ಬಳ್ಳಾರಿ ಮಾರ್ಚ್ 15 : ಸರ್ವೇ ಜನಾಃ ಆರ್ಟ್ಸ ಮತ್ತು ಕಲ್ಚರಲ್ (ಟ್ರಸ್ಟ್) ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿನಡೆಯುವ 8 ನೇ ಸಾಂಸ್ಕೃತಿಕ ಮಹೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೆ " ಬೆಂಗಳೂರು ನಿರ್ಮಾತೃ ದಿ : ಶ್ರೀ ಕೆಂಪೇಗೌಡ ಸದ್ಭಾವನಾ ರಾಷ್ಟ್ರ ಪ್ರಶಸ್ತಿಗೆ ಬಳ್ಳಾರಿಯ ಮೊಟ್ಟೆಯಮೇಲೆ ರಾಮಾಯಣ ಖ್ಯಾತಿಯ ಎ . ಮೊಹಮ್ಮದ್ ರಫಿ ಅವರು ಆಯ್ಕೆಆಗಿದ್ದಾರೆ .
ಮಹಮ್ಮದ್ ರಫಿ ಅವರ ಕಲಾಕೃತಿಗಳುಜಲವರ್ಣ , ತೈಲವರ್ಣ, ಅಕ್ರಿಲಿಕ್,ಮಾದ್ಯಮ ಸೇರಿದಂತೆ ಇವರ ಹಲವಾರು ಕಲಾಕೃತಿಗಳು ದೇಶ ಮತ್ತು ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ ಇವರ ಕಲಾಕೃತಿಗಳಲ್ಲಿ ಸರಳ ಮತ್ತು ನೈಜತೆಯನ್ನು ಒಳಗೊಂಡಂತೆ ನೆಟ್ಟಿಗರಿಗೆ ಇಷ್ಟವಾಗಿವೆ , ಇವರ ಪೋಸ್ಟರ್ ಕೃತಿಗೆ ಅಮೆರಿಕದ ನಾಸಾ ಪ್ರಥಮ ಪ್ರಶಸ್ತಿ ಸೇರಿದಂತೆ ಇತ್ತಿಚಿಗೆ ಆನ್ಲೈನ್ ಕೃತಿಗಳಿಗೆ ಮಹಾರಾಷ್ಟ್ರದಿಂದ ರೇಡಿಯಂಟ್ ಟ್ಯಾಲೆಂಟ್ ಬುಕ್ ಆಫ್ ರೆಕಾರ್ಡ್ಸ್,ಸೇರೆ್ಡ ಆಗಿದೆ. ಅವರು ಅದ್ಭುತ ಕನ್ನಡ ಪ್ರೇಮ, ರಫೀಯವರ ಹಿತಎನಿಸುವ ಕನ್ನಡ ಭಾಷೆಯ ಮತ್ತು ಅವರ ಸರಳತೆ ಅಹಂ ಇಲ್ಲದ ಅವರ ನಡೆ ಕಂಡು ಇಂದಿನ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಇದೇ ತಿಂಗಳ 24 ರಂದು ರವೀಂದ್ರ ಕಲಾಕ್ಷೇತ್ರ ದ ಆವರಣದಲ್ಲಿರುವ ನಯನ ಸಭಾಂಗಣದಲ್ಲಿನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದೆಂದು ಸಂಘಟಕರು ಮತ್ತು ಸಂಸ್ಥಾಪಕ ಅಧ್ಯಕ್ಷರು ತಿಳಿಸಿದ್ದಾರೆ.