ಲೋಕದರ್ಶನವರದಿ
ರಾಣೇಬೆನ್ನೂರು: ಮೇ.22: ಕರೋನಾ ವೈರಸ್ ಆರಂಭವಾದಾಗಿನಿಂದಲೂ ರಾಜ್ಯದಲ್ಲಿ ಕೆಳ ನ್ಯಾಯಾಲಯಗಳು ಕಳೆದ ಮಾಚರ್್, ಎಪ್ರೀಲ್ ಮತ್ತು ಮೇ 30ರವರೆಗೆ ಕೋಟರ್್ ಕಲಾಪಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಕಾರಣ ನ್ಯಾಯವಾಧಿಗಳ ಆಥರ್ಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸ್ವಾಭಿಮಾನಿ ನ್ಯಾಯವಾಧಿಗಳು ಯಾರ ಹತ್ತಿರವೂ ಹೇಳಿಕೊಳ್ಳಲಾರದೇ, ಮಾನಸಿಕವಾಗಿ ಆಥರ್ಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ನ್ಯಾಯವಾದಿಗಳ ಸಮುದಾಯಕ್ಕೆ ಪ್ಯಾಕೇಜ್ಮೂಲಕ ಧನಸಹಾಯ ಘೋಷಿಸಲು ಮುಂದಾಗಬೇಕು ಎಂದು ಹೊರೈಝನ್ ಅಕಾಡೆಮಿ ಫಾರ್ ಸೊಷಿಯಲ್ ಚೇಂಜ್ ಅಧ್ಯಕ್ಷ ಯು.ಎಂ.ಗುರುಲಿಂಗಪ್ಪಗೌಡ್ರ ಸಕರ್ಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸದ್ದಾರೆ.
ಶುಕ್ರವಾರ ಅವರು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಕೃಷ್ಣಾ ಭಾಜಪೇಯಿ ಅವರ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಪಾಲ ವಾಜುಬಾಯಿವಾಲಾ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಕಟ್ಟ ಕಡೇಯ ವ್ಯಕ್ತಿಗೆ ನ್ಯಾಯ ಒದಗಿಸಲು ಮುಂದಾಗಿರುವ ವೃತ್ತಿಯಲ್ಲಿದ್ದಾನೋ ಅಂತಹ ನ್ಯಾಯವಾದಿಗಳ ಜೀವನ ನಿರ್ವಹಣೆ ಮಾಡುವುದು ತುಂಬಾ ಶೋಚನೀಯವಾಗಿದ್ದು, ಸಂಕಷ್ಠ ಪರಿಸ್ಥಿತಿ ಅನುಭವಿಸುವಂತಾಗಿದೆ. ಸಕರ್ಾರ ಎಲ್ಲರಿಗೂ ನ್ಯಾಯ ನೀಡಿದಂತೆ ತಮ್ಮ ಸಮುದಾಯಕ್ಕೂ ಸಹ ಸೂಕ್ತ ಪ್ಯಾಕೇಜ್ ಘೋಷಿಸಿ ಆಥರ್ಿಕ ಸಂಕಷ್ಠದ ಚೇತರಿಕೆಗೆ ಸಹಕಾರಿಯಾಗಬೇಕೆಂದು ಕೋರಿದ್ದಾರೆ.
ಇದೀಗ ಜೂನ್ 6ಕ್ಕೆ ಲಾಕ್ಡೌನ್ ತೆರವುಗೊಂಡು ಕೋಟರ್್ ಕಲಾಪಗಳು ಪ್ರಾರಂಭಗೊಂಡರೂ ಸಹ ಪಕ್ಷಗಾರರು ಆಥರ್ಿಕವಾಗಿ ಸುಧಾರಿಸಿಕೊಳ್ಳಲು ಕನಿಷ್ಠ 6 ತಿಂಗಳಿನಿಂದ ವರ್ಷಗಳ ಕಾಲ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಸಮುದಾಯಕ್ಕೆ ಕನಿಷ್ಠ 6 ತಿಂಗಳ ಜೀವನ ನಿರ್ವಹಣೆಯನ್ನು ಗಮನದಲ್ಲಿಟ್ಟುಕೊಂಡು ಘನ ಸಕರ್ಾರ ಪ್ರತಿ ನ್ಯಾಯವಾದಿಗೆ ಕನಿಷ್ಠ 60 ಸಾವಿರ ರೂ.ಗಳನ್ನು ಬಿಡುಗಡೆಗೊಳಿಸಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಲು ಮುಂದಾಗಬೇಕು ಎಂದು ಸಕರ್ಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಗುರುಲಿಂಗಪ್ಪಗೌಡ್ರ ಕೋರಿದ್ದಾರೆ.