ಲೋಕದರ್ಶನ ವರದಿ
ಗದಗ 30: ನಮ್ಮ ಭಾರತ ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ, ನಮ್ಮ ದೇಶದ ಸ್ವಾತಂತ್ರಕ್ಕಾಗಿ ಅನೇಕ ಹೋರಾಟಗಳನ್ನು ನಡೆಸಲಾಗಿದೆ, 18ನೇ ಶತಮಾನದಿಂದಲೇ ನಮ್ಮ ದೇಶವನ್ನು ಬ್ರಿಟಿಷರ ಗುಲಾಮಗೇರಿಯಿಂದ ಮುಕ್ತಗೊಳಿಸಿ ಸ್ವಾತಂತ್ರ ಭಾರತವಾಗಿ ಮಾಡಲು ಸಾಕಷ್ಟು ಮಹಾತ್ಮರು ತಮ್ಮ ತ್ಯಾಗ ಬಲಿದಾನವನ್ನು ನೀಡಿದ್ದಾರೆ, ನಮ್ಮ ದೇಶವು ಸ್ವಾತಂತ್ರವಾದ ನಂತರ ಪ್ರಜಾಪ್ರಭುತ್ವದಲ್ಲಿ ಯಾವ ರೀತಿ ಕಾಯ್ದೆ ಕಾನೂನುಗಳನ್ನು ಇರಬೇಕೆಂದು ಯೋಚಿಸಿ ಡಾ. ಬಿ.ಆರ್. ಅಂಬೇಡ್ಕರವರ ಅಧ್ಯಕ್ಷತೆಯಲ್ಲಿ ನಮ್ಮ ಭಾರತದ ಸಂವಿದಾನವನ್ನು ರಚಿಸಲಾಗಿದೆ. ನಮ್ಮ ಸಂವಿಧಾನದ ಮೂಲಕವೇ ಇವತ್ತು ನ್ಯಾಯಾಂಗ, ಶಾಸಕಾಂಗ ಮತ್ತು ಕಾಯರ್ಾಂಗಗಳು ಆಡಳಿತ ನಡೆಸುತ್ತಿರುವುದು, ಇದನ್ನು ಎಲ್ಲರೂ ಅರಿತು ನಮ್ಮ ಭಾರತದ ದೇಶದ ಸಂವಿಧಾನದ ಬಗ್ಗೆ ಅರಿವು ಮೂಡಿಸಲು ದೇಶದ ಪ್ರತಿಯೂಬ್ಬ ನಾಗರಿಕರು ಶ್ರಮಿಸಬೇಕೆಂದು ದಲಿತ ಸಂಘರ್ಸ ಸಮಿತಿಯ ಜಿಲ್ಲಾ ಸಂಚಾಲಕರಾದ ವೆಂಕಟೇಶಯ್ಯ ಕರೆ ನೀಡಿದರು.
ಅವರು ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಹಾಗೂ ಕನ್ನಡ ಕಿರಣ ಶಿಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ರಾಜೀವ ಗಾಂಧಿನಗರದ ಕೆ.ವ್ಹಿ.ಎಸ್.ಆರ್ ಕಾಲೇಜು ಆವರಣದಲ್ಲಿರುವ ಕನ್ನಡ ಕಿರಣ ಶಿಕ್ಷಣ ಸಮಿತಿ ಕಾಲೇಜನಲ್ಲಿ ಹಮ್ಮಿಕೊಂಡಿದ್ದ ಎಮ್.ಎಸ್.ಡಬ್ಲೂ ಹಾಗೂ ಬಿ.ಎಸ್.ಡಬ್ಲೂ ವಿಧ್ಯಾಥರ್ಿಗಳೊಂದಿಗೆ ಭಾರತದ ಸಂವಿಧಾನ ಹಾಗೂ ಸ್ಲಂ ಜನರ ಸಮಸ್ಯಗಳು ಮತ್ತು ಕೊಡುಗೆಗಳ ಕುರಿತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ನಮ್ಮ ದೇಶದಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದು 68 ವರ್ಷಗಳು ಕಳೆದರು ಸಹ ಪ್ರಜಾಪ್ರಭುತ್ವವಾಗಿರುವ ನಮ್ಮ ದೇಶದಲ್ಲಿ ಈಗೂ ಸಹ ಜಾತಿ ತಾರತಮ್ಯ ಜೀವಂತವಾಗಿದೆ, ಜಾತಿ ತಾರತಮ್ಯ ಸಂಪೂರ್ಣವಾಗಿ ನಮ್ಮ ದೇಶದಿಂದ ಹೊಗಲಾಡಿಸಲು ಸಂವಿಧಾನದಲ್ಲಿರುವ ಕಾಯ್ದೆ ಕಾನೂನುಗಳನ್ನು ಕಡ್ಡಾಯವಾಗಿ ಜಾರಿಗೆ ಬಂದಾಗ ಮಾತ್ರ ನಮ್ಮ ದೇಶ ಸಂಪೂರ್ಣವಾಗಿ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯವೆಂದು ಹೇಳಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಸ್ಲಂ ಜನರ ಸಮಸ್ಯಗಳು ಮತ್ತು ಕೊಡಗೆಗಳು ಕುರಿತು ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸಕರ್ಾರದಿಂದ ಗುಡಿಸಲ ಮುಕ್ತ ರಾಜ್ಯ ಮಾಡಲಾಗುವುದೆಂದು ಘೋಷಿಸಿ ಸ್ಲಂ ಪ್ರದೇಶಗಳ ಅಭಿವೃಧ್ದಿಗಾಗಿ ಕೊಟ್ಯಾಂತರ ಹಣವನ್ನು ನೀಡಲಾಗುತ್ತಿದೆ, ಆದರೆ ಈ ವರೆಗೊ ಕೊಳಗೇರಿಗಳ ಅಭಿವೃಧ್ದಿ ಸಾಧ್ಯವಾಗಲಿಲ್ಲಾ, 21ನೇ ಶತಮಾನದಲ್ಲಿಯು ಕೊಳಗೇರಿಗಳಲ್ಲಿ ವಿದ್ಯುತ ಸಂಪರ್ಕವಿಲ್ಲದೆ ಕತ್ತಲಲ್ಲಿ ಬದುಕು ನಡೆಸುವಂತ ಅಂತಂತ್ರ ಸ್ಥಿತಿಯಲ್ಲಿ ಸ್ಲಂ ಜನರು ವಾಸವಾಗಿದ್ದಾರೆ, 1973ರಲ್ಲಿ ಸ್ಲಂ ಆಕ್ಟ್ ಜಾರಿಗೆ ತಂದು ಈ ಕಾಯ್ದೆಯ ಮೂಲಕ ಅಘೋಷಿತ ಗುಡಿಸಲ ಪ್ರದೇಶಗಳನ್ನು ಅಧಿಕೈತವಾಗಿ ಘೋಷಿಸಿ ಅಭಿವೃಧ್ದಿ ಪಡಿಸಲಾಗುತ್ತಿದೆ, ಕೊಳಗೇರಿಗಳ ಪುನರವಸತಿಗಾಗಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯನ್ನು ಜಾರಿಗೆ ತಂದು ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ, ಆದರೆ ಸಕರ್ಾರದ ಯೋಜನೆಗಳ ಸರಿಯಾಗಿ ಬಳಕೆಯಾಗದೇ ಸ್ಲಂ ಪ್ರದೇಶದ ಕುಟುಂಬಗಳು ಯೋಜನೆಗಳಿಂದ ವಂಚಿತರಾಗಿದ್ದಾರೆ, ನಮ್ಮ ನಗರಗಳನ್ನು ಕಟ್ಟುವ ಶ್ರಮ ಜೀವಿಗಳಾದ ಕಟ್ಟಡ ಕಾಮರ್ಿಕರು, ಹಮಾಲಿ ಕಾಮರ್ಿಕರು, ಪೌರಕಾಮರ್ಿಕರು ತಮ್ಮಗೆ ಸರಿಯಾಗಿ ಮನೆ ಇಲ್ಲದೇ ಗುಡಿಸಲಗಳಲ್ಲಿ ಜೀವನ ನಡೆಸುವಂತ ಸ್ಥಿತಿ ನಿಮರ್ಾಣವಾಗಿದೆ ಎಂದು ಹೇಳಿದರು.
ಎಮ್.ಎಸ್.ಡಬ್ಲೂ ಸಂಯೋಜಕರಾದ ಡಾ. ಶೇಖರ ಅಡಗಿ ಮಾತನಾಡಿ ಸಮಾಜ ಸೇವೆಗಾಗಿ ಸಂಘಟನೆಗಳು ನಡೆಸುತ್ತಿರುವ ಪ್ರಯತ್ನಗಳನ್ನು ನಾವು ನೋಡಿ ಕಲಿಯಬೇಕಾಗಿದೆ, ಸಾಮಾಜಿಕ ಕ್ಷೇತ್ರದಲ್ಲಿ ನಾವು ಜನರ ಸಮಸ್ಯಗಳಿಗೆ ಮತ್ತು ಅವರ ನೋವುಗಳಿಗೆ ಸ್ಪಂದಿಸಿ ಅವರ ಬದುಕು ಬದಲಾವಣೆಗಾಗಿ ಪ್ರಯತ್ನಿಸಬೇಕಾಗಿದೆ, ನಮ್ಮ ದೇಶದ ಸಂವಿಧಾನ ನಮ್ಮಲರಿಗೊ ಶ್ರೇಷ್ಠವಾಗಿದ್ದು ಇದನ್ನು ಪ್ರತಿಯೂಬ್ಬ ವಿದ್ಯಾಥರ್ಿಗಳು ಅರಿತುಕೊಳ್ಳಬೇಕು, ಸ್ಲಂ ಸಮಿತಿಯಿಂದ ಇಂತಹ ಸಂವಾದ ಕಾರ್ಯಕ್ರಮ ನಮ್ಮ ವಿದ್ಯಾಥರ್ಿಗಳೊಂದಿಗೆ ಹಮ್ಮಿಕೊಂಡಿದ್ದು ಇದರ ಸದಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು, ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಸ್.ಡಬ್ಲೂ ಕಾಲೇಜಿನ ಪ್ರಾಚಾರ್ಯರಾದ ಅಂಬರೀಶ ಕಪ್ಲಿಯವರು ವಹಿಸಿದ್ದರು, ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷರಾದ ರವಿಕುಮಾರ ಬೆಳಮಕರ, ಮಹಿಳಾ ಸಮಿತಿ ಸಂಚಾಲಕಿ ಪರವೀನ ಹವಾಲ್ದಾರ, ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪೂರ ವೇದಿಕೆ ಮೇಲೆ ಉಪಸ್ಥಿತರಿದ್ದರು, ಕಾಲೇಜಿನ ವಿದ್ಯಾಥರ್ಿನಿಯಾದ ಮಹಾದೇವಿ.ಡಿ.ಸೂಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಕಾರ್ಯಕ್ರಮದಲ್ಲಿ ಎಮ್.ಎಸ್.ಡಬ್ಲೂ ಹಾಗೂ ಬಿ.ಎಸ್.ಡಬ್ಲೂ ನೂರಾರು ವಿಧ್ಯಾಥರ್ಿ, ವಿದ್ಯಾಥರ್ಿನಿಯರು ಭಾಗವಹಿಸಿದ್ದರು.