ಮಾ 12 ಕ್ಕೆ ರೇಣುಕಾಚಾರ್ಯ ಜಯಂತಿ
ಬೀಳಗಿ 07: ಮಹನೀಯರ ಜಯಂತಿಗಳ ಆಚರಣೆ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ.ಎಲ್ಲಾ ಸಮುದಾಯದವರೂ ಪಾಲ್ಗೊಂಡು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ರೇಣುಕಾಚಾರ್ಯ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು.
ದಾರ್ಶನಿಕರು, ಮಹಾನುಭಾವರ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವುದರ ಸಲುವಾಗಿ ಜಯಂತಿಗಳನ್ನು ಆಚರಣೆ ಮಾಡಲಾಗುವುದು .
ಮಾರ್ಚ 12 ರಂದು ರೇಣುಕಾಚಾರ್ಯ ಜಯಂತಿ ಹಿನ್ನಲೆ,ಸಮಾಜದ ಭಾಗದವರು, ಗಣ್ಯ ವ್ಯಕ್ತಿಗಳು,ಸಾರ್ವಜನಿಕರು,ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ 9:30 ಕ್ಕೆ ಪೂಜಾ ಕಾರ್ಯವನ್ನು ಮುಗಿಸಿಕೊಂಡು,10:00 ಘಂಟೆಗೆ ತಾಲೂಕು ಆಡಳಿತದಿಂದ ತಹಶೀಲ್ದಾರ್ ಕಚೇರಿಯಲ್ಲಿ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು,ತಾಲೂಕಿನ ಎಲ್ಲಾ ಶಾಲಾ-ಕಾಲೇಜು. ಗ್ರಾಂ,ಪಂ.ಸರ್ಕಾರಿ ಕಚೇರಿಗಳಲ್ಲಿ ರೇಣುಕಾಚಾರ್ಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು,
ಇನ್ನ ಮಾರ್ಚ 16 ರಂದು ಬೀಳಗಿ ಕಲ್ಮಠದಲ್ಲಿ ಸಮಾಜದ ಬಾಂಧವರು ಆಚರಣೆ ಮಾಡುವ ಜಯಂತಿ ಕಾರ್ಯಕ್ರಮದಲ್ಲಿ,ತಾಲೂಕು ಮಟ್ಟದ ಅಧಿಕಾರಿಗಳು,ನಾವು ಪಾಲ್ಗೊಳ್ಳುತ್ತೇವೆ, ಆದಷ್ಟು ಬೇಗ ಸಮಾಜದ ಮುಖಂಡರು ಕಾರ್ಯಕ್ರಮದ ರೂಪವೇಷಗಳ ಕುರಿತು ಮಾಹಿತಿಯನ್ನು ನೀಡಬೇಕು ಎಂದರು,
ಈ ವೇಳೆ, ಸಮಾಜದ ಮುಖಂಡ ಶ್ರೀಶೈಲ ಯಂಕಚಿಮಠ,ಬಸವರಾಜ್ ಉಮಚಗಿಮಠ.ಪ,ಪಂ ಅಧ್ಯಕ್ಷ ಮುತ್ತು ಬೋರ್ಜ,ಮುತ್ತು ವಸ್ತ್ರದ,ಆನಂದ ಜಡಿಮಠ,ಶ್ರೀಶೈಲ ಹಿರೇಮಠ,ಸಿದ್ದು ಮಾದರ, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು,