ಉಪ ಅಂಚೆ ಕಛೇರಿಗಳ ಪುನರ್ ಆರಂಭಕ್ಕೆ ಮನವಿ
Request for resumption of sub post offices
ಲೋಕದರ್ಶನ ವರದಿ
ದಾಂಡೇಲಿ 10: ದಾಂಡೇಲಿ ನಗರದ ಹಳೇದಾಂಡೇಲಿ, ಬಾಂಗೂರ ನಗರ ಮತ್ತು ಕಿತ್ತೂರು ಚೆನ್ನಮ್ಮ ಸರ್ಕಲ್‌ನಲ್ಲಿದ್ದ ಉಪ ಅಂಚೆ ಕಛೇರಿಗಳನ್ನು ಏಕಾಎಕಿ ವೀಲೀನಗೊಳಿಸಿ ಮುಚ್ಚಿರುವ ನಿರ್ಧಾರವು ಇದೀಗ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ.
ಧಾರವಾಡದ ಪೋಸ್ಟ್ ಮಾಸ್ಟರ್ ಜನರಲ್ ಕಛೇರಿ ಹಾಗೂ ಶಿರಸಿಯ ಜಿಲ್ಲಾ ಪ್ರಧಾನ ಅಂಚೆ ಕಛೇರಿಯ ಅಧಿಕಾರಿಗಳ ಆದೇಶದಂತೆ ಈ ಮೂರು ಉಪ ಅಂಚೆ ಕಛೇರಿಗಳನ್ನು ಬರ್ಚಿ ರಸ್ತೆಯಲ್ಲಿರುವ ಮುಖ್ಯ ಅಂಚೆ ಕಛೇರಿಗೆ ವೀಲೀನಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸೇವಾ ಸುಲಭತೆಗೆ ಹೊಡೆತ ಬಿದ್ದಂತಾಗಿದೆ. ಹಿಂದಿನಂತೆ ಪ್ರತ್ಯೇಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪ ಅಂಚೆ ಕಛೇರಿಗಳಿಂದ ನಗರ ಹಾಗೂ ಗ್ರಾಮೀಣ ಜನತೆಗೆ ಅಂಚೆ ಸೇವೆಗಳು ಸುಲಭವಾಗಿ ಲಭ್ಯವಾಗುತ್ತಿತ್ತು. ಹಣಕಾಸು ವ್ಯವಹಾರಗಳು, ಪಾಸ್ ಬುಕ್ ನವೀಕರಣ, ಪಾರ್ಸಲ್ ಸೇವೆ ಸೇರಿದಂತೆ ನಿತ್ಯದ ಸೇವೆಗಳು ಸ್ಥಳೀಯ ಮಟ್ಟದಲ್ಲೇ ದೊರೆಯುತ್ತಿದ್ದವು. ಆದರೆ ಈಗ ಎಲ್ಲ ಸೇವೆಗಳಿಗಾಗಿ ಒಂದೇ ಕೇಂದ್ರಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಗವಿಕಲರು, ವೃದ್ದರು ಮಹಿಳೆಯರು ಈ ನಿರ್ಧಾರದ ಪರಿಣಾಮವಾಗಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರಿಂದ ದೂರ ಪ್ರಯಾಣ ಸಾರಿಗೆ ಸಮಸ್ಯೆ ಹಾಗೂ ದೀರ್ಘಕಾಲ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇವರಿಗೆ ದೊಡ್ಡ ಹೊರೆಯಾಗಿದೆ. ನಿಗದಿತ ವೇಳೆಯಲ್ಲಿ ಸೇವೆ ದೊರೆಯದೆ ಗಂಟೆಗಟ್ಟಳೆ ಕಾಯಬೇಕಾದ ಪರಿಸ್ಥಿತಿ ಸಾಮಾನ್ಯವಾಗಿದೆ.
ಅಂಚೆ ಸೇವೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನ ಜೀವನದ ಅವಿಭಾಜ್ಯ ಅಂಗವಾಗಿರುವದರಿಂದ, ಈ ರೀತಿಯ ವೀಲೀನ ನಿರ್ಧಾರ ಕೈಗೊಳ್ಳುವಾಗ ಸಾರ್ವಜನಿಕರ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಬೇಕಾಗಿದೆ. ಸದರಿ ಉಪ ಅಂಚೆ ಕಛೇರಿಗಳನ್ನು ಪುನರಾರಂಭಿಸಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 