ಮಹಾನಗರ ಪಾಲಿಕೆ ಸಭಾಗೃಹದಲ್ಲಿ ಭ.ಮಹಾವೀರರ ಭಾವಚಿತ್ರ ಅಳವಡಿಸಲು ಮನವಿ
ಬೆಳಗಾವಿ 4: ಬೆಳಗಾವಿ ಮಹಾನಗರ ಪಾಲಿಕೆಯ ಸಭಾಗೃಹದಲ್ಲಿ ಭಗವಾನ ಮಹಾವೀರರ ಭಾವಚಿತ್ರವನ್ನು ಅಳವಡಿಸಬೇಕೆಂದು ಜೈನ ಯುವ ವೇದಿಕೆ ವತಿಯಿಂದ ಇಂದು ಮಹಾಪೌರ ಮಂಗೇಶ ಪವಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಮೊದಲು ಮಹಾನಗರ ಪಾಲಿಕೆಯ ಹಳೆಯ ಕಟ್ಟಡದ ಸಭಾಗೃಹದಲ್ಲಿ ಭಗವಾನ ಮಹಾವೀರ ಸೇರಿದಂತೆ ಸರ್ವಧರ್ಮಿಯರ ಮಹಾನುಭಾವರ ಭಾವಚಿತ್ರಗಳನ್ನು ಅಳವಡಿಸಲಾಗಿತ್ತು. ಆದರೆ ಮಹಾನಗರ ಪಾಲಿಕೆಯು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಹೊಸ ಕಟ್ಟಡದ ಸಭಾಗೃಹದಲ್ಲಿ ಭಗವಾನ ಮಹಾವೀರರ ಭಾವಚಿತ್ರವನ್ನು ಅಳವಡಿಸದೇ ಇರುವುದು ಗಮನಕ್ಕೆ ಬಂದಿದೆ.
ಹಾಗಾಗಿ ಪ್ರಸಕ್ತ ಸಾಲಿನಲ್ಲಿ ಏ.10 ರಂದು ಭಗವಾನ ಮಹಾವೀರರ ಜನ್ಮ ಕಲ್ಯಾಣಕ ಮಹೋತ್ಸವ ನಡೆಯುತ್ತಿದ್ದು, ಇದರ ಅಂಗವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಸಭಾಗೃಹದಲ್ಲಿ ಭ.ಮಹಾವೀರರ ಭಾವಚಿತ್ರ ಅಳವಡಿಸಬೇಕೆಂದು ಜೈನ ಯುವ ವೇದಿಕೆ ವತಿಯಿಂದ ಮಹಾಪೌರ ಮಂಗೇಶ ಪವಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಜೈನ ಯುವ ವೇದಿಕೆಯ ಅಧ್ಯಕ್ಷ ಸುನಿಲ ಚೌಗುಲೆ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ನಗರ ಸೇವಕಿ ಪ್ರೀಯಾ ಸಾತಗೌಡಾ, ರಾಜೇಂದ್ರ ಜಕ್ಕನ್ನವರ, ಹೀರಾಚಂದ ಕಲಮನಿ, ಸುಧೀರ ಚೌಗುಲೆ, ಸುರೇಶ ಕಲಮನಿ, ರಾಜೇಶ ಕಲಮನಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.