ಲೋಕದರ್ಶನ ವರದಿ
ವಿಜಯಪುರ 01:ಸರ್ಕಾರೇತರ ಸ್ವಯಂ ಸಂಸ್ಥೆಗಳು ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವುದು ಒಂದೆಡೆಯಾದರೆ, ಸಮಾಜದಿಂದ ಆ ಸಂಸ್ಥೆಗಳ ಗುರುತಿಸುವಿಕೆ ಆಗುತಿದೆಯೇ ಎಂದು ಅವಲೋಕಿಸಬೇಕಿದೆ. ಏಕೆಂದರೆಸರ್ಕಾರೇತರ ಸಂಸ್ಥೆಗಳು ಕೇವಲ ಸನ್ಮಾನ, ಪದಕ ಮತ್ತು ಪ್ರಶಸ್ತಿಗಳಿಗೆ ಸೀಮಿತವಾಗುತ್ತಿರುವುದು ವಿಷಾದನೀಯ ಎಂದು ಮೈಸೂರಿನ ಖ್ಯಾತ ನ್ಯಾಯವಾದಿ ಸುಮನಾ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದಲ್ಲಿ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ ನಿ. ಹಾಗೂ ಬೆಂಗಳೂರಿನ ರಾಜ್ಯ ನಗರ ಮತ್ತು ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ(ರಿ) ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನದ 'ಸ್ವಯಂ ಸೇವಾ ಸಂಸ್ಥೆಗಳ ಮಹಿಳಾ ಮುಖ್ಯಸ್ಥರ ರಾಜ್ಯ ಮಟ್ಟದ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುವುದು ಸಕರ್ಾರೇತರ ಸಂಸ್ಥೆಗಳ ಗುರಿಯಾಗಬೇಕು. ಇಂತಹ ಸಮಾವೇಶದಿಂದ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಮಾತನಾಡಿ, ಪದವಿ ಪಡೆಯುವ ವಿದ್ಯಾರ್ಥಿನಿಯರು ಮಾತ್ರವಲ್ಲದೇ ಎಲ್ಲ ವಯೋಮಾನದ, ಎಲ್ಲ ಸ್ತರದ, ಎಲ್ಲ ಸಮುದಾಯದ ಹೆಣ್ಣು ಮಕ್ಕಳು ವಿವಿಯ ಆವರಣದೊಳಗೆ ಬರಬೇಕು, ಪರಸ್ಪರ ಮಾತನಾಡಬೇಕು ಮತ್ತು ಪರಸ್ಪರ ತಿಳಿದುಕೊಳ್ಳಬೇಕು ಎಂಬುದು ನಮ್ಮ ವಿಶ್ವವಿದ್ಯಾನಿಲಯದ ಧ್ಯೇಯ ಮತ್ತು ಆಶಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜಕ ಪ್ರೊ.ಎಸ್.ಎ.ಖಾಜಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾಥರ್ಿನಿಯರು ಹೊರತಂದ ಮಹಿಳಾಧ್ವನಿ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆರ್ಥಿಕ ಅಧಿಕಾರಿ ಪ್ರೊ.ಎಸ್.ಬಿ.ಮಾಡಗಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ, ಪ್ರೊ.ಭೂಮಿಗೌಡ, ಸಮಾಜಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರಮೇಶ ಸೋನಕಾಂಬಳೆ, ಸಬಲಾ ಸಂಸ್ಥೆ, ಪವಾರ ಸಂಸ್ಥೆ, ವಿಶಾಲ ಸಂಸ್ಥೆ, ಶ್ರೀಧರ ಸ್ವಾಮಿ ವಿದ್ಯಾವರ್ಧಕ ಸಂಸ್ಥೆ, ಐ.ಆರ್.ಡಿ ಸಂಸ್ಥೆ, ಅಶ್ವಿನಿ ಸಂಸ್ಥೆ ಹಾಗೂ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥೆಯರು, ಸದಸ್ಯೆಯರು, ವಿಶ್ವವಿದ್ಯಾನಿಲಯದ ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾಥರ್ಿನಿಯರು ಮಹಿಳಾ ಗೀತೆ ಹಾಡಿದರು. ನಗರದ ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ್ನ ರಾಜ್ಯ ಸಂಚಾಲಕಿ ಮತ್ತು ಅಧ್ಯಕ್ಷೆ ಡಾ.ಮಲ್ಲಮ್ಮ ಯಾಳವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳಾ ವಿವಿ ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಸ್ವಾಗತಿಸಿದರು. ಸಮಾಜಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಕಲಾವತಿ ಕಾಂಬಳೆ ನಿರೂಪಿಸಿದರು. ಬೆಂಗಳೂರು ಫೆವಾರ್ಡ-ಕೆ ಅಧ್ಯಕ್ಷ ಆಂಜನೇಯ ರೆಡ್ಡಿ ವಂದಿಸಿದರು.