- ಬೆಳ್ಳೆಪ್ಪ ದಳವಾಯಿ
ಕಡಬಿ 04: ಕೇಂದ್ರ ಮತ್ತು ರಾಜ್ಯ ಸಕರ್ಾರದ ಹಲವಾರು ಯೋಜನೆಗಳಾದ ಅನ್ನಬಾಗ್ಯ, ಕ್ಷೀರಬಾಗ್ಯ, ಶೋಬಾಗ್ಯ, ಸರ್ವ ಶಿಕ್ಷಣ ಅಭಿಯಾಣ ಹಲವಾರು ಯೋಜನೆಗಳನ್ನು ಜಾರಿ ಗೋಳಿಸಿರುವ ದೇಶದ ಪ್ರತಿಯೊಂದು ನಾಗರೀಕರಿಗೆ ಸಾಕ್ಷರತೆ ಒದಗಿಸುವ ಸಲುವಾಗಿ ಕೋಟಿಗಂಟ್ಟಲೆ ಹಣ ವ್ಯಯ ಮಾಡುತ್ತಿದು ಆದರೆ ಕಡಬಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗೊರಗುದ್ದಿ ತೋಟದ ಶಾಲೆಯು ಮೂಲ ಕಟ್ಟಡಗಳಿಂದ ವಂಚಿತವಾಗಿದೆ. ಇಲ್ಲಿಯ ಹಳೆಯದಾದ ಕಟ್ಟಡ ಮೇಲ್ಚಾವಣೆ ಇಗಲೂ ಆಗಲೂ ವಿದ್ಯಾಥರ್ಿಗಳ ಮೇಲೆ ಹಂಚು ಇಟ್ಟಿಗೆ ಕಲ್ಲು ಬಿದ್ದು ವಿದ್ಯಾಥರ್ಿಗಳ ಜೀವಕ್ಕೆ ಕಂಠಕ ತರುವ ಮುಂಚೆ ಸಂಬಂದಿಸಿದ ಅಧಿಕಾರಿಗಳು ಇತ್ತ ಕಡೆ ಇನುಕಿ ಸಹ ನೋಡಿಲ್ಲಾ, ಶೀತಿಲಾವಸ್ಥೆ ಕಟ್ಟಡ ನೋಡಿದರೆ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತದೆ.
ಗೊರಗುದ್ದಿ ತೋಟದ ಶಾಲೆ ಪ್ರಾರಂಬಗೊಂಡು ಸುಮಾರು 32 ವರ್ಷ ಗತಿಸಿದ್ದು ಇಲ್ಲಿ 98 ವಿದ್ಯಾಥರ್ಿಗಳು ಪ್ರತಿದಿನ ವಿದ್ಯಾಬ್ಯಾಸಕೆ ಬರುತಿದ್ದು ಇಗಾಗಲೆ ಒಂದು ಕಟ್ಟಡದ ಮೇಲ್ಛಾವಣೆ ಕುಸಿದು ಪಾಳು ಬಿದ್ದಿದೆ ಹೊಸದಾಗಿ ನಿಮರ್ಿಸಿದ ಕಟ್ಟಡಗಳು ಶೀತೀಲಾವಸ್ಥೆಯಲ್ಲಿದ್ದು ಶಿಕ್ಷರಿಗೆ ಹಾಗೂ ವಿದ್ಯಾಥರ್ಿಗಳಿಗೆ ಪಾಠ ಬೋಧನೆ ಮತ್ತು ಮಧ್ಯಾಹ್ನದ ಬಿಸಿ ಊಟ ತಯಾರಿಸಲು ಕೊಠಡೆ ಇಲ್ಲದಂತಾಗಿದೆ. ಇಲ್ಲಿಯ ಕಟ್ಟಡಗಳು ಮೇಲ್ಚಾವಣೆ ಶೀತಿಲಾವಸ್ಥೆಯಲ್ಲಿದ್ದು ವಿದ್ಯಾಥರ್ಿಗಳ ತಲೆ ಮೇಲೆ ಉಸಕು ಹಾಗೂ ಕಡಿ ಬಿಳ್ಳುತಿರುವುದು ಸವರ್ೆ ಸಾಮಾನ್ಯವಾಗಿದೆ.
1ನೇ ತರಗತಿಯಿಂದ 6ನೇ ತರಗತಿಯವರಿಗೆ ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿದ್ದು 2 ಕಟ್ಟಡ ಮಾತ್ರ ವಿದ್ಯೆಕಲಿಸಲು ಉಪಯೋಗ 4 ಕಟ್ಟಡ ಸಂಪೂರ್ಣ ಹಾಳಾಗಿ ಇಗಲೂ ಆಗಲೂ ಬಿಳ್ಳುವು ಸ್ಥಿತಿಯಲ್ಲಿದ್ದು, ಒಂದೆ ಕಟ್ಟಡದಲ್ಲಿ ಶಾಲೆಯ ಕಛೇರಿ ಹಾಗೂ ಪಾಠ ಬೋದಿಸುವುದು ಅನಿವಾರ್ಯವಾಗಿದೆ ಶಾಲಾ ಆವರಣದಲ್ಲಿ ಕುಡಿಯುವ ನೀರಿನ ವ್ಯೆವಸ್ತೆಯಿಲ್ಲ ಊಟವಾದ ನಂತರ ವಿದ್ಯಾಥರ್ಿಗಳು ರೈತರ ಹೊಲಗದ್ದೆಗಳಿಗೆ ಹೋಗಿ ನೀರು ಕುಡಿಯಬೇಕಾಗಿದೆ ವಿದ್ಯಾಥರ್ಿಗಳಿಗೆ ವಿಷಜಂತುಗಳು ಕಚ್ಚಿದರೆ ಹೊಣೆ ಯಾರು ತಕ್ಷಣ ಮಕ್ಕಳಿಗೆ ಮೂಲಸೌರ್ಕಗಳನ್ನು ಕಲ್ಪಿಸಿ ಕೊಡಬೇಕೆಂದು ಪಾಲಕರು ಆಗ್ರಹಿಸಿದ್ದಾರೆ.