ಲೋಕದರ್ಶನ ವರದಿ
ವಿಜಯಪುರ 20: 2018-19ನೇ ಸಾಲಿನ ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸುವುದು ಇಂದಿನ ಬಾಕಿ ಹಣ ನೀಡುವ ಕುರಿತು ದಿ.19ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಮಂತ ದುದ್ದಗಿ ಅಧ್ಯಕ್ಷರು ಕಬ್ಬು ಬೆಳೆಗಾರರ ಸಂಘ, 2018-19ನೇ ಸಾಲಿನ ಕಬ್ಬಿಗೆ ನ್ಯಾಯೋಚಿತ ಬೆಲೆಯನ್ನು ನಿಗದಿ ಪಡಿಸಬೇಕು. ಜಿಲ್ಲಾ 9 ಸಂಕ್ರಿ ಕಾಖರ್ಾನೆಗಳಲ್ಲಿ 7 ಸಕ್ಕರೆ ಕಾಖರ್ಾನೆಗಳು ಈಗಾಗಲೇ ಕಬ್ಬು ನುರಿಸಲು ಪ್ರಾರಂಭವಾಗಿವೆ. ಕಳೆದ ವರ್ಷದ ಕಬ್ಬಿಗೆ ಜಿಲ್ಲೆಯ ಸಕ್ರೆ ಕಾಖರ್ಾನೆಗಳು 96 ಕೋಟಿ ರೂಪಾಯಿ ಬಾಕಿ ಹಣವನ್ನು ಉಳಿಸಿಕೊಂಡಿದ್ದಾರೆ. ಆದರೆ ಸಕ್ಕರೆ ಕಾಖರ್ಾನೆಗಳು ಈಗಾಗಲೇ ಯಾವುದೇ ಬಾಕಿ ಹಣ ಇಲ್ಲಂತ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದೆ. ಹಾಗೂ ಜಿಲ್ಲಾಧಿಕಾರಿಗಳು ಕೇಳಿದರೆ ರೈತರಿಗೆ ಯಾವುದೆ ಬಾಕಿ ಹಣವನ್ನು ಕಾಖರ್ಾನೆಗಳು ಉಳಿಸಿಕೊಂಡಿಲ್ಲಂತ ಹೇಳುತ್ತಾರೆ. ಸಕ್ಕರೆ ಕಾಖರ್ಾನೆಗಳ ಎಮ್.ಡಿ.ಗಳಿಗೆ ಕೇಳಿದರೆ ಬಾಕಿ ಹಣ ಇದೆ ಅಂತ ಹೇಳುತ್ತಾರೆ. ಕಾಖರ್ಾನೆಗಳ ಮಾಲಿಕಾರು ಹಾಗೂ ಸರಕಾರ ಸೇರಿ ರೈತರಿಗೆ ಗೋಲಮಾಲ್ ಮಾಡುತ್ತಿದ್ದಾರೆ. ಕೇಂದ್ರ ಸಕರ್ಾರ 2018-19ನೇ ಸಾಲಿಗೆ ಎಮ್.ಆರ್.ಪಿ. ಪ್ರಕಾರ 10% ಸಕ್ಕರೆ ಇಳುವರಿಗೆ ಒಂದು ಟನ್ನಿಗೆ 2750ಬೆಲೆ ನಿಗದಿಪಡಿಸಿದೆ. ಆದರೆ ಕೇಂದ್ರ ಸರಕಾರ ಕೂಡಾ ರೈತರಿಗೆ ಮೋಸ ಮಾಡಿದೆ. ಮೊದಲು ಸಕ್ಕರೆ ಇಳುವರಿ 9.5% ಇತ್ತು ಈಗ ಶೇ.10 ಏರಿಸಿದ್ದು ರೈತರಿಗೆ ಆಗಾತ ಆಗಿದೆ ಕೂಡಲೇ ಕೇಂದ್ರ ಸಕರ್ಾರ 9.5% ಸಕ್ಕರೆ ಇಳುವರಿ ಜಾರಿಗೆ ತರಬೇಕು ಕೇಂದ್ರ ಸಕರ್ಾರ 2017-18ನೇ ಸಾಲಿಗೆ ರೈತರಿಗೆ ಕಬ್ಬಿನ ಬಾಕಿ ಹಣ ನೀಡುವಂತೆ ಕಾಖರ್ಾನೆಗಳಿಗೆ 9000 ಕೋಟಿ ರೂಪಾಯಿ ಹಣ ನೀಡಿದೆ ನಮ್ಮ ರಾಜ್ಯ 60 ಸಕ್ಕರೆ ಕಾಖರ್ಾನೆಗಳಿಗೆ 3384 ಕೋಟಿ ನೀಡಿದೆ. ನಮ್ಮ ಜಿಲ್ಲೆಯ ಭೀಮಾಶಂಕರ ಕಾಖರ್ಾನೆಗೆ 30 ಕೋಟಿ ರೂಪಾಯಿ ಉಳಿದ 9 ಕಾಖರ್ಾನೆಗಳಿಗೆ ಸುಮಾರು 250 ಕೋಟಿ ಹಣ ನೀಡಿದೆ. ಕೇಂದ್ರ ಸಕರ್ಾರ ಹಣ ನೀಡಿದರು ಆದರೆ ಸಕ್ಕರೆ ಕಾಖರ್ಾನೆಗಳು ರೈತರ ಬಾಕಿ ಹಣ ಉಳಿಸಿಕೊಂಡಿದ್ದು ಕಾಖರ್ಾನೆ ಮಾಲಿಕರಿಗೆ ನಾಚಿಕ ಆಗಬೇಕು. ಕಳೆದ ವರ್ಷ ಕಬ್ಬಿಗೆ ಗುಜರಾತ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರೈತರಿಗೆ 1 ಟನ್ ಕಬ್ಬಿಗೆ 3 ಸಾವಿರದಿಂದ 4 ಸಾವಿರ ರೂಪಾಯಿಗೆ ಅಲ್ಲಿನ ಕಾಖರ್ಾನೆಗಳು ಕಬ್ಬಿಗೆ ಹಣ ನೀಡಿದರೆ ನಮ್ಮ ರಾಜ್ಯದ ಕಾಖರ್ಾನೆಗಳಿಗೆ ಇಷ್ಟೊಂದು ಹಣ ಕೊಡಲಿಕ್ಕೆ ಯಾಕೆ ಸಾಧ್ಯವಾಗುವುದಿಲ್ಲ? ರಾಜ್ಯದ ಮುಖ್ಯಮಂತ್ರಿಗಳು ಕುಮಾರಸ್ವಾಮಿಯವರು ರೈತರ ಮಗ ಅಂತ ಹೇಳಿಕೊಳ್ಳಲಿಕ್ಕೆ ನಾಚಿಕೆ ಬರಬೇಕು ಬೆಳಗಾವಿಯಲ್ಲಿ ಹೋರಾಟ ಮಾಡುವ ರೈತರಿಗೆ ಗುಂಡಾಗಳು ಲೂಟಿಕೊರರು ಕಠಿಣ ಶಬ್ದದಿಂದ ಮಾತನಾಡಿದ್ದು ಶೋಭ ತರುವಂತದಲ್ಲ ಕೂಡಲೇ ಮುಖ್ಯಮಂತ್ರಿಗಳು ರೈತರಿಗೆ ಕ್ಷಮೆ ಕೇಳಬೇಕು. ಎಫ್.ಆರ್.ಪಿ. ಆದರಿಸಿ ಕಬ್ಬು ಖರಿದಿಗೆ ರಾಜ್ಯಸಕರ್ಾರ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು. ಎಫ್.ಆರ್.ಪಿ. ಕಡಿಮೆ ಇದ್ದರೆ ರಾಜ್ಯ ಸಕರ್ಾರ ಕಡೆಯಿಂದ ಪ್ರೋತ್ಸಾಹ ಧನ ಸೇರಿಸಿ ರೈತರಿಗೆ ಪ್ರೋತ್ಸಾಹ ಹಣವನ್ನು ಮುಖ್ಯಮಂತ್ರಿಯವರು ಘೋಷಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಪಾದ ಬಾಸಗಿ ಉಪಾಧ್ಯಕ್ಷರು, ರಾಜು ಗುಂದಗಿ ಕಾರ್ಯದಶರ್ಿ, ಶರಣು ಕತ್ತಿ ಕಾರ್ಯದಶರ್ಿ, ಪ್ರಭು ವಾಲಿಕಾರ, ಅಪ್ಪು ಹುಂಡೇಕಾರ, ಚಂದ್ರ ಹಳೆಮನಿ, ಸಂಗಮೇಶ ಯಡ್ರಾಮಿ, ಕೇದಾರ ಕತ್ತಿ, ಯಲ್ಲು ಹಳ್ಳಿ, ಶ್ರೀಶೈಲ ಮದರಿ, ಮಲ್ಲಿಕಾಜರ್ುನ ಅನಂತಗೋಳ, ಶಿವು ಕಲಶೆಟ್ಟಿ, ಮಲ್ಲು ಅಚಲೇರಿ, ಜಿ.ಆರ್. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.