ನಷ್ಟ ಅನುಭವಿಸುತ್ತಿವೆ. ಅಲ್ಲದೆ  ಸಾಕಷ್ಟು ರಾಜಧನ ಬರದೆ ಸಕರ್ಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಎಮ್ ಸ್ಯಾಂಡ್ ಉದ್ಯಮದಿಂದ ಸಕರ್ಾರಕ್ಕೆ ಅತಿ ಹೆಚ್ಚು ರಾಜಧನ ಸಂದಾಯ ಮಾಡುವ ಜಿಲ್ಲೆಯಾಗಿದೆ. ಒಂದು ಅಂದಾಜಿನಂತೆ ಶೇಕಡಾ 50 ರಷ್ಟು ಅಕ್ರಮ ಮರಳು ಸರಬರಾಜು ಆಗುತ್ತಿದ್ದು ಅದು ನಿಂತರೆ ರಾಜಧನದ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.

ಅಕ್ರಮ ದಂಧೆಯಿಂದಾಗಿ ಪ್ರಮಾಣಿಕವಾಗಿ ರಾಜಧನ ಕೊಡುವ ಎಮ್ ಸ್ಯಾಂಡ ಘಟಕಗಳು ಸಾಕಷ್ಟು ನಷ್ಟ ಅನುಭವಿಸುತ್ತಿವೆ. ಅವುಗಳಿಗೆ ನಿಗದಿಪಡಿಸಿರುವಷ್ಟು ಪ್ರಮಾಣದಲ್ಲಿ ಮರಳು ಉತ್ಪಾದಿಸಿ ಮಾರಾಟ ಮಾಡಲು ಸಾದ್ಯವಾಗದೆ ರಾಜಧನದ ಜೊತೆಗೆ ದಂಡವನ್ನು ಕಟ್ಟಬೇಕಾಗುತ್ತದೆ.

ಎಮ್ ಸ್ಯಾಂಡ್ ಘಟಕ ಸ್ಥಾಪಿಸಲು ಒಂದು ಘಟಕಕ್ಕೆ ಸುಮಾರು 4 ರಿಂದ 5 ಕೋಟಿ ವೆಚ್ಚ ತಗಲುತ್ತದೆ.  ಘಟಕ ಸ್ಥಾಪಿಸಲು ಉದ್ಧಿಮೆದಾರರು ಬ್ಯಾಂಕಿನಿಂದ ಪಡೆದ ಸಾಲವನ್ನು ಹಿಂತಿರುಗಿಸಲಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಇದೆ ರೀತಿ ಅಕ್ರಮ ಮರಳು ಗಣಿಗಾರಿಕೆ ಮುಂದುವರೆದಲ್ಲಿ ಎಮ್ ಸ್ಯಾಂಡ್ ಘಟಕಗಳು ಮುಚ್ಚವುದಲ್ಲದೆ ಇದನ್ನೆ ನಂಬಿರುವ ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಬೀದಿಗೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿ ಎಂ. ಸ್ಯಾಂಡ್ಗೆ ಉತ್ತೇಜನ ನೀಡಬೇಕೆಂದು  ಮನವಿಯಲ್ಲಿ ವಿನಂತಿಸಲಾಗಿದೆ.

ಎಂ ಸ್ಯಾಂಡ್ ಉತ್ಪಾದಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಪಾಂಡುರಂಗ ರಡ್ಡಿ, ಸಂಜು ಕುಪ್ಪಸಗೌಡರ್, ಅಜಯ ಪೂಜಾರಿ, ರವೀಂದ್ರ ಹಿರೇಮಠ, ಚಂದ್ರಶೇಖರ ಕೊಣ್ಣೂರು, ರಂಗನಾಥ ಭಜಂತ್ರಿ, ರಾಜು ಟೊಮಾರೆ, ಶಿವಾಜಿ ಟೊಮಾರೆ, ಮಹಾದೇವ ಪಾಟೀಲ, ಯುಸೂಫ್ ಸನದಿ, ಎಸ್.ಎ,ಬಸರಿಕಟ್ಟಿ, ಶಾನವಾರ್ ಮುನವಳ್ಳಿ, ಕತಾಲ್ ಮಿರ್ಜಾಪುರ, ಶಿವಾಜಿ ಮುಳ್ಳೂರು, ರಾಜು ಬೆನಕಟ್ಟಿ ಮೊದಲಾದವರಿದ್ದರು.