ಸಂಬಂಧ ಬೆಸೆಯುವ ವೇದಿಕೆ ಬಾದಾಮಿ ಬನಶಂಕರಿ ಜಾತ್ರೆ

ಸಿ.ಎಂ.ಜೋಶಿ 

ಗುಳೇದಗುಡ್ಡ:  ಇಂದಿನ ಡಿಜಿಟಲ್ ಯುಗದಲ್ಲಿ ಆನ್ಲೈನ್ ಮುಖಾಂತರ ಸಂಬಂಧಗಳಾಗುವುದನ್ನು ಕಾಣುತ್ತೇವೆ. ಅವು ಶಾಶ್ವತವಾಗಿ ಉಳಿಯದ ಇಂದಿನ ದಿನಗಳಲ್ಲಿ ಜಾತ್ರೆ ಮಾನವೀಯ ಸಂಬಂಧಗಳನ್ನು ಬೆಸೆಯುತ್ತದೆಂದರೆ ಆಶ್ವರ್ಯದ ಸಂಗತಿ. ಅಂಥದೊಂದು ಜಾತ್ರೆ ಉತ್ತರ ಕನರ್ಾಟಕದ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಕಾಣಸಿಗುತ್ತದೆ.ಅದುವೇ ಶ್ರೀ ಬನಶಂಕರಿ ಜಾತ್ರೆ. ತಾಯಿ ಶ್ರೀ ಬನಶಂಕರಿಯ ಸನ್ನಿಧಾನದಲ್ಲಿ ರಕ್ಷಣೆ, ನಂಬಿಕೆ ಮತ್ತು ವಿಶ್ವಾಸವಿದೆ. ವರ್ಷಕ್ಕೊಮ್ಮೆ ಬರುವ ಈ ಜಾತ್ರೆಯಲ್ಲಿ ಮನರಂಜನೆಯಷ್ಟೇ ಸಿಗದೇ ಮಾನವೀಯ ಸಂಬಂಧಗಳೂ ಬೆಸೆಯುತ್ತವೆಂದರೆ ತಪ್ಪಾಗದು.

    ಸಂಬಂಧ ಬೆಸೆಯುವ ವೈಶಿಷ್ಟ್ಯ : ಐತಿಹಾಸಿಕ ಪ್ರಾಚೀನತೆ ಪಡೆದಿರುವ ಈ ಜಾತ್ರೆಗೆ ರಾಜ್ಯದ ಹಾಗೂ ಹೊರ ರಾಜ್ಯುಗಳಿಂದ ಭಕ್ತ ಸಮೂಹವೇ ಬರುತ್ತದೆ. ನಿರಂತರ ಎಂದು ತಿಂಗಳವರೆಗೆ ಈ ಜಾತ್ರೆ ಜರುಗುತ್ತದೆ. ನೇಕಾರಿಕೆ ಕಸಬನ್ನು ಹೊಂದಿರುವ ಕುಟುಂಬಗಳು ಜಾತ್ರೆಗೆ ಒಂದು ದಿನ ಮುಂಚಿತವಾಗಿ ಬಂದು ದೇವಸ್ಥಾನದ ಸನ್ನಿಧಾನದಲ್ಲಿ ನಿದರ್ಿಷ್ಟ ಪಡಿಸಿದ ಜಾಗೆಗಳಲ್ಲಿ ಟೆಂಟ್( ತಾತ್ಕಾಲಿಕ ವಾಸಕ್ಕೆ ಗುಡಾರ್ದಿಂದ ನಿಮರ್ಿಸಿದ) ಗಳನ್ನು ಹಾಕಿ ಕೋಂಡು ಇರುವ ಪರಂಪರೆ ಬಹಳ ವರ್ಷಗಳ ಹಿಂದಿನಿಂದ ಬೆಳೆದು ಬಂದಿದೆ.ಕುಟುಂಬ ಸಮೇತರಾಗಿ ಬಂದು ಶ್ರೀ ಬನಶಂಕರಿ ಜಾತ್ರೆಯಲ್ಲಿ ಟೆಂಟ್ ಹಾಕಿಕೊಂಡು ಇರುತ್ತಾರೆ. 

    ಜಾತ್ರೆ ಯಂದಾಕ್ಷಣ ಮೋಜು ಮಸ್ತಿ, ಮನರಂಜನೆ, ವಸ್ತುಗಳ ಖರೀದಿ, ಧಾಮರ್ಿಕ ಭಾವನೆಗಳಂತಹ ಅಂಶಗಳನ್ನೇ ಹೆಚ್ಚಾಗಿ ಕಾಣುವ ನಾವು ಈ ಜಾತ್ರೆಯಲ್ಲಿ ಇವುಗಳನ್ನೂ ಮೀರಿ ಮಾನವೀಯ ಸಂಬಂಧಗಳನ್ನು ಬೆಸೆಯುವ ಮತ್ತು ಮುಂದುವರೆಸುವ ಪರಂಪರೆ ಮತ್ತು ವೈಶಿಷ್ಟ್ಯತೆಯನ್ನು ಹೊಂದಿದೆ.

 ಟೆಂಟುಗಳದೇ  ಜಾತ್ರೆ : ಈ ಜಾತ್ರೆಗೆ ಬರುವ ವಿವಿಧ ಕಡೆಗಳ ಭಕ್ತ ಕುಟುಂಬಗಳು ದೇವಸ್ಥನದ ಸುತ್ತಮುತ್ತ ಒಂದು ಕಿ.ಮೀ. ವರೆಗೂ ದೂರದ ವರೆಗೆ ಟೆಂಟ್ಗಳನ್ನು ಹಾಕುತ್ತಾರೆ.ಈ ಟೆಂಟೆಎ ಹಾಕುವಲ್ಲಿಯೂ ಒಂದು ವೈಶಿಷ್ಟ್ಯತೆ ಇದೆ. ಒಂದು ಊರಿನ ಟೆಂಟ್ಗಳ ಒಂದೇ ಕಡೆಗೆ ಹಾಕಲಾಗುತ್ತದೆ. 

 ಹೀಗೆ ಹಾಕಿದ ಟೆಂಟ್ಗಳ ಮಾಹಿತಿ ಉಳಿದ ಊರುಗಳ ಕುಟುಂಬದವರಿಗೂ ಮೊದಲೇ ತಿಳಿದಿರುತ್ತದೆ. ಟೆಂಟುಗಳಲ್ಲಿಯೇ ನಿತ್ಯ ಅಡುಗೆ ಸೇವಿಸುತ್ತ ಐದು ದಿನಕಾಲ ಕಳೆಯುತ್ತಾರೆ. ದೇವಿಯ ದರ್ಶನ, ರಥೋತ್ಸವ, ಅಗತ್ಯ ವಸ್ತುಗಳ ಖರೀದಿ ಇವುಗಳ ಜೊತೆಗೆ  ಹಳೆಯ ಹಾಗೂ ಹೊಸ  ಸಂಬಂಧಗಳ ಎಳೆಗಳೂ  ಬಿಚ್ಚಿಕೊಳ್ಳುತ್ತವೆ.

  ಸಂಬಂಧ ಬೆಸೆಯುವ ವೇದಿಕೆ : ಜಾತ್ರೆಯಲ್ಲಿ ಟೆಂಟುಗಳನ್ನು ಹಾಕಿಕೊಂಡಿರುವ ವಿವಿಧ ಕಡೆಗಳ ಭಕ್ತ ಕುಟುಂಬಗಳು ಹೆಚ್ಚಾಗಿ ದೇವಾಂಗಹಾಗೂ ಇತರೇ ಜಾತಿ ಸಮೂಹದವರಾಗಿದ್ದೂ ಅವರೆಲ್ಲ ಬಂಧುಗಳು ಇಲ್ಲವೇ ದೂರದ ಸಂಬಂಧಿಗಳೇ ಆಗಿರುತ್ತಾರೆ.

    ಜಾತ್ರೆಗೆ ಬರುವುದೆಂದರೆ ಇವರನ್ನು ಕಾಣುವ, ಒಟ್ಟಿಗೆ ಸೇರಿ ಜಾತ್ರೆ ಮಾಡುವ, ಪರಸ್ಪರ ಕಷ್ಟ,ಸುಖಗಳನ್ನು ಹಂಚಿಕೊಳ್ಳುವ, ಕುಲಗೋತ್ರದ ಮೆಚ್ಚಿದ ಹೊಸ ಮನಸುಗಳ ಸಂಬಂಧ ಬೆಸೆಯುವ ಎಳೆಗಳೂ ಇಲ್ಲಿ ಬಿಚ್ಚಿಕೊಳ್ಳುವುದಷ್ಟೇ ಅಲ್ಲದೇ ತಾಯಿಯ ಸನ್ನಿಧಾನದಲ್ಲಿ ಗಟ್ಟಿಗೊಳ್ಳುತ್ತವೆ.

 ಬಾಳ ಸಂಗಾತಿಗೆ ಶ್ರೀ ಬನಶಂಕರಿ ಶ್ರೀರಕ್ಷೆ: ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ವಧು, ವರರ ಅನ್ವೇಷಣೆಯೂ ನಡೆಯುತ್ತದೆ. ವಿವಿಧ ಊರುಗಳಿಂದ ಜಾತ್ರೆಗೆ ಬಂದ ಜಾತಿ ಸಮೂಹದ ಬಂಧು, ಬಾಂಧವರ ಟೆಂಟ್ಗಳಿಗೆ ನಿತ್ಯ ಹೋಗೀಬಂದು ವಧು,ವರರ ಹುಡುಕಾಟ, ಚಚರ್ೆ ಇತ್ಯಾದಿಗಳನ್ನೂ ಮಾಡುತ್ತಾರೆ.

 ಮನಸ್ಸಿಗೆ ಬಂದ ವರ ಅಥವಾ ವಧುವಿನ ಜಾತಕ ಪರಸ್ಪರ ಪಡೆದು ಜಾತ್ರೆ ನಂತರ ಮನೆತನ ನೋಡಲು ಬರುವುದಾಗಿ ನಿಶ್ವಯಿಸುತ್ತಾರೆ. 

  ಕೆಲ ಸಂದರ್ಭಗಳಲ್ಲಿ ಹತ್ತಿದ ಬಂಧುಗಳಿದ್ದರೆ ಅಥವಾ ಬೀಗಸ್ತನ ಒಪ್ಪಿಗೆಯಾದರೇ ಜಾತ್ರೆ ಯಲ್ಲೇ ಹಿರಿಯರು ಸೇರಿ  ಮಾತುಕತೆ ಮುಗಿಸುವುದೂ ಉಂಟು. ಜಾತ್ರೆಯ ದೇವಿಯ ಸನ್ನಿಧಾನದಲ್ಲಿ ಬೆಸೆಯುವ ಸಂಬಂಧಗಳು ಜೀವನ ಪರ್ಯಂತ ನೂರುಕಾಲ ಸುಖಕರವಾಗಿ ಬೆಸೆದಿರುತ್ತವೆಂಬುದು ಭಕ್ತರ ನಂಬಿಕೆ.

  ಕೌಟುಂಬಿಕ ಹಾಗಚಿಚಿೂ ವ್ಯಾವಹಾರಿಕ ವ್ಯಾಜ್ಯ ನಿವಾರಣಾ ವೇದಿಕೆ:  ಕಾನೂನಿಗಿಂತ ದೈವಬಲವೇ ಶ್ರೇಷ್ಠವೆಂದು ನಂಬಿರುವ ಭಕ್ತ ಸಮೂಹ ತಮ್ಮ ವಿವಿಧ ವಿಷಯಗಳ ಹಿಂದಿನ ವ್ಯಾಜ್ಯಗಳಿದ್ದರೆ ಅವುಗಳಿಗೆ  ನಿವರಣೆ ಇಲ್ಲಿಯೇ ಹುಡುಕುತ್ತಾರೆ.  

ಕೋಟರ್್ ಮೆಟ್ಟಿಲೇರಿದ ದಾಂಪತ್ಯದ ವಿರಸಗಳು, ವೈವಾಹಿಕ ಜೀವನದ ಭಿನ್ನಾಭಿಪ್ರಾಯಗಳೇನಾದೂ ಇದ್ದರೆ ಟೆಂಟ್ಗಳಲ್ಲಿ  ಹಿರಿಯರೆಲ್ಲ ಸೇರಿ ತಾಯಿಯ ಪ್ರಮಾಣ ಮಾಡಿಸಿ ಇತ್ಯರ್ಥಪಡಿಸುವ,      ಒಂದು ತಿಂಗಳ ಪರ್ಯಂತ ಜರುಗುವ ಬಾದಾಮಿ ಬನಶಂಕರಿ ದೇವಿಯ ಜಾತ್ರೆಗೆ  ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಶಕ್ತಿಯಿದೆ ಎಂದು ನಂಬಿರುವ ಲಕ್ಷಾಂತರ ಭಕ್ತರಿಗೆ ಒಂದು ವಿಶಿಷ್ಟವಾದ ವೇದಿಕೆಯಾಗಿ ಪ್ರತಿವರ್ಷ ಕಂಡು ಬರುತ್ತಿದೆ. ಇದು ಸಂಬಂಧ ಬೆಸೆಯುವ ಜಾತ್ರೆಯಂತಲೂ ಕರೆಯಿಸಿಕೊಂಡಿದೆ.