ಜಮ್ಮುವಿನಲ್ಲಿ ಧಾರ್ಮಿಕ ಗುರುಪೂರಬ್ ಆಚರಣೆ

ಜಮ್ಮು, ನ 12  :       ಜಮ್ಮು  ಕಾಶ್ಮೀರದ ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ  ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ದೇವ್ ಜೀ ಅವರ 550ನೇ ಜನ್ಮ ದಿನಾಚರಣೆ ಅಂಗವಾಗಿ ಗುರುಪೂರಬ್ ಅನ್ನು ಧಾರ್ಮಿಕ ವಿಧಿವಿಧಾನ ಮತ್ತು ಭಕ್ತಿಯೊಂದಿಗೆ ಆಚರಿಸಲಾಯಿತು.    ಸಿಖ್ ಧರ್ಮದ ಸಮುದಾಯದ ಮಹಿಳೆಯರು, ಮಕ್ಕಳು ಮತ್ತಿತರರು ಬಣ್ಣ ಬಣ್ಣದ ಬಟ್ಟೆ ಧರಿಸಿ ಮುಂಜಾನೆಯೇ ಗುರುದ್ವಾರಗಳಿಗೆ ಭೇಟಿ ನೀಡಿ ವಿಶೇಷ ಪಾರ್ಥನೆ ಸಲ್ಲಿಸಿದರು.     ನಗರದ ಹೃದಯಭಾಗದಲ್ಲಿರುವ ಚಾಂದ್ ನಗರದಲ್ಲಿನ  ಗುರುನಾನಕ್ ಗುರುದ್ವಾರದಲ್ಲಿ ವಿಜೃಂಭಣೆಯ ಆಚರಣೆ ಆಯೋಜಿಸಲಾಗಿತ್ತು.  ಸಾವಿರಾರು ಸಿಖ್ಖರು ಆಚರಣೆಯಲ್ಲಿ ಪಾಲ್ಗೊಂಡರು. ಭಕ್ತರಿಗಾಗಿ ವಿಶೇಷ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿತ್ತು.     ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮಿ ಜನರಿಗೆ ಗುರುನಾನಕ್ ಜಯಂತಿಯ ಶುಭಾಷಯ ತಿಳಿಸಿದ್ದಾರೆ. ಶಾಂತಿ, ಸಹೋದರತೆಯನ್ನು ಸಾರುವ ಈ ಹಬ್ಬ ಸಮಾಜಕ್ಕೆ ಸಮೃದ್ಧಿಯನ್ನು ತರಲಿ. ಗುರು ನಾನಕ್ ಅವರ ಸಂದೇಶಗಳು ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಲಿ ಎಂದಿದ್ದಾರೆ.     ಈ ಸಂದರ್ಭದಲ್ಲಿ ಗುರುನಾನಕ್ ಅವರ ಕೀರ್ತನೆಗಳನ್ನು ಹಾಡಲಾಯಿತು.