ಲೋಕದರ್ಶನವರದಿ
ಬ್ಯಾಡಗಿ: ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸುವಲ್ಲಿ ಸಾರಿಗೆ ಸಂಸ್ಥೆಯು ವಿಫಲವಾಗಿದ್ದು ತಾಲೂಕಿನ ಎಲ್ಲ ಹಳ್ಳಿಗಳಲ್ಲಿನ ವಿದ್ಯಾಥರ್ಿಗಳು ಸಹ ತೊಂದರೆಯಿಲ್ಲದೇ ಪಟ್ಟಣದಲ್ಲಿನ ಶಾಲಾ ಕಾಲೇಜುಗಳಿಗೆ ತಲುಪುವಂತೆ ಬಸ್ ಸೌಕರ್ಯಕ್ಕೆ ಆಗ್ರಹಿಸಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾಥರ್ಿಗಳು ಸಾರಿಗೆ ವ್ಯವಸ್ಥಾಪಕರ ಮೂಲಕ ವಿಭಾಗೀಯ ನಿಯಂತ್ರಕರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬಯೋಮೆಟ್ರಿಕ್ ಹಾಜರಾತಿ ತೊಂದರೆ ತಪ್ಪಿಸುವರ್ಯಾರು:ಎಬಿವಿಪಿ ಘಟಕದ ತಾಲೂಕಾ ಸಂಚಾಲಕ ಜಿ.ಎನ್.ಹೊನ್ನಪ್ಪ ಮಾತನಾಡಿ, ವಿದ್ಯಾಥರ್ಿಗಳಿಗೆ ಪರಿಣಾಮಕಾರಿಯಾಗಿ ಹಾಜರಾತಿ ಕೊಡುವ ದೃಷ್ಟಿಯಿಂದ ಬಹುತೇಕ ಶಾಲಾ ಕಾಲೇಜು ಗಳಲ್ಲಿ ಬಯೋಮೆಟ್ರಿಕ್ ಮಿಷನ್ಗಳನ್ನು ಅಳವಡಿಸಲಾಗಿದೆ, ಕನಿಷ್ಠ ಶೇ.75 ರಷ್ಟು ಕಡ್ಡಾಯ ಹಾಜರಾತಿ ಇಲ್ಲದಿದ್ದರೇ ಮುಂದಿನ ಪರೀಕ್ಷೆಗೆ ಕುಳಿತುಕೊಳ್ಳಲು ಸಂಬಂಧಿಸಿದ ವಿದ್ಯಾಥರ್ಿಗೆ ಅನುಮತಿ ನೀಡುವುದಿಲ್ಲ ಹೀಗಾಗಿ ನಿತ್ಯವೂ ವಿದ್ಯಾಥರ್ಿಗಳು ಶಾಲೆಗೆ ತಡವಾಗಿ ಹೋಗುತ್ತಿದ್ದು ಅವರ ಭವಿಷ್ಯಕ್ಕೆ ಸಾರಿಗೆ ಸೌಕರ್ಯ ಮಾರಕವಾಗಿ ಪರಿಣಮಿಸುತ್ತಿದೆ ಎಂದು ಆರೋಪಿಸಿದರು.
ಸಣ್ಣ ತಾಲೂಕಿಗೆ ಬಸ್ ಇಲ್ವಲ್ರೀ: ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಬಸ್ ಸೌಲಭ್ಯ ಸಮರ್ಪಕವಾಗಿಲ್ಲ ಅದರಲ್ಲೂ ಗ್ರಾಮೀಣ ಸಾರಿಗೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಸರಿಯಾದ ಸಮಯಕ್ಕೆ ಬಸ್ ಬಾರದ್ದರಿಂದ ಪಾಠ ಪ್ರವಚನಗಳಿಂದ ದೂರ ಉಳಿಯುವಂತಾಗಿದೆ, ಬ್ಯಾಡಗಿ ಕೇವಲ 64 ಗ್ರಾಮಗಳಿರುವ ಒಂದು ಸಣ್ಣ ತಾಲೂಕು, ಹೀಗಿದ್ದರೂ ಸಹ ವಿದ್ಯಾಥರ್ಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸದೇ ಇರುವುದು ದುರಂತದ ಸಂಗತಿ, ಅದರಲ್ಲೂ ಮಳೆಗಾಲದ ಸಂದರ್ಭ ದಲ್ಲಿ ನೀರನಲ್ಲಿ ನೆನೆಯದೇ ಶಾಲೆಗೆ ಬರಲು ಸಾಧ್ಯವಿಲ್ಲದಂತಾಗಿದ್ದು ಕೂಡಲೇ ಎಲ್ಲ ಗ್ರಾಮ ಗಳಿಗೂ ತಲುಪುವಂತೆ ನೋಡಿಕೊಳ್ಳಲು ಆಗ್ರಹಿಸಿದರು.
320 ವಿದ್ಯಾಥರ್ಿಗಳು 2 ಬಸ್: ಚಂದ್ರು ಕುಮ್ಮೂರ ಮಾತನಾಡಿ, ಪಟ್ಟಣದ ಶಿಡೇನೂರ ರಸ್ತೆಯಲ್ಲಿರುವ ಸಕರ್ಾರಿ ಪದವಿ ಕಾಲೇಜಿಗೆ ಜಿಲ್ಲೆಯ ವಿವಿಧ ಗ್ರಾಮ ಗಳಿಂದ ಒಟ್ಟು 320ಕ್ಕೂ ಹೆಚ್ಚು ವಿದ್ಯಾಥರ್ಿಗಳು ಪ್ರತಿದಿನ ಬರುತ್ತಿದ್ದಾರೆ, ಆದರೆ ಹಿರೇಕೆರೂರ ಕಡೆಯಿಂದ ಬ್ಯಾಡಗಿ ಮಾರ್ಗವಾಗಿ ಬರುವ 2 ಬಸ್ಸುಗಳಿದ್ದು ಬೆಳಿಗ್ಗೆ 9 ಗಂಟೆ ಒಳಗಾಗಿಯೇ ಬ್ಯಾಡಗಿ ಪ್ರವೇಶಿಸುತ್ತಿದ್ದು ಅಷ್ಟೊಂದು ವಿದ್ಯಾಥರ್ಿಗಳಿಗೆ ಬರುತ್ತಿದ್ದು 320 ವಿದ್ಯಾಥರ್ಿಗಳಿಗೆ ಸಾಕಾಗುತ್ತಿಲ್ಲ, ಒಂದು ವೇಳೆ ಸದರಿ ಬಸ್ ತಪ್ಪಿದಲ್ಲಿ ಒಂದೂ ಬಸ್ ಈ ಭಾಗಕ್ಕೆ ಬರುವುದಿಲ್ಲ ಬ್ಯಾಡಗಿಯನ್ನು 10 ಗಂಟೆ ತಲುಪುವ ಗುರಿಯನ್ನಿಟ್ಟುಕೊಂಡು ಬಸ್ ಸಂಚಾರ ಪ್ರಾರಂಭಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಪಾಟೀಲ, ವಿನಾಯಕ ಶಿರೂರ, ಪರಮೇಶ ತಿಮ್ಮಾಪುರ, ಸಂಜೀವ, ಪಿ.ರಮೇಶ ಶ್ರೀಧರ ಮಂಜುನಾಥ ತಾಹೀರ, ಗಿರೀಶ, ಬಸವರಾಜ, ಕಿರಣ ಚಂದ್ರಶೇಖರ, ಡಿ.ಕೆ.ಮಹದೇವಪ್ಪ ಸೇರಿದಂತೆ ನೂರಾರು ವಿದ್ಯಾಥರ್ಿಗಳು ಭಾಗವಹಿಸಿದ್ದರು.