PROTESTವಿದ್ಯಾರ್ಥಿಗಳ ಮೇಲೆ ದಮನಕಾರಿ ಕಾರ್ಯಾಚರಣೆ ಸರಿಯಲ್ಲ; ಪ್ರಿಯಾಂಕಾ ಚೋಪ್ರಾ

ಮುಂಬೈ, ಡಿ ೧೯:     ಪೌರತ್ವ ತಿದ್ದುಪಡಿ ಕಾಯ್ದೆಯನ್ನು  ವಿರೋಧಿಸಿ   ಪ್ರತಿಭಟನೆ  ನೆಡೆಸಿದ ಜಾಮಿಯಾ ಮಿಲಿಯಾ  ಇಸ್ಲಾಮಿಯಾ ಹಾಗೂ ಅಲಿಗಢ ಮುಸ್ಲಿಂ  ವಿಶ್ವವಿದ್ಯಾಲಯದ  ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದಮನಕಾರಿ ಕಾರ್ಯಾಚರಣೆ  ಸರಿಯಲ್ಲ   ಎಂದು ಬಾಲಿವುಡ್  ತಾರೆ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.ಕಾಯ್ದೆಯನ್ನು  ವಿರೋಧಿಸಿ  ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು   ಕೈಗೊಂಡ  ಪ್ರತಿಭಟನೆ,  ಹಿಂಸಾಸ್ವರೂಪಕ್ಕೆ ತಿರುಗಿದ ಕೂಡಲೇ  ಪೊಲೀಸರು   ವಿಶ್ವವಿದ್ಯಾಲಯದ  ಕ್ಯಾಂಪಸ್   ಪ್ರವೇಶಿಸಿ ಪ್ರತಿಭಟನಾಕಾರರನ್ನು ಚದುರಿಸುವ  ಕ್ರಮವಾಗಿ  ವಿದ್ಯಾರ್ಥಿಗಳ ಮೇಲೆ ಲಾಠಿ  ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ಪ್ರತಿ ಮಗುವಿಗೂ   ಶಿಕ್ಷಣ  ಕಲ್ಪಿಸುವುದು ನಮ್ಮ ಕನಸು,  ವಿದ್ಯಾವಂತರಿಗೆ ಸ್ವತಂತ್ರ  ಆಲೋಚನೆಯ ಶಕ್ತಿ ಇರುತ್ತದೆ   ...  ಅವರೇನು  ಹೇಳುತ್ತಾರೆ  ಎಂಬುದನ್ನು ಆಲಿಸಬೇಕಾದ ಆಗತ್ಯವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ   ಪ್ರತಿಭಟನೆ  ನಡೆಸುವರ  ಮೇಲೆ  ಹಿಂಸೆಯ ಮೂಲಕ  ದಾಳಿ ನಡೆಸಿರುವುದು  ತಪ್ಪು  ಎಂದು  ಅವರು ಹೇಳಿದ್ದಾರೆ.  ಪ್ರತಿಯೊಬ್ಬ ವ್ಯಕ್ತಿಗೂ   ಮಹತ್ವ ಇದೆ.  ಇದು  ಬದಲಾಗುತ್ತಿರುವ ಭಾರತ  ಎಂದು ಅವರು ಟ್ವಿಟ್ ಮಾಡಿದ್ದಾರೆ.