ಬಳ್ಳಾರಿ 25: ದಿ. 22ರಂದು ಶನಿವಾರ ಬೆಳಿಗ್ಗೆ:6.30 ಬಂಡ್ರಾಳ್ ಗ್ರಾಮದ ಪೊಂಪಯ್ಯತಾತನವರ ಮಠದಲ್ಲಿ ಶ್ರೀ ಪೊಂಪಯ್ಯತಾತ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ, ಶ್ರೀ ಉಜ್ಜನಿ ಸಿದ್ದಲಿಂಗ ಭಗವತ್ಪದರು, 89ನೇ ಪುಣ್ಯ ಸ್ಮರಣೆ, ಶ್ರೀ ಪುಟ್ಟರಾಜ ಗುರುಗಳ 15ನೇ ಪುಣ್ಯ ಸ್ಮರಣೆ ಹಾಗೂ ಶ್ರೀ ಪೊಂಪಯ್ಯತಾತ ನವರ 33ನೇ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ.ನಿ.ಪ್ರ.ಅಭಿನವ ಮಹಾಂತ ಮಹಾಸ್ವಾಮಿಗಳು, ಚರಣಗಿರಿ ಸಂಸ್ಥಾನ ಮಠ ಹಾಲ್ವಿ, ವಹಿಸಿದ್ದರು. ಪೂಜ್ಯರು ಜ್ಯೋತಿ ಬೆಳಗಿಸುವುದರ ಮೂಲಕ ಶ್ರೀ ಪೊಂಪಯ್ಯತಾತ ಸೇವಾ ಟ್ರಸ್ಟ್ (ರಿ) ಉದ್ಘಾಟಿಸಿದರು. ಅವರು ಮಾತನಾಡಿ ಶ್ರೀ ಉಜ್ಜನಿ ಸಿದ್ದಲಿಂಗ ಭಗವತ್ಪದರು ಹಾಗೂ ಬಂಡ್ರಾಳ್ ಶ್ರೀ ಪೊಂಪಯ್ಯ ತಾತನವರು ಸಮಾಜ ಮುಖಿ ಬಧುಕಿದವರು ಅವರ ಹೆಸರಿನಲ್ಲಿ ಟ್ರಸ್ಟ್‌ನ್ನು ಆರಂಭಿಸಿ ಅದರ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಪುಣ್ಯದ ಕೆಲಸ, ಮಹಾತ್ಮರನ್ನು ನೆನಸುವುದೇ ಒಂದು ಪುಣ್ಯ ಎಂದರು ಎಲ್ಲಾರು ಧರ್ಮದ ಮಾರ್ಗದಲ್ಲಿ ನಡೆಯಬೇಕು ನಿಜವಾದ ಸಂಪತ್ತು ಎಂದರೆ ಆಧ್ಯಾತ್ಮಿಕ ಸಂಪತು. ನಾವು ಪ್ರಪಂಚಿಕವಾಗಿ ಎಷ್ಟೆ ಶ್ರೀಮಂತರಾದರು ಅದರಿಂದ ನಮಗೆ ಸುಖವಿಲ್ಲ, ಸಂಪತ್ತು ಹೆಚ್ಚಾದಂತೆ ತೊಂದರೆಗಳು ಹೆಚ್ಚಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಜೀವನದಲ್ಲಿ ಆಧ್ಯಾತ್ಮ, ಧ್ಯಾನ ಮತ್ತು ಧರ್ಮದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಬಸವಭೂಷಣ ಸ್ವಾಮಿಗಳು, ಸಿರುಗುಪ್ಪ, ಶ್ರೀ ಶಿವರುದ್ರ ತಾತನವರು ಮುತ್ತಿನಪೆಂಡೆ ಮಠ, ಹಚ್ಚೊಳ್ಳಿ ಇವರು ವಹಿಸಿದರು. ಕಾರ್ಯಕ್ರಮದಲ್ಲಿ ಮಲ್ಲನಗೌಡ ಗವಾಯಿಗಳು ಮತ್ತು ನಾಮ ಜಗದೀಶ್ ರವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕುಮಾರಿ ದೇವಿರಮ್ಮ ಹಾಗೂ ಕುಮಾರಿ ಭಾರತಿ ಇವರಿಂದ ನೃತ್ಯ ಪ್ರದರ್ಶನ ನಡೆಯಿತು. ಪ್ರಾಸ್ತಾವಿಕವಾಗಿ ಟ್ರಸ್ಟ್‌ನ ಅಧ್ಯಕ್ಷರಾದ ಬಂಡ್ರಾಳ್ ಮೃತ್ಯುಂಜಯಸ್ವಾಮಿ ಮಾತನಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 1) ಚೊಕ್ಕ ಬಸವನಗೌಡ್ರು, ಅಧ್ಯಕ್ಷರು ಪಿ.ಎಲ್.ಡಿ.ಬ್ಯಾಂಕ್ ಸಿರುಗುಪ್ಪ, 2) ನಾಗಲಾಪುರ ಬಸವರಾಜಪ್ಪ, ಉದ್ದಿಮೆದಾರರು, ಸಿರುಗುಪ್ಪ, 3) ಮಸೀದಿಪುರ ಸಿದ್ದರಾಮಗೌಡ್ರ, ಪ್ರಥಮ ದರ್ಜೆ ಗುತ್ತಿಗೆದಾರರು, ಬಳ್ಳಾರಿ, 4) ಡಾ. ದರೂರು ಪುರುಷೋತ್ತಮಗೌಡ್ರು, ರೈತ ಮುಖಂಡರು, ಬಳ್ಳಾರಿ, 5) ಬಿ.ಕೆ.ಬಿ.ಎನ್. ಮೂರ್ತಿ, ಬಳ್ಳಾರಿ ಇವರಿಗೆ ಟ್ರಸ್ಟ್‌ವತಿಯಿಂದ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯರಿಂದ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ವಿರೇಶ್‌ಸ್ವಾಮಿ, ರಾಜಶೇಖರ್‌ಸ್ವಾಮಿ ತೆಕ್ಕಲಕೋಟೆ ಇವರಿಂದ ವೇದಗೋಶದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಗಾಣದ ಶಂಭುಲಿಂಗಯ್ಯ ನವರು ನಡೆಸಿಕೊಟ್ಟರು. ಎಲ್ಲಾರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.