ಮುಂಬೈ ಭಯೋತ್ಪಾದಕ ದಾಳಿಯ ನೆನಪು: ಉದ್ಧವ್ ಠಾಕ್ರೆ

ಮುಂಬೈ, ಜ 6      ದೇಶದ ವಿದ್ಯಾರ್ಥಿಗಳು ಅಸುರಕ್ಷಿತ ಭಾವನೆ ಹೊಂದಿದ್ದಾರೆ  ಎಂದು  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.   

ಜೆಎನ್ ಯು ವಿದ್ಯಾರ್ಥಿಗಳ ಮೇಲಿನ ದಾಳಿ ನಮಗೆ ಮುಂಬೈ  ಭಯೋತ್ಪಾದಕರ ದಾಳಿಯನ್ನು ನೆನಪು ಮಾಡಿದೆ ಎಂದೂ ಪ್ರತಿಕ್ರಿಯೆ ನೀಡಿದ್ದಾರೆ .

ಜೆಎನ್ಯು ಕ್ಯಾಂಪಸ್ ನಲ್ಲಿ ಭಾನುವಾರ ನಡೆದ ಹಿಂಸಾಚಾರದ ಕುರಿತು ಮಾತನಾಡಿದ ಠಾಕ್ರೆ ದಾಳಿಕೋರರನ್ನು 'ಹೇಡಿಗಳು' ಎಂದು ಜರಿದರು . , "ಜೆಎನ್ ಯು ನಲ್ಲಿ ಮುಸುಕುಧಾರಿ ದಾಳಿಕೋರರು ಹೇಡಿಗಳು, ಅವರ ಗುರುತನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ಮಹಾರಾಷ್ಟ್ರದ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ, ಅವರನ್ನು ನೋಯಿಸುವ ಯಾವುದೇ ಕ್ರಮವನ್ನು ನಾವು, ನಮ್ಮ ಸರಕಾರ ಎಂದಿಗೂ   ಸಹಿಸುವುದಿಲ್ಲ ಎಂದು ಅವರು ಗುಡುಗಿದ್ದಾರೆ ಎಂದೂ ವರದಿಯಾಗಿದೆ.