ಬೆಳಗಾವಿ,06 : ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ತನ್ನೊಂದಿಗೆ "ನೀರು ವಿನಿಮಯ ಒಪ್ಪಂದ" ಮಾಡಿಕೊಳ್ಳಲು ಮಹಾರಾಷ್ಟ್ರವು ಕನರ್ಾಟಕದ ಮುಂದಿಟ್ಟಿರುವ ಪ್ರಸ್ತಾವನೆಯನ್ನು ಯಥಾವಥಾಗಿ ಒಪ್ಪಿಕೊಳ್ಳದೇ ಕನರ್ಾಟಕದ ಹಿತದೃಷ್ಟಿಯಿಂದ ಅಲ್ಪಸ್ವಲ್ಪ ಬದಲಾವಣೆ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ರಾಜ್ಯ ಜಲಸಂಪನ್ಮೂಲ ಖಾತೆಯ ಸಚಿವ ಡಿ.ಕೆ. ಶಿವಕುಮಾರ ಅವರನ್ನು ಆಗ್ರಹಿಸಿದೆ.
ಇಂದು ಬೆಳಗಾವಿಯ ನೀರಾವರಿ ಮುಖ್ಯ ಅಭಿಯಂತರ ಕಚೇರಿಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆ ನಂತರ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಲಾಯಿತು.
ಕೊಯ್ನಾದಿಂದ ಕೃಷ್ಣೆಗೆ ಬಿಡುಗಡೆ ನೀರಿನ ಬದಲಾಗಿ ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ ಪ್ರದೇಶಕ್ಕೆ ನೀರು ಪೂರೈಸಬೇಕೆಂದು ಮಹಾರಾಷ್ಟ್ರವು ಶರತ್ತು ವಿಧಿಸಿದೆ . ಏತ ನೀರಾವರಿ ಯೋಜನೆಗೆ ಆಲಮಟ್ಟಿ ಜಲಾಶಯದಿಂದ 6.5 ಟಿ.ಎಮ್.ಸಿ. ನೀರು ಹಂಚಿಕೆಯಾಗಿದ್ದು 52 ಸಾವಿರ ಹೇಕ್ಟರ್ ಜಮೀನನ್ನು ನೀರಾವರಿಗೆ ಒಳಪಡಿಸುವ ಉದ್ದೇಶವಿದೆ. ಒಂದು ವೇಳೆ ಜತ್ತ ಪ್ರದೇಶಕ್ಕೆ ಇಲ್ಲಿಂದಲೇ ನೀರು ಪೂರೈಸುವದಾದರೆ ನಮ್ಮ ಯೋಜನಾ ಪ್ರದೇಶಕ್ಕೆ ಹೊಡೆತ ಬೀಳಲಿದೆ. ಆದ್ದರಿಂದ ಒಪ್ಪಂದದಲ್ಲಿ "ಹೆಚ್ಚುವರಿ ನೀರಿನ ಲಭ್ಯತೆಯನ್ನು ಆಧರಿಸಿ" ಎಂಬ ಅಂಶವನ್ನು ಸೇರಿಬೇಕೆಂದು ಕ್ರಿಯಾ ಸಮಿತಿಯು ತನ್ನ ಮನವಿಯಲ್ಲಿ ತಿಳಿಸಿದೆ.
ಮಹಾದಾಯಿ ನ್ಯಾಯ ಮಂಡಳಿಯು ತನ್ನ ತೀಪರ್ು ನೀಡಿ ಎಂಟು ತಿಂಗಳಾದರೂ ಕೇಂದ್ರವು ಅಧಿಸೂಚನೆ ಹೊರಡಿಸಿಲ್ಲ. ಕಳಸಾ ನಾಲೆಯಿಂದ ರಾಜ್ಯಕ್ಕೆ ಹಂಚಿಕೆಯಾದ 2.72 ಟಿ.ಎಂ.ಸಿ. ನೀರಿನ ಬಳಕೆಗಾಗಿ ರಾಜ್ಯ ಸರಕಾರ ಸಮಗ್ರ ಯೋಜನಾ ವರದಿ (ಡಿ.ಪಿ.ಆರ್)ಯನ್ನು ತುತರ್ಾಗಿ ಸಿದ್ಧಪಡಿಸಬೇಕೆಂ ದೂ ಸಚಿವರನ್ನು ಒತ್ತಾಯಿಸಲಾಯಿತು.
ಒಂದೇ ತಿಂಗಳಲ್ಲಿ ಮೇಕೆದಾಟು ಯೋಜನೆಯ 6 ಸಾವಿರ ಕೋಟಿ ರೂ.ಗಳ. ಡಿ.ಪಿ.ಆರ್.ನ್ನು ರಾಜ್ಯ ಸರಕಾರ ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದೆ. ಆ ಯೋಜನಗೆ ನೀಡಿದ ಮಹತ್ವವನ್ನು ಕಳಸಾ ಬಂಡೂರಿ ಯೋಜನೆಗೂ ನೀಡಬೇಕೆಂದು ಸಚಿವರನ್ನು ಆಗ್ರಹಿಲಾಯಿತು.
ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ, ಎಂ.ಜಿ. ಮಕಾನದಾರ, ಸಲೀಂ ಖತೀಬ, ವೀರೇಂದ್ರ ಗೋಬರಿ ಮತ್ತಿತರರು ಸಚಿವರನ್ನು ಭೆಟ್ಟಿಯಾಗಿದ್ದರು.