ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಡಿಸಿಗೆ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ21 :ಕಳೆದ 26 ವರ್ಷದಿಂದ ಹೆಳವ ತರ್ಲಘಟ್ಟ ಗ್ರಾಮದ ಕಂದಾಯ ಇಲಾಖೆಗೆ ಸೇರಿದ 212ಎಕರೆ ಜಮೀನುನ್ನು ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಉತ್ತರ ಕನರ್ಾಟಕ ರೈತ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಅಪರ್ಿಸಿದೆ.

  ಕಂದಾಯ ಇಲಾಖೆಯ ಹುಲ್ಲುಗಾವುಲು ಪ್ರದೇಶವಾದ ಈ ಜಮೀನುನ್ನು 2004 ವರೆಗೆ 26 ವರ್ಷದಿಂದ 80 ರೈತರು ಸಾಗುವಳಿ ಮಾಡಿದ್ದಾರೆ. ಬಳಕ ಅಕ್ಷೇಪಿಸಿದ ಇಲಾಖೆ ವಿರುದ್ಧ ಧಾರವಾಡ ಉಚ್ಛ ನ್ಯಾಯಾಲಯದ ಮೊರೆ ಹೋದ ರೈತರು, ನಮಗೆ ಬದುಕಿಗೆ ಭೂಮಿ ಇಲ್ಲ. ಅಕ್ರಮ, ಸಕ್ರಮ ಯೋಜನೆಯಡಿ ಸಕ್ರಮಗೊಳಿಸಲು ಅಪರ್ಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಮನವಿ ಆಲಿಸಿದ ನ್ಯಾಯಾಲಯ, ಅಕ್ರಮ-ಸಕ್ರಮ ಸಮಿತಿಯಲ್ಲಿ ನಿರ್ಣಯಿಸಿ ರೈತರಿಗೆ ನ್ಯಾಯ ನೀಡುವಂತೆ ಆದೇಶಶಿದೆ. ಆದರೆ, ಇಲ್ಲಿವರೆಗೂ ಸಮಿತಿ ರಚನೆಯಾ ಗಿಲ್ಲ. ರೈತರಿಗೆ ನ್ಯಾಯ ಸಿಕ್ಕಿಲ್ಲ. ಈಗ ಅರಣ್ಯ ಇಲಾಖೆ ಗಿಡ ನೆಡಲು ಮುಂದಾಗುತ್ತಿದೆ. ಇದನ್ನು ತಡೆದು ರೈತರ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

   ಪ್ರಾಣ ಬಿಟ್ಹೇವಿ ಹೊರತು, ಭೂಮಿ ಬಿಡಲ್ಲ ಎಂದು ಸ್ಪಷ್ಟಪಡಿಸಿದ ರೈತರು, ಅಕ್ರಮ-ಸಕ್ರಮ ಸಮಿತಿ ನಿರ್ಣಯ ಕೈಗೊಳ್ಳುವರೆಗೂ ರೈತರು ಉಳುಮೆ ಮಾಡಲ್ಲ. ಅರಣ್ಯ ಇಲಾಖೆಯವರು ಯಾವುದೇ ರೀತಿ ಗಿಡ ನೆಡುವ ಕಾರ್ಯಕ್ರಮ ಕೈಗೊಳ್ಳದಂತೆ ತಾಕೀತು ಮನವಿ ಮಾಡಿದ ರೈತರು, ಸಕ್ರಮಗೊಳಿಸಲು 1997ರಲ್ಲಿ ಅಜರ್ಿ ಸಲ್ಲಿಸಿದ್ದ ರೂ ಕಂದಾಯ ಇಲಾಖೆ ಕ್ರಮಕೈಗೊಂಡಿಲ್ಲ. ಹೀಗಾಗಿ ಸಾಗುವಳಿ ಮಾಡುತ್ತಿರುವ ರೈತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದ್ದಾರೆ.