ಲಾಂಛನ ಬಿಡುಗಡೆ, ವಣಕ್ಯಾಳರಿಂದ 1 ಲಕ್ಷ ಧನಸಹಾಯ ಸಮ್ಮೇಳನದ ಯಶಸ್ವಿಗೆ ಸಹಕಾರ ಮನೋಭಾವನೆ ಅಗತ್ಯ: ವಣಕ್ಯಾಳ

ಲೋಕದರ್ಶನ ವರದಿ

ತಾಳಿಕೋಟೆ 19:ಪಟ್ಟಣದಲ್ಲಿ ಇದೇ ದಿ. 28 ಹಾಗೂ 29 ಎರಡುದಿನಗಳ ಕಾಲ ನಡೆಯಲಿರುವ ವಿಜಯಪುರ ಜಿಲ್ಲಾ 16 ಕನ್ನಡ ಸಾಹಿತ್ಯ ಸಮ್ಮೇಳನವು ತಾಳಿಕೋಟೆ ಪಟ್ಟಣದಲ್ಲಿ ನಡೆಯಲು ಒದಗಿ ಬಂದಿರುವದು ತುಂಬಾ ಸಂತೋಷದಾಯಕ ಸಂಘತಿಯಾಗಿದೆ ಈ ಭುವನೇಶ್ವರಿಯ ರಥವನ್ನು ಅದ್ದೂರಿಯಾಗಿ ಎಳೆಯಲು ಎಲ್ಲರ ಸಹಕಾರ ಮನೋಭಾವನೆ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಬಸನಗೌಡ ವಣಕ್ಯಾಳ ಅವರು ನುಡಿದರು.

       ಕನ್ನಡ ಸಾಹಿತ್ಯ ಪರಿಷತ್ ತಾಳಿಕೋಟೆ ತಾಲೂಕಾ ಘಟಕದ ವತಿಯಿಂದ ಎಸ್.ಕೆ.ಪಧವಿ ಮಹಾವಿದ್ಯಾಲಯದ ಶ್ರೀ ವಿರಕ್ತಮಹಾಸ್ವಾಮಿಗಳ ಸಭಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕನ್ನಡ ನಾಡು ನುಡಿ ಕಟ್ಟುವಲ್ಲಿ ತಾಳಿಕೋಟೆಯ ಜನತೆ ಮೊದಲಿಗರೆನಿಸಿಕೊಂಡಿದ್ದಾರೆ ಈ ಹಿಂದೆ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಸಮ್ಮೇಳನದ ರೀತಿಯಲ್ಲಿನಡೆಸಿಕೊಟ್ಟ ಕೀತರ್ಿ ಈ ಭಾಗಕ್ಕೆ ಸೇರುತ್ತದೆ ಈ ಭಾಗದ ಪ್ರಜ್ಞಾವಂತರ, ವಿಚಾರವಂತರ ವೇದಿಕೆಯಲ್ಲಿ ನಡೆಯಲಿರುವ ಈ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯಮಟ್ಟದ ಸಮ್ಮೇಳನದ ರೀತಿಯಲ್ಲಿ ಕನ್ನಡ ಕಂಪು ಪಸರಿಸಲಿ ಎಂದು ಆಶಿಸಿದ ಅವರು ಈ ಸಮ್ಮೆಳನದ ಯಶಸ್ವಿಗೆ ತನು,ಮನ, ಧನ, ಈ ಮೂರು ಅತೀ ಮುಖ್ಯವಾಗಿ ಬೇಕಾಗುತ್ತದೆ ಈ ದೃಷ್ಠಿಕೋನದಿಂದ ಈಗಾಗಲೇ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅದಿಕಾರಿಗಳಿಗೆ ಜಿಪಂ ಸದಸ್ಯರು ಎಲ್ಲರೂ ಮನವಿ ಮಾಡಿಕೊಂಡಿದ್ದೇವೆ ಜಿಪಂ ವ್ಯಾಪ್ತಿಯಲ್ಲಿ ಬರುವ 28 ಇಲಾಖೆಗಳಿಗೆ ಆದೇಶವನ್ನು ನೀಡಿ ಧನಸಹಾಯವನ್ನು ಒದಗಿಸುವಂತಹ ಕಾರ್ಯ ಮಾಡಬೇಕೆಂದು ವಿನಂತಿಸಿದೇವೆ ಅವರು ಈ ಕಾರ್ಯವನ್ನು ಮಾಡುವದಾಗಿ ತಿಳಿಸಿದ್ದಾರೆಂದು ಹೇಳಿದ ಅವರು ಈ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಯಕ್ತಿಕವಾಗಿ 1 ಲಕ್ಷ ರೂ. ದೇಣಿಗೆಯನ್ನು ಘೋಷಿಸಿದರು.

ಕನ್ನಡ ಸಾಹಿತ್ಯ ಪರಿಷತ್ ವಲಯ ಅಧ್ಯಕ್ಷೆ ಸುಮಂಗಲಾ ಕೋಳೂರ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಈಗಾಗಲೇ ಅನೇಕ ಸಮಿತಿಗಳನ್ನು ರಚಿಸಲಾಗಿದೆ ಆಯಾ ಸಮಿತಿಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಯಶಸ್ವಿಯಾಗಿ ತಮ್ಮ ಕಾರ್ಯ ಕೆಲಸಗಳನ್ನು ಮಾಡಿದರೆ ಸಮ್ಮೇಳನ ಯಶಸ್ವಿಯಾಗಲು ಸಾಧ್ಯವಾಗುತ್ತದೆ ತಾಳಿಕೋಟೆಯ ಜನತೆ ಹೃದಯ ಶ್ರೀಮಂತಿಕೆಯ ಜನತೆಯಾಗಿದ್ದಾರೆ ಈ ಹಿಂದೆ ನಡೆದ ಸಮ್ಮೇಳನದ ಯಶಸ್ವಿಯ ಹಾದಿಯತ್ತಲ್ಲೇ ಈ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ರಾಜ್ಯಮಟ್ಟದ ವರೆಗೆ ಗುರುತಿಸಿಕೊಳ್ಳುವಂತಹ ಕಾರ್ಯವಾಗಬೇಕಿದೆ ಈ ಸಮ್ಮೇಳನದ ಯಶಸ್ವಿಗೆ ಧನ ಸಹಾಯವೇ ಕಡಿಮೆಯಾಗಿದೆ ಇದರಿಂದ ಆಂತಕದೊಂದಿಗೆ ಸಮ್ಮೇಳನದ ಪೂರ್ವ ತಯಾರಿಯಲ್ಲಿ ತೊಡಗಿದ್ದೇವೆ ಎರಡು ದಿನಗಳವರೆಗೆ ನಡೆಯುವ ಈ ಸಮ್ಮೇಳನದ ದಾಸೋಹ ವ್ಯವಸ್ಥೆಯನ್ನು ಶಾಸಕರಾದ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಹೊತ್ತುಕೊಂಡಿದ್ದಾರೆ ಇನ್ನೂ ದನ ಸಹಾಯದಲ್ಲಿ ಶಿಕ್ಷಕಕರುಗಳು ಮುಂದೆ ಬಂದಿದ್ದಾರೆ ಧನಸಹಾಯದ ಆತಂಕ ದೂರಮಾಡುವ ಶಕ್ತಿ ಆ ಭುವನೇಶ್ವರಿ ತಾಯಿ ನೀಡುತ್ತಾಳೆ ಎಂಬ ದೈರ್ಯದೊಂದಿಗೆ ಸಮ್ಮೇಳನದ ತಯಾರಿ ನಡೆಸಿದ್ದೇವೆ ಇನ್ನೂ ಕೇವಲ 9 ದಿನಗಳು ಭಾಕಿ ಉಳಿದಿದ್ದು ಸಮ್ಮೇಳನ ತಯಾರಿಯ ಕೆಲಸಗಳು ಬಹಳಷ್ಟು ಉಳಿದಿದ್ದು ಎಲ್ಲರೂ ಕೈಜೋಡಿಸುವಂತಹ ಕಾರ್ಯ ಮಾಡಿ ಕನ್ನಡದ ನುಡಿತೇರನ್ನು ವೈಭವಪೂರಿತವಾಗಿ ಜರುಗಿಸಿ ಐತಿಹಾಸಿಕ ಪುಟದಲ್ಲಿ ಉಳಿಯುವಂತೆ ಮಾಡೋಣವೆಂದರು.

ಕನ್ನಡ ಸಾಹಿತ್ಯ ಪರಿಷತ್ ಮುದ್ದೇಬಿಹಾಳ ಅಧ್ಯಕ್ಷ ಎಂ.ಬಿ.ನಾವದಗಿ ಮಾತನಾಡಿ ಸಮ್ಮೆಳನದ ಪೂರ್ವವಾಗಿ ಬಿಡುಗಡೆಗೊಂಡ ಲಾಂಚನವು ಸಮ್ಮೇಳನದ ದ್ಯೂತಕವಾಗಿದೆ ಈ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲ ನಾಗರಿಕರು ಸಹಕಾರ ನೀಡಿ ಕಾರ್ಯಕೆಲಸಗಳನ್ನು ಮಾಡುವದರೊಂದಿಗೆ ಯಶಸ್ವಿಗೊಳಿಸಬೇಕು ವಿಶೇಷವಾಗಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿ ಸಮಿತಿಯಲ್ಲಿ ಒಬ್ಬರಂತೆ ಕಾರ್ಯನಿರ್ವಹಿಸಿ ಸಮ್ಮೇಳನದ ಯಶಸ್ವಿಗೆ ಸಹಕರಿಸಬೇಕೆಂದರು. ಶಿಕ್ಷಕ ಅಪ್ಪಾಸಾಹೇಬ ಮೂಲಿಮನಿ ಅವರು ಲಾಂಚನದಲ್ಲಿ ಅಳವಡಿಸಲಾದ ತಾಳಿಕೋಟೆ ಐತಿಹಾಸಿಕ ನಗರಿಯ ಕೋಟೆಗೋಡೆಗಳ, ಈ ಭಾಗದ ಅನ್ನದಾತನ ಬಿತ್ತನೆಯ ಬಿಳಿಜೋಳದೊಂದಿಗೆ ವಿವಿಧ ತರಹದ ಬೆಳೆಗಳ ಹಾಗೂ ವಿಶ್ವವಿಖ್ಯಾತ ಗೋಳಗುಮ್ಮಟ ಒಳಗೊಂಡಂತೆ ತಯಾರಿಸಿದ ಲಾಂಚನದ ವಿವರಣೆಯನ್ನು ನೀಡಿದರು. ಪುರಸಭಾ ಅಧ್ಯಕ್ಷೆ ಶ್ರೀಮತಿ ಅಕಮಹಾದೇವಿ ಕಟ್ಟಿಮನಿ ಅವರು ಸಮ್ಮೇಳನದ ಲಾಂಚನವನ್ನು ಬಿಡುಗಡೆಗೊಳಿಸಿದರು. 

ಈ ಸಮಯದಲ್ಲಿ ಅಚ್ಚುಕಟ್ಟಾಗಿ ಸಮ್ಮೇಳನದ ಲಾಂಚನ ತಯಾರಿಸಿದ ಶಿಕ್ಷಕರ ಫಾರೂಕ್ಸರ್ ಹಾಗೂ ದೇವೆಂದ್ರ ಬಡಿಗೇರ ಅವರಿಗೆ ಕಸಾಪ ವತಿಯಿಂದ ಗೌರವಿಸಲಾಯಿತು ವೇದಿಕೆಯ ಮೇಲೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭುಗೌಡ ಮದರಕಲ್ಲ, ಅಶೋಕ ಬಳಗಾನೂರ, ಎಂ.ಎಸ್.ಸರಶೆಟ್ಟಿ, ದತ್ತು ಹೆಬಸೂರ, ಮೊದಲಾದವರು ಇದ್ದರು. ಶಿಕ್ಷಕ ಗುಂಡುರಾವ್ ಧನಪಾಲ ಸ್ವಾಗತಿಸಿದರು. ಶಿಕ್ಷಕ ಅಶೋಕ ಹಂಚಲಿ ನಿರೂಪಿಸಿದರು. ಶ್ರೀಕಾಂತ ಪತ್ತಾರ ವಂದಿಸಿದರು.