ಬಿಸಿಲಿನ ಬೆಗೆಯಿಂದ ಕಾಲುವೆ ಸ್ನಾನದತ್ತ ಯುವಕರು

Young people head to the canal to bathe in the hot sun

ಲೋಕದರ್ಶನ ವರದಿ 

ಬಿಸಿಲಿನ ಬೆಗೆಯಿಂದ ಕಾಲುವೆ ಸ್ನಾನದತ್ತ ಯುವಕರು 

ಕಂಪ್ಲಿ 02: ಬಿರು ಬಿಸಿಲಿನ ಪ್ರಖರತೆಗೆ ಭಸವಳಿದ ಮಕ್ಕಳು ಸುಡು ಬಿಸಿಲಿನಿಂದ ಪಾರಾಗಲು ನದಿ, ಕಾಲುವೆ, ವಿತರಣಾ ನಾಲೆಗಳಲ್ಲಿ ಈಜುತ್ತಿರುವುದು ಪಟ್ಟಣದ ವಿವಿಧ ಕಡೆಗಳಲ್ಲಿ ಕಂಡು ಬರುತ್ತಿದೆ. ಕಂಪ್ಲಿ ತಾಲ್ಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಅಧಿಕವಾಗುತ್ತಿದ್ದು, ಬಿಸಿಲಿನ ಪ್ರಖರತೆಗೆ ಸಾರ್ವಜನಿಕರು ಬಸವಳಿದಿದ್ದಾರೆ. ಹಿರಿಯರೇ ಬಿಸಿಲಿನ ತಾಪಕ್ಕೆ ಬಸವಳಿದಿದ್ದರೆ, ಇನ್ನು ಮಕ್ಕಳ ಪಾಡಂತೂ ಹೇಳತೀರದಾಗಿದೆ. ಇದೀಗ ಶಾಲೆಗಳಿಗೆ ಬಹುತೇಕ ರಜೆಯನ್ನು ನೀಡಿರುವುದರಿಂದ ಮಕ್ಕಳು ಮನೆಯಿಂದ ಹೊರಗಡೆ ಆಡಲು ತೆರಳುತ್ತಿದ್ದು, ಬಿಸಿಲಿನ ಝಳದಿಂದ ಪಾರಾಗಲು ಅಕ್ಕಪಕ್ಕದ ನದಿ,ನಾಲೆಗಳಲ್ಲಿ ಈಜುವ ಮೂಲಕ ತಮ್ಮ ಬಿಸಿಲ ಬೇಗೆಯಿಂದ ಪಾರಾಗಲು ಎಣಗಾಡುತ್ತಿದ್ದಾರೆ. ಕಂಪ್ಲಿ ಭಾಗದಲ್ಲಿ ವಿಜಯನಗರ ಕಾಲುವೆ, ತುಂಗಭದ್ರಾ ನದಿ, ಎಚ್‌.ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳು ಹಾಗೂ ಕೆರೆಗಳಿರುವುದರಿಂದ ಹಲವಾರು ಮಕ್ಕಳು ಗುಂಪು ಗೂಡಿಕೊಂಡು ಸಮೀಪದ ಕಾಲುವೆ, ಕೆರೆ, ನಾಲೆಗಳಿಗೆ ತೆರಳಿ ಮಧ್ಯಾಹ್ನದವರೆಗೂ ಈಜಾಡಿ ಮನೆ ಸೇರಿಕೊಳ್ಳುತ್ತಿದ್ದಾರೆ. ಏ.10ರೆವರೆಗೂ ಕಾಲುವೆಗಳಿಗೆ ನೀರು ಸಿಗುವುದರಿಂದ ಮಕ್ಕಳ ಬಿಸಿಲಿನ ಪ್ರಖರತೆಯನ್ನು ತಣಿಸಲು ಅನುಕೂಲವಾಗಲಿದೆ. ನೀರು ಸ್ಥಗಿತವಾಗಲಿದ್ದು, ಆಗ ಮಕ್ಕಳಿಗೆ ಈಜಾಡಲು ತುಂಗಭದ್ರಾ ನದಿಯೊಂದೇ ಆಧಾರವಾಗಲಿದೆ. ಆದರೂ ಮಕ್ಕಳು ಬಿಸಿಲಿನ ಪ್ರಖರತೆಯಿಂದ ಪಾರಾಗಲು ಕಾಲುವೆ, ನದಿ,ಕೆರೆ,ನಾಲೆಗಳಲ್ಲಿ ಈಜಾಡುವುದೇನೋ ಸರಿ,ಆದರೆ ಅಪಾವನ್ನು ತಂದುಕೊಳ್ಳದಿರಲಿ.