ದಕ್ಷಿಣ ಕೊರಿಯಾದಲ್ಲಿ 24 ಗಂಟೆಯಲ್ಲಿ 38 ಹೊಸ ಕರೋನ ಪ್ರಕರಣ ವರದಿ

ಸಿಯೋಲ್, ಜೂನ್ 9,ದಕ್ಷಿಣ ಕೊರಿಯಾದಲ್ಲಿ ಕಳದೆ 24 ಗಂಟೆಗಳ ಅವಧಿಯಲ್ಲಿ  ಹೊಸದಾಗಿ 38 ಪ್ರಕರಣಗಳು ವರದಿಯಾಗಿದೆ. ಪರಿಣಾಮ ಈವರೆಗೆ  ದೇಶದಲ್ಲಿ   ಸೋಂಕಿತರ  ಸಂಖ್ಯೆ 11,852 ಕ್ಕೆಏರಿಕೆಯಾಗಿದೆ.ಹೊಸ ಪ್ರಕರಣಗಳಲ್ಲಿ, ಮೂರು ವಿದೇಶಗಳಿಂದ ಬಂದಿರುವ ಆಮದು ಪ್ರಕರಣಗಳಾಗಿದೆ. ಇನ್ನೂ ಒಂದು ಸಾವು ದೃ ಡಪಪಟ್ಟಿದ್ದು  ಸಾವಿನ ಸಂಖ್ಯೆ 274 ಕ್ಕೆ ತಲುಪಿದೆ.  ಸಾವಿನ ಪ್ರಮಾಣವು ಶೇಕಡಾ 2.31 ರಷ್ಟಿದೆ.ಸಂಪೂರ್ಣ ಚೇತರಿಸಿಕೊಂಡ ನಂತರ ಒಟ್ಟು 26 ರೋಗಿಗಳನ್ನು ಸಂಪರ್ಕತಡೆಯಿಂದ ಬಿಡುಗಡೆ ಮಾಡಲಾಗಿದೆ. ಜನವರಿ 3 ರಿಂದ, ದೇಶವು 1.03 ದಶಲಕ್ಷಕ್ಕೂ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಿದೆ.