ಲೋಕದರ್ಶನ
ವರದಿ
ಬೆಳಗಾವಿ 30: ಹಲವು ವರ್ಷಗಳಿಂದ ಮಹಾನಗರ ಪಾಲಿಕೆಯ ಸ್ವಚ್ಚತಾ ಕೆಲಸದ ಗುತ್ತಿಗೆದಾರರಾಗಿ ಯಲ್ಲಪ್ಪ ಗೊಲ್ಲರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಕೆಲವರು
ಅವರಿಗೆ ಮಾನಸಿಕ ಕಿರುಕುಳ ನೀಡುತ್ತೀದ್ದಾರೆ ಅವರ ಮೇಲೆ ಕ್ರಮ
ಕೈಗೊಳ್ಳಬೇಕೆಂದು ಕನರ್ಾಟಕ ರಾಜ್ಯ ರೈತ ಸಂಘ ಹಾಗೂ
ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಮರ್ೂಲನಾ ಸಮೀತಿಯಿಂದ ಪ್ರತಿಭಟನೆ ಮಾಡಿದರು.
ಮಂಗಳವಾರ
ನಗಗರದ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಮಹಾನಗರ ಪಾಲಿಕೆಯ ಕಾಮರ್ಿಕ ಗುತ್ತಿಗೆದಾರರಾಗಿ ಯಲ್ಲಪ್ಪ ಗೊಲ್ಲರ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ
ಇವರ ಕೆಲಸವನ್ನು ಸಹಿಸಿಕೊಳ್ಳದ ಜನರು ಇವರಿಗೆ ಮಾನಸಿಕ
ಕಿರುಕುಳ ನೀಡುತ್ತಿರುವುದರಿಂದ ಅವರು ವಿಷ ಸೇವಿಸಿ
ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಆದ್ದರಿಂದ ಜಿಲ್ಲಾಧಿಕಾರಿಗಳು ಗೊಲ್ಲರಗೆ ಮಾನಸಿಕ ಕಿರುಕುಳ ನೀಡುತ್ತಿರುವರ ಮೇಲೆ ಕ್ರಮ ಕೈಗೊಳ್ಳಬೇಕು
ಎಂದು ಮನವಿಯ ಮೂಲಕ ಆಗ್ರಹಿಸಿದರು