ಇರಾನ್ ನಿಂದ ಸ್ಥಳಾಂತರಗೊಂಡವರು ಜೋಧ್ ಪುರದ ಸೇನಾ ಕ್ಷೇಮ ಕೇಂದ್ರಕ್ಕೆ ಸ್ಥಳಾಂತರ

ಜೋಧಪುರ, ಮಾ ೨೯, ಕೊರೊನಾ  ವೈರಸ್ ಪೀಡಿತ ಇರಾನ್ನಿಂದ ೨೭೫ ಭಾರತೀಯ ನಾಗರೀಕರ ಹೊಸ ತಂಡ      ಭಾನುವಾರ ಬೆಳಗ್ಗೆ  ಜೋಧಪುರ  ವಿಮಾನ ನಿಲ್ದಾಣಕ್ಕೆ  ಆಗಮಿಸಿದ್ದು, ನಂತರ  ಅವರನ್ನು  ಜೋಧ್ಪುರದ ಭಾರತೀಯ ಸೇನಾ ಕ್ಷೇಮ ಕೇಂದ್ರಕ್ಕೆ  ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡವರಲ್ಲಿ ಲಡಾಕ್ ಮತ್ತು ಕಾಶ್ಮೀರದ ಯಾತ್ರಿಕರು ಮತ್ತು ವಿದ್ಯಾರ್ಥಿಗಳು ಸೇರಿದ್ದು, ಇವರನ್ನು ರಾಜಸ್ಥಾನದ ಜೋಧ್ಪುರದ ಭಾರತೀಯ ಸೇನಾ ಕ್ಷೇಮ ಕೇಂದ್ರದಲ್ಲಿ ಇರಿಸಿಲಾಗಿದೆ.
ವಿಮಾನ ನಿಲ್ದಾಣದಲ್ಲಿ  ಪ್ರಯಾಣಿಕರನ್ನು ಪ್ರಾಥಮಿಕ  ತಪಾಸಣೆಗೆ ಒಳಪಡಿಸಿದ ನಂತರ  ಜೋಧ್ ಪುರದಲ್ಲಿ ಸೇನಾ  ನೆಲೆಯಲ್ಲಿ  ಸ್ಥಾಪಿಸಲಾಗಿರುವ  ಸೇನಾ ಕ್ಷೇಮಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ಕರ್ನಲ್ ಸಂಬಿತ್  ಘೋಷ್  ಮಾಹಿತಿ ನೀಡಿದ್ದಾರೆ.ನಾಲ್ವರು  ಮಕ್ಕಳು,      ಎರಡು ಶಿಶುಗಳು  ಸೇರಿದಂತೆ  ೧೩೩ ಮಹಿಳೆಯರು ಹಾಗೂ ೧೪೨ ಪುರುಷರು ಒಳಗೊಂಡ  ೨೭೫ ಪ್ರಯಾಣಿಕರನ್ನು ಇರಾನ್ ನಿಂದ ಭಾನುವಾರ     ಬೆಳಗ್ಗೆ  ಸ್ಥಳಾಂತರಗೊಳಿಸಲಾಗಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಮಸ್ತೆ ಕಾರ್ಯಾಚರಣೆ ಭಾಗವಾಗಿ ಸೇನಾ ಅಧಿಕಾರಿಗಳು  ಸೇನಾ ಕ್ಷೇಮ ಕೇಂದ್ರ ಸೌಲಭ್ಯಗಳನ್ನು ಸ್ಥಾಪಿಸಿದ್ದು, ಸ್ಥಳಾಂತರಗೊಂಡ ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸಲು ಸಂಪೂರ್ಣ ಸಜ್ಜುಗೊಳಿಸಲಾಗಿದೆ. ಕ್ಯಾರೆಂಟೈನ್ ಅವಧಿಯಲ್ಲಿ ಅವರಿಗೆ ಅಗತ್ಯವಾದ ವೈದ್ಯಕೀಯ ಮತ್ತು ಆಡಳಿತಾತ್ಮಕ ಬೆಂಬಲವನ್ನು ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ. ಕಳೆದ ಮಾರ್ಚ್ ೨೫ರಂದು  ಜೋಧ್ ಪುರಕ್ಕೆ  ಸ್ಥಳಾಂತರಗೊಳಿಸಲಾಗಿದ್ದ  ೨೭೭ ಮಂದಿಯನ್ನು ಇಲ್ಲಿಯೇ ಇರಿಸಿ, ಸೌಲಭ್ಯ ಕಲ್ಪಿಸಾಗಿತ್ತು. ಸೇನಾ ವೈದ್ಯಕೀಯ ತಂಡಗಳು  ಅವರ ಮೇಲೆ  ನಿಯಮಿತ  ನಿಗಾ ವಹಿಸಲಿವೆ ಕೊರೊನಾ  ವೈರಸ್ ಬಾಧಿತ  ಇರಾನ್‌ನಿಂದ    ತಮ್ಮನ್ನು  ಸ್ಥಳಾಂತರಗೊಳಸುವಲ್ಲಿ  ಭಾರತ ಸರ್ಕಾರ  ನಡೆಸಿರುವ  ಅವಿರತ  ಪ್ರಯತ್ನಗಳಿಗೆ       ಸ್ಥಳಾಂತರಿಗಳು  ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ದೆಹಲಿ ಮತ್ತು ಜೋಧ್ಪುರ ನಡುವೆ ವಿಶೇಷ ವಿಮಾನ ಹಾರಾಟ ನಡೆಸಲು ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್ಜೆಟ್ ವಿಮಾನವನ್ನು ನಿಯೋಜಿಸಲಾಗಿದೆ.     

ಜಗತ್ತಿನಾದ್ಯಂತ ಮನುಕುಲ ಸಂಕಷ್ಟದ ಬಿಕ್ಕಟ್ಟನ್ನು ಎದುರಿಸುತ್ತಿರುವ ಸವಾಲಿನ ಸಮಯದಲ್ಲಿ, ಕರೋನವೈರಸ್ ವಿರುದ್ಧದ  ಜಂಟಿ ಹೋರಾಟದಲ್ಲಿ ಭಾಗಿಯಾಗಿರುವುದಕ್ಕೆ ಸ್ಪೈಸ್ ಜೆಟ್ ಹೆಮ್ಮೆಪಡುತ್ತದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ. ಜಾಗತಿಕ ಸಾಂಕ್ರಾಮಿಕ ರೋಗದಿಂದ ಹೆಚ್ಚು ಬಾಧಿತವಾಗಿರುವ ದೇಶಗಳ ಪೈಕಿ ಇರಾನ್ ಒಂದಾಗಿದ್ದು ಶನಿವಾರ ಒಂದೇ ದಿನದಲ್ಲಿ ೧೩೯ ಜನರು ಕರೋನವೈರಸ್ನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ ೨,೫೧೭ ಕ್ಕೆ ಏರಿದೆ.ಕಳೆದ ೨೪ ತಾಸಿನಲ್ಲಿ ೩,೦೭೬ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕುಗಳ ಸಂಖ್ಯೆ ೩೫,೪೦೮ ಕ್ಕೆ ತಲುಪಿದೆ ಎಂದು ಇರಾನ್ ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನೌಶ್ ಜಹಾನ್ಪೂರ್ ತಿಳಿಸಿದ್ದಾರೆ.