ಲೋಕದರ್ಶನ ವರದಿ
ಹಿರೇಕೆರೂರು17: ಚಿಕ್ಕೆರೂರಿಗೆ ಸೆಕ್ಷನ್ ಆಪೀಸ್ ಮಾಡುವಂತೆ ಹಾಗೂ ಹೆಚ್ಚುವರಿ ಲೈಮನ್ ಗಳನ್ನು ನಿಯೋಜಿಸುವಂತೆ ಕನರ್ಾಟಕ ರಕ್ಷಣಾ ವೇದಿಕೆ ಚಿಕ್ಕೆರೂರು ಘಟಕದಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ , ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರಿಗೆ ಮನವಿ ಸಲ್ಲಿಸಿದರು.
ಚಿಕ್ಕೆರೂರು ಗ್ರಾಮದಲ್ಲಿ ರೈಸ್ ಮಿಲ್ ಉದ್ದಿಮೆಗಳು ಇವೆ ಹಾಗೂ ರೈತರ ಪಂಪ್ ಸೆಟ್ ಗಳಿಗೆ ವಿದ್ಯತ್ ವ್ಯತ್ಯಯ ಆಗುತ್ತಿದೆ. ಮತ್ತು ಚಿಕ್ಕೆರೂರು ಗ್ರಾಮಕ್ಕೆ ಒಬ್ಬರೆ ಲೈಮನ್ ಇರುವುದರಿಂದ ಸಣ್ಣಪುಟ್ಟ ವಿದ್ಯತ್ ಅವಗಡಗಳು ಅಗುವ ಸಂದರ್ಭದಲ್ಲಿ ತೊಂದರೆಯಾಗುತ್ತದೆ ಆದ್ದರಿಂದ ಹೆಚ್ಚುವರಿ ಲೈಮನ್ ಗಳನ್ನು ನೇಮಿಸಬೇಕು.
ಗ್ರಾಮಗಳಲ್ಲಿ ವೈರ್ ಗಳು ನೆತಾಡುತ್ತಿದ್ದು ವಿದ್ಯತ್ ಕಂಬಗಳು ಹಳೆಯದಾಗಿವೆ ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ವಿದ್ಯತ್ ಸಮಸ್ಯ ಬಂದರೆ ಪ್ರತಿಯೊಂದು ವಿಷಯಕ್ಕು ಹಂಸಭಾವಿಗೆ ಹೋಗಿ ಬರಬೇಕಾದ ಪರಸ್ಥಿತಿ ಉಂಟಾಗಿದೆ. ಚಿಕ್ಕೆರೂರು ಗ್ರಾಮಕ್ಕೆ ಒಂದೂ ಸೆಕ್ಷನ್ ಆಪೀಸ್ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕನರ್ಾಟಕ ರಕ್ಷಣಾ ವೇದಿಕೆಯ ಚಿಕ್ಕೆರೂರು ಗ್ರಾಮ ಘಟಕದ ಅಧ್ಯಕ್ಷ ಭರಮಪ್ಪ ಡಮ್ಮಳ್ಳಿ, ಅಶ್ರಿತ್ ಚಂಚಿ, ಸಚಿನ್ ಹಾದಿಮನಿ, ತೌಸಿಪ್ ಮುಲ್ಲಾ, ಖಾಸೀಮ್ ಅಲಿ, ಅಸ್ಕರ್ ಅಲಿ ಮುಲ್ಲಾ ಮತ್ತು ಇತರರು ಇದ್ದರು.