ವೀರಭದ್ರೇಶ್ವರ ದೇಗುಲದಲ್ಲಿ ರೇಣುಕಾಚಾರ್ಯ ಜಯಂತಿ ಆಚರಣೆ
ಹೂವಿನಹಡಗಲಿ 18: ತಾಲೂಕಿನ ಹೊಳಗುಂದಿ ಗ್ರಾಮದ ವೀರಭದ್ರೇಶ್ವರ ದೇಗುಲದಲ್ಲಿ ಸೋಮವಾರ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಹೆಚ್.ಎಂ.ಬೆಟ್ಟಯ್ಯ ಮಾತನಾಡಿ ರೇಣುಕಾಚಾರ್ಯರು ಸಮಾಜದಲ್ಲಿ ಬೇರೂರಿದ್ದ ಮೇಲು-ಕೀಳು ಭಾವ ಹೋಗಲಾಡಿಸಿದರು ಎಂದು ಹೇಳಿದರು.
ತಾಲೂಕು ವೀರಶೈವ ಸಮಾಜ ಅದ್ಯಕ್ಷ ಸಿಕೆಎಂ.ಬಸವಲಿಂಗಸ್ವಾಮಿ ಮಾತನಾಡಿ ವೀರಶೈವ ಉಪ ಪಂಗಡಗಳು ಸಂಘಟಿತರಾಗಬೇಕು ಎಂದರು. ಮುಂಡವಾಡದ ಉಮೇಶ, ಕಾರ್ಯದರ್ಶಿ ಬಿ.ಸಿದ್ದೇಶ, ಸಂ.ಕಾರ್ಯದರ್ಶಿ ವ್ಯೆ, ಮಲ್ಲಿಕಾರ್ಜುನ.ಎಸ್, ಕರಿಬಸಪ್ಪ, ಉಪನ್ಯಾಸಕ ಚಂದ್ರಶೇಖರಯ್ಯ ಇದ್ದರು.